ಜು.24 ಕ್ಕೆ ಕಾರ್ಗಿಲ್ ವಿಜಯದ 25 ನೇ ವರ್ಷದ ಸಂಭ್ರಮಾಚರಣೆ: ಚಕ್ರವರ್ತಿ ಸೂಲಿಬೆಲೆಯವರಿಂದ ದಿಕ್ಸೂಚಿ ಭಾಷಣ
ರಾಯಚೂರು ಜು.23- ಕಾರ್ಗಿಲ್ ವಿಜಯೋತ್ಸವಕ್ಕೆ 25 ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಯುವಾ ಬ್ರಿಗೇಡ್ ಸಂಘಟನೆಯ ವತಿಯಿಂದ ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ಜು.24 ಕ್ಕೆ 'ಕಾರ್ಗಿಲ್ ಗೆಲುವಿಗೆ 25' ಎಂಬ ಸಂಭ್ರಮಾಚರಣೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಜಿಲ್ಲಾ ಸಂಚಾಲಕ ಕೆ.ಬಸವರಾಜ ಬೊಮ್ಮನಾಳ ಹೇಳಿದರು.
ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಯುವಾ ಬ್ರಿಗೇಡ್ ನ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಯವರಿಂದ ಕಾರ್ಗಿಲ್ ವಿಜಯದ ಕುರಿತು ವಿಶೇಷ ಉಪನ್ಯಾಸ ನಡೆಯಲಿದೆ ಎಂದರು. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಕಲ್ಲೂರಿನ ದತ್ತಾತ್ರೇಯ ಮಠದ ಶ್ರೀ ಶಿವರಾಮ ಭಾರತೀ ಸ್ವಾಮೀಜಿ ವಹಿಸಲಿದ್ದಾರೆ ಎಂದು ಅವರು ಸೂಲಿಬೆಲೆ ಅವರು ಕಾರ್ಗಿಲ್ ವಿಜಯದಲ್ಲಿ ಬಲಿದಾನ ಮಾಡಿದ ವೀರ ಯೋಧರ ಕಥೆಗಳು, ಮತ್ತು ಬದುಕುಳಿದ ಯೋಧರ ಅನುಭವಗಳ ಸರಮಾಲೆಯ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದರು.
ದೇಶಕ್ಕಾಗಿ ಪ್ರಾಣಕೊಟ್ಟ ವೀರ ಯೋಧರನ್ನು ಮರೆತ ದೇಶಕ್ಕೆ ಭವಿಷ್ಯವಿಲ್ಲ. ತಮ್ಮ ಪ್ರಾಣದ ಹಂಗನ್ನು ತೊರೆದು ದೇಶವನ್ನು ರಕ್ಷಿಸಿದ ಹುತಾತ್ಮರಿಗೆ ನಮಿಸುವ ಕಾರ್ಯಕ್ರಮ ಇದಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ವೀರ ಯೋಧರ ಸಾಹಸಗಾಥೆಗಳನ್ನು ಕೇಳೋಣ, ಯುವಕರಲ್ಲಿ ದೇಶ ಪ್ರೇಮದ ಕಿಚ್ಚನ್ನು ಹೊತ್ತಿಸೋಣ ಎಂದರು. ಕಾರ್ಯಕ್ರಮದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಸೇನಾನಿಗಳ ಪೈಕಿ ಆರು ಜನ ಯೋಧರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು ದೇಶದ ಬಗ್ಗೆ ಈ ಕಾರ್ಯಕ್ರಮವಿದ್ದು ಇದಕ್ಕೆ ಯಾರು ವಿರೋಧ ಮಾಡದೆ ಎಲ್ಲರೂ ಪಾಲ್ಗೊಳ್ಳಬೇಕೆಂದು.
ಈ ಸಂದರ್ಭದಲ್ಲಿ ಯುವಾ ಬ್ರಿಗೇಡ್ ನ ಲಕ್ಷ್ಮಣ ಕಲ್ಮಲಾ, ಸುದೀಪ ಹೆಗ್ಗಸನಹಳ್ಳಿ, ಜಿ ಲಕ್ಷ್ಮಿಕಾಂತ ಬೊಮ್ಮನಾಳ, ಶರಣುಗೌಡ ಹೆಗ್ಗಸನಹಳ್ಳಿ, ಗೋವರ್ಧನ ಗಿರಿ, ಕೃಷ್ಣ ಮಾನ್ವಿ ಸೇರಿದಂತೆ ಇತರರು ಇದ್ದರು.
Comments
Post a Comment