ನಟ ದರ್ಶನ್ ಪ್ರಕರಣದಲ್ಲಿ ಯಾವುದೆ ಸಚಿವರ ಹಸ್ತಕ್ಷೇಪವಿಲ್ಲ:                                                          ನೀಟ್ ಪರೀಕ್ಷೆ ಹಗರಣ ಮೋದಿ ವಿಫಲತೆ ಕಾರಣ- ಡಾ.ಶರಣಪ್ರಕಾಶ ಪಾಟೀಲ್.                         ರಾಯಚೂರು,ಜೂ.21- ನಟ ದರ್ಶನ ಪ್ರಕರಣದಲ್ಲಿ ರಾಜ್ಯ‌ ಸರ್ಕಾರದ ಯಾವ ಸಚಿವರು ಹಸ್ತಕ್ಷೇಪ ಮಾಡಿಲ್ಲವೆಂದು ಜಿಲ್ಲಾ ಉಸ್ತುವಾರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು. ಅವರಿಂದು ನಗರದಲ್ಲಿ ಮುಂಗಾರು ಸಾಂಸ್ಕೃತಿಕ ಹಬ್ಬಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ ಕಾನೂನು ತನ್ನ ಕಾರ್ಯ ಮಾಡುತ್ತಿದೆ ನಮ್ಮ ಸರ್ಕಾರದ ಯಾವೊಬ್ಬ ಮಂತ್ರಿಯೂ ದರ್ಶನ ಪ್ರಕರಣದಲ್ಲಿ ತನಿಖಾಧಿಕಾರಿಗೆ ಒತ್ತಡ ಹೇರಿಲ್ಲ ಅಥವಾ ಅವರ ಬದಲಾವಣೆಗೆ ಪ್ರಯತ್ನಿಸಿಲ್ಲ ವೆಂದ ಅವರು ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ ಕಾನೂನು ಎಲ್ಲರಿಗೂ ಒಂದೆ ಎಂದರು.

ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪ್ರವೇಶಕ್ಕೆ ಅಖಿಲ ಭಾರತ ಮಟ್ಟದ ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿಫಲತೆ ತೋರಿಸುತ್ತದೆ ಎಂದ ಅವರು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದೆ ಈ ಬಗ್ಗೆ ಮೋದಿಯವರು ಮೌನ ವಹಿಸಿರುವುದು ಏಕೆ ಎಂದು ಪ್ರಶ್ನಿಸಿದ ಅವರು ನೀಟ್ ರದ್ದತಿ ರಾಜ್ಯ ಸರ್ಕಾರ ಮಾಡಲು ಬರುವುದಿಲ್ಲ ಅದು ಮಾಡಬೇಕಾದರೆ ಸಂಸತ್ತಿನಲ್ಲಿ ನಿಯಮ ತಿದ್ದುಪಡಿಮಾಡಬೇಕಾಗುತ್ತದೆ ಎಂದ ಅವರು ತಮಿಳುನಾಡು ಸರ್ಕಾರ ನೀಟ್ ರದ್ದತಿ ಮಾಡುತ್ತೆವೆಂದಿರುವುದು ಅವರ ಭಾವನೆ ವ್ಯಕ್ತ ಪಡಿಸಿದ್ದಾರೆ ನಾವು ಹಾಗೆ ಹೇಳಲು ಬರುವುದಿಲ್ಲವೆಂದರು. ರಿಮ್ಸ್ ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸಲಾಗುತ್ತದೆ ಎಂದ ಅವರು ತಾವು ಜಿಲ್ಲಾ ಉಸ್ತುವಾರಿ ಸಚಿವರಾಗಿ ಸಮರ್ಥವಾಗಿ ನಿಭಾಯಿಸುತ್ತಿಲ್ಲವೆಂದು ಕಾಂಗ್ರೆಸ್ ಪಕ್ಷದ ಹಿರಿಯರಾದ ಪಾರಸ್ಮಲ್ ಸುಖಾಣಿ ಹೇಳಿರುವುದು ಅವರ ಅಭಿಪ್ರಾಯ ಅವರು ಈಗಾಗಲೆ ಅದಕ್ಕೆ ಸ್ಪಷ್ಟೀಕರಣ ನೀಡಿದ್ದಾರೆ ಎಂದರು.        ಪೆಟ್ರೋಲ್ ಡಿಸೇಲ್ ದರ ಏರಿಕೆ ಬಗ್ಗೆ ಕೇಂದ್ರ  ರೈಲ್ವೆ ಖಾತೆ 
ರಾಜ್ಯ ಸಚಿವ ವಿ.ಸೋಮಣ್ಣ ಹೇಳಿಕೆಗೆ ಪ್ರತಿಕ್ರಯಿಸಿದ ಅವರು ನಾವು ಈಗಾಗಲೆ ಪೆಟ್ರೋಲ್ ಡಿಸೇಲ್ ದರ ಏರಿಕೆ ಬಗ್ಗೆ ಸ್ಪಷ್ಟೀಕರಣ ನೀಡಿದ್ದೇವೆ ಸೋಮಣ್ಣ ನೀಟ್ ಪರೀಕ್ಷೆ ಅಕ್ರಮ ಬಗ್ಗೆ ಪ್ರಧಾನಿಗಳ ಗಮನ ಸೆಳೆಯಲಿ ಎಂದರು. ಜಿಲ್ಲೆಯಲ್ಲಿ ನಕಲಿ ವೈದ್ಯರ‌ ಹಾವಳಿ ಕಡಿವಾಣಕ್ಕೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದ ಅವರು ಎಸ್ಟಿ ಅಭಿವೃದ್ಧಿ ನಿಗಮ ಕೋಟ್ಯಾಂತರ ರೂಪಾಯಿ ಅವ್ಯವಹಾರ ತನಿಖೆಗೆ ಎಸ್ ಐ ಟಿ ರಚನೆಯಾಗಿದೆ ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ ಎಂದರು.

Comments

Popular posts from this blog