ಕಮಲಾಪುರದಲ್ಲಿ ಶ್ರೀ ವಿದ್ಯಾಕಣ್ವವಿರಾಜ ತೀರ್ಥ ಶ್ರೀಪಾದಂಗಳವರ 5ನೇ ಚಾತುರ್ಮಾಸ್ಯ ಮಹೋತ್ಸವ ಅನುಷ್ಟಾನ
ರಾಯಚೂರು,ಜು.31- ಕಣ್ವ ಮಠಾಧೀಶರಾದ ಶ್ರೀ ವಿದ್ಯಾಕಣ್ವ ವಿರಾಜ ತೀರ್ಥರ ಚಾತುರ್ಮಾಸ್ಯ ಅನುಷ್ಠಾನ ಸುಕ್ಷೇತ್ರ ಕಮಲಾಪುರ ಶ್ರೀ ವಿದ್ಯಾವಿರಾಜ ತೀರ್ಥರ ಮೂಲ ವೃಂದಾವನ ಸನ್ನಿಧಾನದಲ್ಲಿ ಜು.30 ದಶಮಿಯಂದು ನೆರವೇರಿಸಲಾಯಿತು.
ತುಂಗಭದ್ರಾ ನದಿ ತೀರದಲ್ಲಿ ದಂಡೋದಕ ಸ್ನಾನ,ಮುದ್ರಾಧಾರಣೆ,ಪಾದಪೂಜೆ,ಮಹಾಸಂಸ್ಥಾನ ಪೂಜೆ,ತೀರ್ಥೋದಕ,ಯತಿಗಳಿಗೆ ಹಸ್ತೋದಕ,ಸಕಲ ಭಕ್ತಾದಿಗಳಿಗೆ ತೀರ್ಥ ಪ್ರಸಾದ,ಪಂಡಿತರಿಂದ ಪ್ರವಚನ,ಶ್ರೀ ಪಾದಂಗಳವರಿಂದ ಚಾತುರ್ಮಾಸ ದೀಕ್ಷಾ ಪ್ರಥಮ ಅನುಗ್ರಹ ಸಂದೇಶ,ಫಲಮಂತ್ರಾಕ್ಷತೆ ನೆರವೇರಿಸಲಾಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
Comments
Post a Comment