ಜೂ.30  ರಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ‌ ಜಿಲ್ಲಾ ಘಟಕದಿಂದ ಪ್ರತಿಭಾ ಪುರಸ್ಕಾರ ಹಾಗೂ ವಿಪ್ರಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ:
                                                           ವಿದ್ಯಾ ನಿಧಿ ಯೋಜನೆ ಮೂಲಕ ಬಡ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ- ಡಿ.ಕೆ.ಮುರಳೀಧರ



ರಾಯಚೂರು,ಜೂ.29-ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಜೂನ್ 30ರಂದು ಬೆಳಿಗ್ಗೆ 10ಕ್ಕೆ ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಪ್ರತಿಭಾ ಪುರಸ್ಕಾರ, ವಿಪ್ರಶ್ರೀ ಪ್ರಶಸ್ತಿ ಪ್ರದಾನ ಹಾಗೂ ವಿದ್ಯಾನಿಧಿ ವಿತರಣಾ ಸಮಾರಂಭ ಆಯೋಜಿಸಲಾಗಿದೆ ಎಂದು ಎಕೆಬಿಎಂಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಕೆ ಮುರಳೀಧರ್ ಹೇಳಿದರು.




ಬ್ರಾಹ್ಮಣ ಸಮಾಜದ ಎಸ್ಎಸ್ ಎಲ್ ಸಿ, ಪಿಯುಸಿಯಲ್ಲಿ ಶೇ.80 ರ ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬೆಳ್ಳಿ ಪದಕ ನೀಡಿ ಸನ್ಮಾನಿಸಲಾಗುತ್ತಿದ್ದು. ಇದೇ ವೇಳೆ ಸಮಾಜದ ಬಡ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಯೋಜನೆಯಡಿಯಲ್ಲಿ ವಿದ್ಯಾರ್ಥಿವೇತನ ನೀಡಲಾಗುವುದು. ಈ ಬಾರಿಯ ‘ವಿಪ್ರಶ್ರೀ’ ಪ್ರಶಸ್ತಿಯನ್ನು ಡಾ.ವಿ.ಜಿ ಕುಲಕರ್ಣಿ ಹಾಗೂ ದಾಸ ಸಾಹಿತಿ ತ್ರಿವೇಣಿಬಾಯಿ ಆಶ್ರಿತ್ ಅವರಿಗೆ ನೀಡಲು ತೀರ್ಮಾನಿಸಲಾಗಿದೆ ಎಂದು   ತಿಳಿಸಿದರು.




ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಅಶೋಕ ಹಾರನಹಳ್ಳಿ ಉದ್ಘಾಟಿಸಲಿದ್ದು, ವಿದ್ಯಾನಿಧಿಯೋಜನೆ ಉದ್ಘಾಟನೆಯನ್ನು ಸಚಿವ ಎನ್.ಎಸ್. ಬೋಸರಾಜು ಅವರು ಮಾಡಲಿದ್ದಾರೆ. ಮುಖ್ಯ ಅಥಿತಿಗಳಾಗಿ ಸಂಸದ ಜಿ. ಕುಮಾರನಾಯಕ್, ಶಾಸಕರಾದ ಡಾ. ಶಿವರಾಜ ಪಾಟೀಲ, ಬಸನಗೌಡ ದದ್ದಲ್, ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ, ಬೆಂಗಳೂರಿನ ಖ್ಯಾತ ಆಧ್ಯಾತ್ಮಕ ಚಿಂತಕಿ ವೀಣಾ ಬನ್ನಂಜೆ ಸೇರಿದಂತೆ ಅನೇಕ ಗಣ್ಯರು ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ ಎಂದರು.


ಈ ಸಂದರ್ಭದಲ್ಲಿ ನರಸಿಂಗರಾವ್ ದೇಶಪಾಂಡೆ, ರಾಘವೇಂದ್ರ ಚೂಡಾಮಣಿ, ವೇಣುಗೋಪಾಲ್ ಇನಾಂದಾರ್, ಪ್ರಹ್ಲಾದ್ ರಾವ್ ಕಲ್ಮಲಾ  ವಕೀಲ, ರಮೇಶ್ ಕುಲಕರ್ಣಿ, ವೆಂಕಟೇಶ್ ಕೋಲಾರ, ,ರಾಮರಾವ್ ಕುಲಕರ್ಣಿ, ಜಯಕುಮಾರ್ ಗಬ್ಬೂರು,  ಹನುಮೇಶ ಸರಾಫ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ