ಕಾರ್ಗಿಲ್ 25 ನೇ ವರ್ಷದ ವಿಜಯೋತ್ಸವ ಸಂಭ್ರಮಾಚರಣೆ: ಯೋಧರಿಗೆ ಪ್ರತಿಯೊಬ್ಬರು ಗೌರವ ನೀಡಬೇಕು- ಚಕ್ರವರ್ತಿ ಸೂಲಿಬೆಲೆ                                                        ರಾಯಚೂರು,ಜು.24- ದೇಶದಲ್ಲಿರುವ ಪ್ರತಿಯೊಬ್ಬ ನಾಗರೀಕನು ಯೋಧರಿಗೆ ಗೌರವ ನೀಡಬೇಕೆಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು. ಅವರಿಂದು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಯುವಾ ಬ್ರಿಗೇಡ್ ವತಿಯಿಂದ ಆಯೋಜಿಸಲಾದ ಕಾರ್ಗಿಲ್ 25ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.                                            ಭಾರತದ ಅವಿಭಾಜ್ಯ ಅಂಗವಾದ ಜಮ್ಮು ಕಾಶ್ಮೀರವನ್ನು ಯಾರಿಂದಲು ಬೇರ್ಪಡಿಸಲು ಸಾಧ್ಯವಿಲ್ಲವೆಂದ ಅವರು ಪಾಕಿಸ್ತಾನವು ಕಾರ್ಗಿಲ್ ಬೆಟ್ಟವನ್ನು ವಶಪಡಿಸಿಕೊಳ್ಳಲು ಹೋದ ಸಂದರ್ಭದಲ್ಲಿ ನಮ್ಮ ದೇಶದ ಯೋಧರು ತಮ್ಮ ಪ್ರಾಣಾರ್ಪಣೆ ಮಾಡಿ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿದ ಘಟನಾವಳಿಗಳನ್ನು ಸಚಿತ್ರವಾಗಿ ರೋಮಾಂಚನವಾಗಿ ಯುದ್ಧದ ಸನ್ನಿವೇಶವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದರು. ಪಾಕಿಸ್ತಾನ ದೇಶ ಹುಟ್ಟಿದ ತದನಂತರ ಭಾರತದ ಮೇಲೆ ಯುದ್ಧ ಸಾರಿದ ಘಟನಾವಳಿ ಆಲಿಸಿದ ಅನೇಕರು ಕಣ್ಣಾಲೆಗಳು ಜಿನುಗಿದವು ದೇಶಪ್ರೇಮ ಪುಟಿದೆದ್ದಿತು .

ಕಾರ್ಗಿಲ್ ಬೆಟ್ಟವನ್ನು ವಶಪಡಿಸಿಕೊಳ್ಳಲು ಹವಣಿಸಿದ ಪಾಕಿಸ್ತಾನದ ಹುಟ್ಟಿಡಗಿಸಿದ ನಮ್ಮ ಯೋಧರು ತಮ್ಮ ನೆಲದ ರಕ್ಷಣೆಗೆ ರಕ್ತ ಚೆಲ್ಲಿದ್ದನ್ನು ವಿವರಿಸಿದರು ಸುಮಾರು 500 ಜನ ಯೋಧರು ವೀರಮರಣವನ್ನಪಿದರು ಅನೇಕ ಯೋಧರು ತಮ್ಮ ತುಂಬು ಸಂಸಾರ ,ವೃದ್ಧ ತಂದೆ ತಾಯಿ, ಮಡದಿ ಮಕ್ಕಳನ್ನು ಬಿಟ್ಟು ಭಾರತಾಂಬೆಯ ರಕ್ಷಣೆಗೆ ತಮ್ಮ ದೇಹಕ್ಕೆ ಗುಂಡಿ ಹೊಕ್ಕಿಸಿಕೊಂಡು ವೀರಾವೇಶದಿಂದ ಹೋರಾಡಿದ ಸನ್ನಿವೇಶ ಕೇಳುತ್ತಾ ನೆರೆದ ಜನರು ಶಿಳ್ಳೆ ಚೆಪ್ಪಾಳೆ ಮೊಳಗಿಸಿದರಲ್ಲದೆ ಭಾರತ ಮಾತಾ ಕಿ ಜೈ, ಜೈ ಹಿಂದ್ ಘೋಷಣೆ ರಂಗಮಂದಿರದಲ್ಲಿ ದೇಶ ಪ್ರೇಮದ ಅಲೆ ಎಬ್ಬಿಸಿತು. ದೇಶದ ಪ್ರಧಾನಿಗಳಾಗಿದ್ದ   ಲಾಲ್ ಬಹದ್ದೂರು  ಶಾಸ್ತ್ರಿ,  ಅಟಲ್ ಬಿಹಾರಿ ವಾಜಪೇಯಿ ಹಾಗೂ ಈಗಿನ ಪ್ರಧಾನಿ ನರೇಂದ್ರ ಮೋದಿ ದಿಟ್ಟ ನಿಲುವು ಕೊಂಡಾಡಿದ ಅವರು ಮೋದಿ ನೇತೃತ್ವದ ಸರ್ಕಾರ ರೂಪಿಸಿರುವ ಅಗ್ನಿ ವೀರ ಯೋಜನೆ ಬಗ್ಗೆ ಅಪಪ್ರಚಾರ ಖಂಡನೀಯವೆಂದರು. ದೇಶವನ್ನು ರಕ್ಷಿಸಲು ಯುವಕರು ಮುಂದಾಗಬೇಕೆಂದು ಕರೆ ನೀಡಿದ ಅವರು ನಗರದಲ್ಲಿ ಯೋಧರ ಸ್ಮಾರಕ ಸ್ಥಳವಿಲ್ಲದಿರುವುದಕ್ಕೆ ಕಳವಳ ವ್ಯಕ್ತಪಡಿಸಿ ನಗರದಲ್ಲಿ ಸೈನಿಕರ  ಸ್ಮಾರಕ ಸ್ಥಳ ನಿರ್ಮಿಸಲು ಕೋರಿದರು.ಯೋಧರ ಬಗ್ಗೆ ಗೌರವ ಹೊಂದಬೇಕು ಅವರ ಆತ್ಮ ಸ್ಥೈರ್ಯ ಕುಗ್ಗದಂತೆ ನೋಡಿಕೊಳ್ಳಬೇಕೆಂದ ಅವರು ಶತ್ರು ರಾಷ್ಟ್ರಗಳೊಂದಿಗೆ ನಡೆದ ಯುದ್ಧದ ಪ್ರೂಫ್ ಕೇಳುವವರಿಗೆ ಯುದ್ಧ ಭೂಮಿಗೆ ಕಳುಹಿಸಿದರೆ ಪ್ರೂಫ್ ಸಿಗುತ್ತದೆ ಎಂದು ಕುಟುಕಿದರು.

ಸಾನಿಧ್ಯವನ್ನು ಕಲ್ಲೂರು ದತ್ತಾತ್ರೇಯ ಮಠದ ಶಿವರಾಮ ಭಾರತಿ ಸ್ವಾಮೀಜಿ ವಹಿಸಿದ್ದರು, ಚೆನ್ನಾರೆಡ್ಡಿ ವೇದಿಕೆ ಮೇಲಿದ್ದರು . ಇದೆ ಸಂದರ್ಭದಲ್ಲಿ ನಿವೃತ್ತ ಯೋಧರನ್ನು  ಸನ್ಮಾನಿಸಲಾಯಿತು. ರಂಗಮಂದಿರದ ಎಲ್ಲಾ ಆಸನಗಳು ಭರ್ತಿಯಾಗಿದ್ದವು ಚಕ್ರವರ್ತಿ ಸೂಲಿಬೆಲೆಯವರಿಗೆ ಕೆಲ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದ ಕಾರಣ ಕಾರ್ಯಕ್ರಮಕ್ಕೆ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ