ಜು.28 ರಂದು ಶ್ರುತಿ ಸಾಹಿತ್ಯ ಮೇಳದಿಂದ "ಭಾವ ಶ್ರುತಿ" ಸಂಗೀತ ಕಾರ್ಯಕ್ರಮ -ಮುರಳೀಧರ ಕುಲಕರ್ಣಿ

ರಾಯಚೂರು, ಜು.26- ಶ್ರುತಿ ಸಾಹಿತ್ಯ ಮೇಳದಿಂದ ಜು.28 ರಂದು ಭಾವ ಶ್ರುತಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳೀಧರ ಕುಲಕರ್ಣಿ ಹೇಳಿದರು.                          ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಂದು ಸಂಜೆ 5.30 ಕ್ಕೆ ನಗರದ ಕರ್ನಾಟಕ ಸಂಘ ಸಭಾಂಗಣದಲ್ಲಿ   ಭಾವಗೀತೆ ಭಕ್ತಿಗೀತೆ ಜಾನಪದ ಗೀತೆಗಳ ಸಂಗಮದ ಸಂಗೀತ ಕಾರ್ಯಕ್ರಮದ ಭಾವ ಶ್ರುತಿಯಲ್ಲಿ ಎಲ್ಲರೂ ಭಾಗವಹಿಸಲು ಕೋರಿದರು.                                     ಕಾರ್ಯಕ್ರಮ ಉದ್ಘಾಟನೆಯನ್ನು ಕರ್ನಾಟಕ ಸಂಘದ ಅಧ್ಯಕ್ಷ ಕೆ.ಶಾಂತಪ್ಪ ಮಾಡಲಿದ್ದು, ಅಧ್ಯಕ್ಷತೆಯನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ  ಜಯಲಕ್ಷ್ಮಿ ಮಂಗಳ ಮೂರ್ತಿ  ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕನ್ನಡ ಗಡಿ ಪ್ರಾದಿಕಾರದ ಸದಸ್ಯ ಭಾಗತರಾಜ ನಿಜಾಮಕಾರಿ, ದತ್ತಪ್ಪ ಸಾಗನೂರು, ನಿರ್ಮಲಾ ಹೆಚ್. ಹೊಸೂರು,ಶರಣಪ್ಪ ಗೋನಾಳ, ವೆಂಕಟೇಶ ಬೇವಿನಬೆಂಚಿ,ಮೋಹನ್ ವಕೀಲರು ಆಗಮಿಸಲಿದ್ದಾರೆ ಎಂದರು.                          1987 ರಲ್ಲಿ ಸ್ಥಾಪನೆಯಾದ ಶ್ರುತಿ ಸಾಹಿತ್ಯ ಮೇಳ ಅನೇಕ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದ್ದು
199೦ ರ ದಶಕದಲ್ಲಿ ದ.ರಾ. ಬೇಂದ್ರೆ, ಕೆ.ಎಸ್. ನರಸಿಂಹಸ್ವಾಮಿ, ಕುವೆಂಪು, ಜಿ.ಎಸ್. ಶಿವರುದ್ರಪ್ಪ, ನಿಸಾರ್ ಅಹ್ಮದ್ ಇವರ ಕಾವ್ಯಗಳ ಭಾವಗೀತೆ ಮನಸ್ಸಿಗೆ ಮುದ ನೀಡಿ ಹೊಸ ಚೈತನ್ಯವನ್ನು ಸೃಷ್ಟಿಸಿದ್ಧವು, ಪ್ರತಿಯೊಬ್ಬರ ಮನೆಯಲ್ಲಿ ಕ್ಯಾಸೆಟ್ ಮುಖಾಂತರ ಭಾವಗೀತೆಗಳು ಮೂಡಿಬಂದು ಹೊಸ ಅಲೆಯನ್ನು ಸೃಷ್ಟಿಸಿದವು, ಕೆಲವು ಭಾವಗೀತೆಗಳು ಚಲನಚಿತ್ರದಲ್ಲಿ ಅಳವಡಿಸಿ ಪ್ರಸಿದ್ಧಿಯನ್ನು ಪಡೆದವು. ಕವಿಗಳ ಕಾವ್ಯದ ಗೀತೆಗಳು ಕೇಳುವುದು ಏನೋ ಒಂದು ತರಹದ ಆನಂದ. ಮೈ ಮನಗಳನ್ನು ಪುಕಳಕಿಸುವ ಶಕ್ತಿ
ಭಾವಗೀತೆಗಳಿವೆ. 


ಸುಂದರ, ಮಧುರ,ಸುಶ್ರಾವ್ಯವಾದ ಭಾವಗೀತೆಗಳ ಕಾರ್ಯಕ್ರಮಗಳ  ಆಯೋಜನೆಯನ್ನು ಮಾಡಲಾಗಿದ್ದು
  ಭಾವಗೀತೆಗಳ ಜೊತೆಗೆ ಭಕ್ತಿ ಗೀತೆ ಹಾಗೂ ಜಾನಪದ ಗೀತೆಗಳ ಸಂಗಮದ ಸಂಗೀತ ಕಾರ್ಯಕ್ರಮವಿದೆ. ಭಾವನೆಗಳನ್ನು ಪುಟ್ಟಿದೇಳುವಂತೆ ಮಾಡುವ ಕಾರ್ಯಕ್ರಮಕ್ಕೆ ಭಾವ ಶ್ರುತಿ ಎಂದು ಹೆಸರಿಡಲಾಗಿದೆ
ಭಾವ ಶ್ರುತಿ ಯನ್ನು ತಮ್ಮ ಸಿರಿಕಂಠದಿಂದ ಮೂಡಿಸುವ ಕಲಾವಿದರು ಮಹಾಲಕ್ಷ್ಮಿ, ಪ್ರತಿಭಾ ಗೋನಾಳ್, ಡಾ. ಪಲ್ಲವಿ ಮುಜುಂದಾರ್, ರಾಜೇಶ್ವರಿ, ಹೇಮಾ ಸಿರವಾರ,
ವಾಸಕಿ ಕರಣ೦, ಇವರ ಜೊತೆಗೆ ಯುವ ಕಲಾವಿದ ರಾದ ಜಯಸಿಂಹ ಹಾಗೂ ಅಚ್ಚುತ್ ಕುರಡಿಕರ್, ಅವರ ಧ್ವನಿ ಜೊತೆಗೂಡಲಿದೆ ಎಂದರು.                                                                                      ಈ ಸಂದರ್ಭದಲ್ಲಿ ಸುರೇಶ್ ಕಲ್ಲೂರು, ಜೆ.ಎಂ.ವಿರೇಶ, ರಾಘವೇಂದ್ರ ಜಾಹಗೀರದಾರ್ ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ