ಆ.25 ರಂದು ಭಾರತ ವಿಕಾಸ ಪರಿಷತ್ ವತಿಯಿಂದ ರಾಷ್ಟ್ರೀಯ ಸಮೂಹ ಗಾಯನ ಹಾಗೂ ಭಾರತ ಕೋ ಜಾನೋ ಲಿಖಿತ ಪರೀಕ್ಷೆ -ಡಾ.ಆನಂದತೀರ್ಥ ಫಡ್ನೀಸ್. ರಾಯಚೂರು,ಜು.26- ಭಾರತ ವಿಕಾಸ ಪರಿಷತ್ ವತಿಯಿಂದ ಆ.25 ರಂದು ರಾಷ್ಟ್ರೀಯ ಸಮೂಹ ಗಾಯನ ಹಾಗೂ ಭಾರತ್ ಕೋ ಜಾನೋ ಲಿಖಿತ ಪರೀಕ್ಷೆ ಆಯೋಜಿಸಲಾಗಿದೆ ಎಂದು ಡಾ.ಆನಂದ ತೀರ್ಥ ಫಡ್ನೀಸ್ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಭಾರತ ವಿಕಾಸ ಪರಿಷತ್ ರಾಷ್ಟ್ರೀಯ ಭಾವನೆ ಮೂಡಿಸುವ ಉದ್ದೇಶದಿಂದ ಆರನೆ ತರಗತಿಯಿಂದ ಪಿಯುಸಿ ದ್ವಿತೀಯ ವರ್ಷದ ವರೆಗಿನ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸಮೂಹ ಗಾಯನ ಹಾಗೂ ಭಾರತ್ ಕೋ ಜಾನೋ ಲಿಖಿತ ಪರೀಕ್ಷೆ ಆಯೋಜಿಸಲಾಗಿದೆ ಎಂದರು. ಸ್ಪರ್ದೆಯಲ್ಲಿ ಭಾಗವಹಿಸಲು ಆ.20ರೊಳಗೆ ಹೆಸರು ನೊಂದಾಯಿಸಬೇಕು ಎಂದು ಅವರು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಿದರು. ಸ್ಪರ್ಧೆಯು ವಿದ್ಯಾಭಾರತಿ ಶಾಲೆಯಲ್ಲಿ ಆ.25 ರಂದು ನಡೆಯಲಿದೆ ಎಂದರು. ಈ ಸಂದರ್ಭದಲ್ಲಿ ಜಾನಕಿ ಪುರೋಹಿತ, ಪುರುಷೋತ್ತಮ ಇನ್ನಾಣಿ, ತಿರುಪತಿ ಜೋಷಿ, ಸ್ವಾಮಿ ರಾವ್ ದೇಶಪಾಂಡೆ ಇದ್ದರು.

Comments
Post a Comment