ಕೇಂದ್ರ ಮಂತ್ರಿಗಳಾದ ಹೆಚ್ ಡಿ ಕೆ ಯಿಂದ  ತರಾತುರಿಯಲ್ಲಿ ಅನುಮತಿ ಏಕೆ:                                                 ರಾಜ್ಯದ ಎರೆಡು ಗಣಿ ಕಂಪನಿಗಳಿಗೆ ಅನುಮತಿ ನೀಡಬಾರದು- ಎಸ್.ಆರ್.ಹಿರೇಮಠ        ರಾಯಚೂರು,ಜೂ.22- ರಾಜ್ಯದಲ್ಲಿರುವ ಎರೆಡು ವಿವಾದಿತ ಗಣಿ ಕಂಪನಿಗಳಾದ ಕೆಐಓಸಿಎಲ್ ಮತ್ತು ವಿಐಎಸ್ಎಲ್ ಗೆ ಕೇಂದ್ರ ಮಂತ್ರಿಗಳಾದ ತತಕ್ಷಣ ತರಾತುರಿಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅನುಮತಿ ನೀಡಿರುವುದು ಏಕೆ ಎಂದು ಸಮಾಜ ಪರಿವರ್ತನಾ ಸಮುದಾಯದ ಸ್ಥಾಪಕ ಅಧ್ಯಕ್ಷ ಎಸ್.ಆರ್.ಹಿರೇಮಠ ಪ್ರಶ್ನಿಸಿದರು.

ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜ್ಯದಲ್ಲಿರುವ ಜೀವ ವೈವಿಧ್ಯ ನಾಶ ಪಡಿಸಿ ಗಣಿಗಾರಿಕೆ ಮಾಡುವುದು ಎಷ್ಟು ಸರಿ ಎಂದ ಅವರು ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ‌ ಮಂತ್ರಿಗಳು ತರಾತುರಿಯಲ್ಲಿ ಏಕೆ ನಿರ್ಧಾರ ಮಾಡಿದ್ದಾರೆಂಬುದು ತಿಳಿಯುತ್ತಿಲ್ಲ ಅವರು ಯಾವ ಆಸೆ ಆಮೀಷಗಳಿಗೆ ಮಣಿದು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬುದು ತಿಳಿಯುತ್ತಿಲ್ಲ ವೆಂದರು ಸಿಎಂ ಸಿದ್ದರಾಮಯ್ಯ ತಾವು ಈ ಬಗ್ಗೆ ಅಂತಿಮ ನಿರ್ಣಯ ಕೈಗೊಂಡಿಲ್ಲವೆಂದು ಹೇಳಿದ್ದು ಆಶಾಭಾವನೆ ಮೂಡಿಸಿದ್ದು ರಾಜ್ಯದ ಜನರ ಆರೋಗ್ಯ ಮತ್ತು ಸಸ್ಯ ಪ್ರಾಣಿ ಸಂಪತ್ತು ರಕ್ಷಣೆ ಅತ್ಯವಶಕವಾಗಿದೆ ಎಂದರು. ನಟ  ದರ್ಶನ್ ತಪ್ಪಿತಸ್ಥರಾಗಿದ್ದರೆ ಕಾನೂನು ತನ್ನ ಕ್ರಮ ಕೈಗೊಳ್ಳಲೇ ಬೇಕೆಂದ ಅವರು ದರ್ಶನ್ ಅಭಿಮಾನಿಗಳು ಹುಚ್ಚು ಅಭಿಮಾನ ವ್ಯಕ್ತಪಡಿಸದೆ ಕಾನೂನಿಗೆ ಗೌರವ ನೀಡಬೇಕೆಂದ ಅವರು ರಾಜ್ಯ ಸರ್ಕಾರದ ಸಚಿವರು ಯಾರು ಸಹ ಒತ್ತಡ ಹೇರದೆ ನಿಷ್ಪಕ್ಷಪಾತ ತನಿಖೆಗೆ ಸಹಕರಿಸಬೇಕೆಂದರು. ಈ ಸಂದರ್ಭದಲ್ಲಿ ಖಾಜಾ ಅಸ್ಲಾಂ, ಜಾನ್ ವೆಸ್ಲಿ, ಭೀಮರಾಯ ಜರದಬಂಡಿ ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ