ಜು.28 ರಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ: ನಾಗತಿಹಳ್ಳಿ ನಾಗರಾಜ್ ಹಾಗೂ ನರಸಿಂಗರಾವ್ ಸರ್ಕಿಲ್ ಗೆ ಜೀವಮಾನ ಸಾಧನೆ ಪ್ರಶಸ್ತಿ ಮತ್ತು ವಿಶೇಷ ಪ್ರಶಸ್ತಿ- ಆರ್ .ಗುರುನಾಥ. ರಾಯಚೂರು,ಜು.25- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಜು. 28 ರಂದು ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಮತ್ತು ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಆರ್.ಗುರುನಾಥ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಂದು ಬೆಳಿಗ್ಗೆ 11 ಗಂಟೆಗೆ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಮ್ ಸಮುದಾಯ ಭವನ( ರಂಗ ಮಂದಿರ ಹಿಂದುಗಡೆ) ದಲ್ಲಿ ನಡೆಯುವ ಕಾರ್ಯಕ್ರಮ ಉದ್ಘಾಟನೆಯನ್ನು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ನೆರವೇರಿಸಲಿದ್ದು ಪ್ರಶಸ್ತಿ ಪ್ರದಾನವನ್ನು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮಾಡಲಿದ್ದು ಅತಿಥಿ ಉಪನ್ಯಾಸವನ್ನು ನ್ಯೂಸ್ 18 ಕನ್ನಡ ಪ್ರದಾನ ಸಂಪಾದಕ ಹರಿಪ್ರಸಾದ್ ನೀಡಲಿದ್ದು ಅಧ್ಯಕ್ಷತೆಯನ್ನು ಕೆಯುಡ್ಬ್ಲೂಜೆ ಜಿಲ್ಲಾಧ್ಯಕ್ಷ ಆರ್.ಗುರುನಾಥ ವಹಿಸಲಿದ್ದಾರೆ ಎಂದರು. ಮುಖ್ಯ ಅತಿಥಿಗಳಾಗಿ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಆರ್ ಡಿ ಎ ಅಧ್ಯಕ್ಷರು, ಕೆಯುಡ್ಬ್ಲೂಜೆ ಉಪಾಧ್ಯಕ್ಷರು, ರಾಜ್ಯ ಸಮಿತಿ ಸದಸ್ಯರು, ಜಿಲ್ಲಾಧಿಕಾರಿಗಳು, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮುಂತಾದವರು ಆಗಮಿಸಲಿದ್ದಾರೆ ಎಂದರು.
ಜೀವಮಾನ ಸಾಧನೆ ಮತ್ತು ವಿಶೇಷ ಪ್ರಶಸ್ತಿ: ದಿ.ಎನ್.ಕೆ.ಕುಲಕರ್ಣಿ ಸ್ಮರಣಾರ್ಥ ರಾಯಚೂರವಾಣಿ ಪ್ರಾಯೋಜಿತ ಜೀವಮಾನ ಸಾಧನೆ ವಿಶೇಷ ಪ್ರಶಸ್ತಿಗೆ ಶ್ರೀ ಎನ್.ನಾಗರಾಜ ನಾಗತೀಹಳ್ಳಿ ಸಂಪಾದಕರು, ಈಶಾನ್ಯ ಟೈಮ್ಸ್ ಇವರನ್ನು ಮತ್ತು ದಿ.ಶಿವಶಂಕರಗೌಡ ಯದ್ದಲದಿನ್ನಿ ಸ್ಮರಣಾರ್ಥ ವಿಶೇಷ ಪ್ರಶಸ್ತಿಗೆ ಶ್ರೀ ನರಸಿಂಗರಾವ್ ಸರ್ಕೀಲ್, ವರದಿಗಾರರು ಕನ್ನಡ ಪ್ರಭ ಇವರನ್ನು ಆಯ್ಕೆ ಮಾಡಲಾಗಿದೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಗಳನ್ನು :
ಶ್ರೀ ರಘುನಾಥರೆಡ್ಡಿ ಮನ್ಸಲಾಪೂರು ಉಪ ಸಂಪಾದಕ ಪ್ರಜಾಪ್ರಸಿದ್ದ ರಾಯಚೂರು ಇವರಿಗೆ ಸುದ್ದಿಮೂಲ ಪ್ರಾಯೋಜಿತ ದಿ.ಪ್ರಕಾಶ ದಿನ್ನಿ ಸ್ಮಾರಕ ಪ್ರಶಸ್ತಿ
ಶ್ರೀ ಲಕ್ಷ್ಮಣರಾವ್ ಕಪಗಲ್ ಸಂಪಾದಕ ರಾಯಚೂರು ಧ್ವನಿ ಮಾನ್ವಿ ಇವರಿಗೆ ಸುದ್ದಿಮೂಲ ಪ್ರಾಯೋಜಿತ ಗ್ರಾಮೀಣ ವರದಿಗಾರಿಕೆಗೆ ನೀಡುವ ಪ್ರಶಸ್ತಿ
ಶ್ರೀ ವಿಠಲ್ ಕೆಳೂತ್ ವರದಿಗಾರ ಉದಯವಾಣಿ ಮಸ್ಕಿ ಇವರಿಗೆ ದಿ.ನರಸಿಂಹಚಾರ್ಯ ಗುಡಿ ಸ್ಮರಣಾರ್ಥ ಪ್ರಶಸ್ತಿ
ಶ್ರೀ ರಾಮಣ್ಣ ಕವಿತಾಳ ವರದಿಗಾರ ಸಂಜೆವಾಣಿ ಕವಿತಾಳ ಇವರಿಗೆ ದಿ. ಪ್ರಹ್ಲಾದ್‌ಚಾರ್ ಜೋಷಿ ಸ್ಮರಣಾರ್ಥ ಪ್ರಶಸ್ತಿ
ಶ್ರೀ ರಾಘವೇಂದ್ರ ಭಜಂತ್ರಿ ವರದಿಗಾರ ಹೈದ್ರಬಾದ್ ಕರ್ನಾಟಕ ಲಿಂಗಸೂಗೂರು ಇವರಿಗೆ ದಿ.ಪ್ರಲ್ಟಾ ಚಾರ್ ಜೋಷಿ ಸ್ಮರಣಾರ್ಥ ಪ್ರಶಸ್ತಿ
ಶ್ರೀ ಹನುಮೇಶ ಸಿ. ವರದಿಗಾರ ಸಂಜೆವಾಣಿ ಸಿರವಾರ ಇವರಿಗೆ ದಿ.ಮಹಾದೇವಮ್ಮ ಬಸವರಾಜಸ್ವಾಮಿ ಸ್ಮರಣಾರ್ಥ ಪ್ರಶಸ್ತಿ
ಶ್ರೀ ಮಹಾಂತೇಶ ಹಿರೇಮಠ ವರದಿಗಾರ ವಿಜಯವಾಣಿ ಅರಕೆರೆ ಇವರಿಗೆ ಸ್ಪಂಧನಾ ಸಂಸ್ಥೆ ನಂದಿಕೋಲಮಠ ಪ್ರಾಯೋಜಿತ ಪ್ರಶಸ್ತಿ
ಶ್ರೀ ಅಬ್ದುಲ್ ಖಾದರ್ ಛಾಯಾಗ್ರಾಹಕ ಪವರ್ ಟಿವಿ ಇವರಿಗೆ ಸಿದ್ದಪ್ಪ ಹಳ್ಳೂರು ಸಿರವಾರ ಪ್ರಾಯೋಜಿತ ಪ್ರಶಸ್ತಿ
ಶ್ರೀ ನಾಗರತ್ನ ಶರಣೇಗೌಡ ಸಾಕ್ಷಿ ತೆಲುಗು ಪತ್ರಿಕೆ ಸಿಂಧನೂರು ಇವರಿಗೆ ದಿ.ಈಶ್ವರಮ್ಮ ನರಸಪ್ಪ ಜಲ್ದಾರ್ ಸ್ಮರಣಾರ್ಥ ಪ್ರಶಸ್ತಿ
ಶ್ರೀ ಮುತ್ತಣ್ಣ(ಸಿದ್ರಾಮಪ್ಪ) ಕಬ್ಬಿಣದ ಜಾಹೀರಾತು ವ್ಯವಸ್ಥಾಪಕ ವಿಜಯವಾಣಿ ರಾಯಚೂರು ಇವರಿಗೆ ದಿ.ಎಂ. ರಜನಿ ಸತ್ಯವತಿ ಜೇಮ್ ಸಿಂಗ್ ಸ್ಮರಣಾರ್ಥ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದರು. ಈ ಬಾರಿ ಕೆಯುಡ್ಬ್ಲೂಜೆ ನಿರ್ಣಯದಂತೆ ನಮ್ಮ ಸಂಘದ ಬ್ಯಾನರ್ ಅಡಿ ಕಾರ್ಯಕ್ರಮ ಮಾಡಲಾಗುತ್ತಿದ್ದು ಈ ಹಿಂದೆ ರಾಯಚೂರು ರಿಪೋರ್ಟ್ ರ್ಸ್ ಗಿಲ್ಡ್ ಸಹಯೋಗದಲ್ಲಿ ಮಾಡಲಾಗುತ್ತಿತ್ತು ಆದರೆ ಸಂಘದ ನಿರ್ಣಯದಂತೆ ಬದಲಾವಣೆ ಮಾಡಿಕೊಂಡಿದ್ದೇವೆಂದ ಅವರು ಪಾರದರ್ಶಕವಾಗಿ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಮಾಡಲಾಗಿದೆ ದಾನಿಗಳ ಸಹಕಾರ ಮತ್ತು ಸಂಘದಿಂದ ಕಾರ್ಯಕ್ರಮ ನಡೆಯಲಿದ್ದು ಯಾವುದೆ ಗೊಂದಲಕ್ಕೆ ಆಸ್ಪದ ನೀಡದಂತೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಕ್ರಿಕೆಟ್ 🏏 ಆಯೋಜನೆ: ಪತ್ರಕರ್ತರಿಗೆ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು ಪ್ರತಿ ತಾಲೂಕಿನಿಂದ ಒಂದು ತಂಡ ಆಗಮಿಸಿತ್ತು ವಿಜೇತ ತಂಡಕ್ಕೆ ಹತ್ತು ಸಾವಿರ ರೂಪಾಯಿ ನಗದು ಮತ್ತು ಟ್ರೋಫಿ ನೀಡಲಾಗುತ್ತಿದೆ ಎಂದ ಅವರು ಕಾರ್ಯಕ್ರಮಗಳಲ್ಲಿ ಎಲ್ಲಾ ಪತ್ರಕರ್ತರು ಭಾಗವಹಿಸಬೇಕೆಂದ ಕೋರಿದರು. ಈ ಸಂದರ್ಭದಲ್ಲಿ ಶಿವಮೂರ್ತಿ ಹಿರೇಮಠ, ಶಿವಪ್ಪ ಮಡಿವಾಳ, ಪಾಶಾ ಹಟ್ಟಿ, ವೆಂಕಟೇಶ ಹೂಗಾರ ಇದ್ದರು.
Comments
Post a Comment