ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕದಿಂದ  ಪ್ರತಿಭಾ ಪುರಸ್ಕಾರ, ವಿಪ್ರಶ್ರೀ ಪ್ರಶಸ್ತಿ ಪ್ರದಾನ ಹಾಗೂ ವಿದ್ಯಾನಿಧಿ ವಿತರಣಾ ಕಾರ್ಯಕ್ರಮ ಉದ್ಘಾಟನೆ: ದೇಶದ ಅಭಿವೃದ್ಧಿಗೆ ಬ್ರಾಹ್ಮಣ ಸಮಾಜದ  ಕೊಡುಗೆ ಅಪಾರ -ಎ.ವಸಂತಕುಮಾರ 

ರಾಯಚೂರು,ಜೂ.30- ದೇಶದ ಅಭಿವೃದ್ಧಿಗೆ ಬ್ರಾಹ್ಮಣ ಸಮಾಜ ಅಪಾರ ಕೊಡುಗೆಯನ್ನು ನೀಡಿದೆ ಎಂದು ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಅವರಿಂದು ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾನುವಾರ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಘಟಕದಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ, ವಿಪ್ರಶ್ರೀ ಪ್ರಶಸ್ತಿ ಪ್ರದಾನ ಹಾಗೂ ವಿದ್ಯಾನಿಧಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ದೇಶದಲ್ಲಿ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಸಮಾಜದವಾಗಿದೆ. ಆದರೂ ಎಲ್ಲ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದ್ದಾರೆ ಎಂದ ಅವರು ದೇವರಿಗೆ ಸಮೀಪ ಇರುವ ಬ್ರಾಹ್ಮಣ ಸಮಾಜವಾಗಿದೆ ಎಂದರು. ಸಮಾಜದಲ್ಲಿ ಬ್ರಾಹ್ಮಣ ಸಮಾಜ ಉನ್ನತ ಸ್ಥಾನ ಹೊಂದಿದೆ. ದೇಶದಲ್ಲಿ ಅನೇಕ ಉನ್ನತ ಮಟ್ಟದಲ್ಲಿ ಬ್ರಾಹ್ಮಣ ಸಮಾಜದವರೇ ಹೆಚ್ಚಾಗಿ ಕಂಡುಬರುತ್ತಾರೆ  ಒಂದು ಸುಸಂಸ್ಕೃತವಾಗಿರುವ ಸಮಾಜವಾಗಿದೆ ಎಂದು ಹೇಳಿದರು.

ದೇಶದ ಅಭಿವೃದ್ಧಿಗಾಗಿ ನೇರವಾಗಿ ಭಾಗಿಯಾಗದೇ ಇದ್ದರೂ ಪರೋಕ್ಷವಾಗಿ ಸಮಾಜದ ಪಾಲು ಇರುತ್ತದೆ. ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವುದು ಅವಶ್ಯಕವಾಗಿರುವುದಿಲ್ಲ ಅವರು ಹುಟ್ಟಿನಿಂದಲೇ ಪ್ರತಿಭಾನ್ವಿತರಾಗಿರುತ್ತಾರೆ. ಸಮಾಜದ ಮಕ್ಕಳಿಗೆ ಶಿಕ್ಷಣದಲ್ಲಿ ಹೆಚ್ಚು ಪೋತ್ಸಾಹಿಸುವ ನಿಟ್ಟಿನಲ್ಲಿ ಸಮಾಜದವು ಪ್ರತಿಭಾ ಪುರಸ್ಕಾರ ಪ್ರದಾನ ಮಾಡುವ ಮೂಲಕ ಸಮಾಜದ ಅಭಿವೃದ್ಧಿ ಹಾಗೂ ಸಂಘಟನೆಗೆ ಮುಂದಾಗಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.


ನಾನು ಸೇರಿದಂತೆ ಎಲ್ಲ ಸಮಾಜದವರೊಂದಿಗೆ ಉತ್ತಮ ಒಡನಾಟವನ್ನು ಹೊಂದಿರುವಂಥ ಬ್ರಾಹ್ಮಣ ಸಮಾಜವಾಗಿದೆ. ಸಮಾಜವು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಯುವಕರು ಇದರ ಸದುಪಯೋಗ ಪಡೆದುಕೊಂಡು ಸಮಾಜದಲ್ಲಿ ಗುರುತಿಸುವಂಥ ನಿಟ್ಟಿನಲ್ಲಿ ಸಾಧನೆ ಮಾಡಬೇಕು ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಪ್ರಧಾನ ಸಂಚಾಲಕ ಡಿ.ಕೆ ಮುರಳೀಧರ ಅವರು, ಪ್ರತಿವರ್ಷವೂ ಸಮಾಜದಿಂದ ನಡೆಸುತ್ತಿರುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪುರಸ್ಕಾರ ಸ್ವೀಕರಿಸುವ ವಿದ್ಯಾರ್ಥಿಗಳ ಪ್ರಮಾಣವೂ ಇಳಿಮುಖವಾಗುತ್ತಿದೆ. ಇದಕ್ಕೆ ಕಾರಣ ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಶಿಕ್ಷಣ ಪೋತ್ಸಾಹಿಸುವ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಮಾಜದಿಂದ ತರಬೇತಿ ನೀಡುವ ಚಿಂತನೆ ನಡೆಸಲಾಗುತ್ತಿದೆ. ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ಪ್ರೋತ್ಸಾಹಿಸುವಂಥ ಮನೋಭಾವನೆ ಸಮಾಜದ ಪ್ರತಿಯೊಬ್ಬರಲ್ಲಿ ಬಂದಾಗ ಮಾತ್ರ ಸಮಾಜದ ಸಂಘಟನೆಯಾಗಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರು ಸಮಾಜದ ಅಭಿವೃದ್ಧಿ ಮುಂದಾಗಬೇಕು ಎಂದು ಮನವಿ ಮಾಡಿದರು.                                                             ವಿಪ್ರ ಶ್ರೀ ಪ್ರಶಸ್ತಿ ಪ್ರದಾನ :ನಗರದ ಖ್ಯಾತ ವೈದ್ಯರಾದ ಡಾ.ವಿ.ಜಿ ಕುಲಕರ್ಣಿ ಹಾಗೂ ಲಿಂಗಸುಗೂರಿನ ಶ್ರೀಮತಿ ತ್ರಿವೇಣಿಬಾಯಿ ಆಶ್ರಿತ್ ಅವರಿಗೆ ವಿಪ್ರಶ್ರೀ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.ಹನುಮೇಶ ಸರಾಫ್, ವೆಂಕಟರಾವ್ , ಪ್ರಹ್ಲಾದ್  ರಾವ್ ಕಲ್ಮಲಾ ಇವರಿಗೆ ವಿಶಿಷ್ಟ ಸಾಧನಾ ಸನ್ಮಾನ ನೆರವೇರಿತು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಆಧ್ಯಾತ್ಮಿಕ ಚಿಂತಕರಾದ ವೀಣಾ ಬನ್ನಂಜೆ, ಹಿರಿಯ ರಾಜ್ಯ ಪರಿಷತ್‌ನ ಸದಸ್ಯ ನರಸಿಂಗರಾವ್ ದೇಶಪಾಂಡೆ, ಮಹಾಸಭಾದ ರಾಜ್ಯ ಉಪಾಧ್ಯಕ್ಷ ಡಾ.ಆನಂದ ತೀರ್ಥ ಫಡ್ನೀಸ್,  ರಾಘವೇಂದ್ರ ಚೂಡಾಮಣಿ,ರಾಜ್ಯ ಸಮಿತಿ ಸದಸ್ಯ ಅರವಿಂದ ಕುಲಕರ್ಣಿ, ಗಿರೀಶ ಕನಕವೀಡು, ಪ್ರಹ್ಲಾದ್‌ರಾವ್ ಕುಲಕರ್ಣಿ, ರಾಘವೇಂದ್ರರಾವ್ ವಕೀಲ ಕಲ್ಮಲಾ, ಪದಾಧಿಕಾರಿಗಳಾದ ರಾಮರಾವ್ ಕುಲಕರ್ಣಿ ಗಣೇಕಲ್, ರಮೇಶ ಕುಲಕರ್ಣಿ, ವೆಂಕಟೇಶ ಕೋಲಾರ, ವೇಣುಗೋಪಾಲ ಇನಾಂದಾರ್,  ಮಹಿಳಾ ಘಟಕದ ಪ್ರಧಾನ ಸಂಚಾಲಕರಾದ ರೇಖಾ ಡಿ.ಕೆ, ರಾಜ್ಯ ಯುವ ಘಟಕದ ಸಹ ಸಂಚಾಲಕ ಅನಿಲಕುಮಾರ ಗಾರಲದಿನ್ನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 



Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್