ರಿಮ್ಸ್ ನಲ್ಲಿ ಬೈಲಾ ನಿಯಮ ಪಾಲಿಸದೆ ನೇಮಕಾತಿ  ಹಾಗೂ ಭ್ರಷ್ಟಾಚಾರ- ರಾಜು ಪಟ್ಟಿ.                       ರಾಯಚೂರು,ಜೂ.19- ರಾಯಚೂರು ವೈದ್ಯಕೀಯ ವಿಜ್ಞಾನ ಕೇಂದ್ರದಲ್ಲಿ ಬೈಲಾ ನಿಯಮ ಪಾಲಿಸುತ್ತಿಲ್ಲ ಹಾಗೂ ಭ್ರಷ್ಟಾಚಾರ ನಡೆಯುತ್ತಿದೆ ಎಂದು ದಲಿತ ಸಂಘರ್ಷ ಸಮಿತಿ ಭೀಮವಾದ ಜಿಲ್ಲಾ ಅಧ್ಯಕ್ಷ ರಾಜು ಪಟ್ಟಿ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಿಮ್ಸ್ ನಲ್ಲಿ ಅಲ್ಲಾ ಬಕ್ಷ ಎಂಬ ಸಿಎಂಓ ಅಧಿಕಾರಿ ಉನ್ನತ ವ್ಯಾಸಂಗಕ್ಕಾಗಿ ಪೂರ್ವಾನುಮತಿಯಿಲ್ಲದೆ ತೆರಳಿರುತ್ತಾರೆ  ಮೂರು ವರ್ಷ ನಂತರ ಅವರನ್ನು ಮರಳಿ ಅದೆ ಹುದ್ದೆಯಲ್ಲಿ ಅಂದಿನ ನಿರ್ದೆಶಕ ಬಸವರಾಜ ಪೀರಾಪೂರು ಮುಂದೆವರಿಸಿರುತ್ತಾರೆ ಎಂದರು.

ಶಾಮಣ್ಣ ಮಾಚನೂರು ರವರನ್ನು ಸ್ಥಾನಿಕ ವೈದ್ಯಾಧಿಕಾರಿಯಾಗಿ ನೇಮಿಸಲಾಗಿದ್ದು ಕಾನೂನು ಬಾಹಿರ ಏಕೆಂದರೆ ಸರ್ಕಾರ ಈ ಹುದ್ದೆ ಸೃಜನೆ ಮಾಡಿರುವುದಿಲ್ಲವೆಂದ ಅವರು ವೈದ್ಯಕೀಯ ಅಧೀಕ್ಷಕ ಹುದ್ದೆಗೆ ಬಿಡಿಎಸ್ ಅಮರ್ ವರ್ಮಾ ನೇಮಿಸಲಾಗಿದ್ದು ಇದು ಸಹ ನಿಯಮಾವಳಿ  ಉಲ್ಲಂಘನೆ ಎಂದು ದೂರಿದರು.ಎಸ್ಟೇಟ್ ಅಧಿಕಾರಿಯನ್ನಾಗಿ ಬಸವರಾಜ್ .ಎಂ ಎಂಬುವ ರನ್ನು ನೇಮಕ ಮಾಡಿಕೊಂಡಿರುತ್ತಾರೆ ಅದು ಕಾನೂನು ಬಾಹಿರ ಏಕೆಂದರೆ ಈ ಹುದ್ದೆಗೆ ಲೋಕೋಪಯೋಗಿ ಇಲಾಖೆಯಲ್ಲಿ ಕನಿಷ್ಟ ಹತ್ತು ವರ್ಷ ಸೇವೆ ಗೈದು ನಿವೃತ್ತರಾದವರು ಅರ್ಹರು ಆದರೆ ವಿದ್ಯಾರ್ಹತೆಯ ಇಲ್ಲದವರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ ಅವರು ರಿಮ್ಸ್ ರಕ್ತ ನಿಧಿಯಲ್ಲಿ ಖಾಸಗಿ ಆಸ್ಪತ್ರೆಯ ರೋಗಿಗೆ ಉಚಿತವಾಗಿ ರಕ್ತ ಮರು ಪಡೆಯದೆ ಅಂದಿನ ಆಡಳಿತಾಧಿಕಾರಿ ಗುರು ಸಿದ್ದಯ್ಯ ಸಂಬಂಧಿ ಎಂಬ ಕಾರಣಕ್ಕೆ ವೈದ್ಯಕೀಯ ಅಧೀಕ್ಷಕ ಭಾಸ್ಕರ್ ರಕ್ತ ನೀಡಿದ್ದು ರಕ್ತ ನಿಧಿ ನಿಯಮ ಉಲ್ಲಂಘನೆ ಎಂದ ಅವರು ರಿಮ್ಸ್ ನಲ್ಲಿ ಮಧ್ಯಾಹ್ನದ ನಂತರ ವೈದ್ಯರು ಲಭ್ಯವಿರುವುದಿಲ್ಲ ಕಾರಣ ತಮ್ಮ ಖಾಸಗಿ ಆಸ್ಪತ್ರೆಗೆ ತೆರಳುವ ಧಾವಂತದಲ್ಲಿ ಬೇಗನೆ ಹೊರಡುವುದರಿಂದ ರೋಗಿಗಳು ಪರದಾಡಬೇಕಾಗುತ್ತದೆ ಎಂದರು. ರಿಮ್ಸ್ ಅವ್ಯವಸ್ಥೆ ಬಗ್ಗೆ ನಾಳೆ ನಗರಕ್ಕೆ ಆಗಮಿಸುವ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ರ ಗಮನಕ್ಕೆ ತರಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಮೆಹೆಬೂಬು , ಮೌನೇಶ್, ಚಂದ್ರಶೇಖರ,ಗಂಗಾಧರ್ ಇನ್ನಿತರರು ಇದ್ದರು
.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ