ನಗರದಲ್ಲಿ ನಾಳೆ ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರಿಂದ  ತಪ್ತ ಮುದ್ರಾ ಧಾರಣೆ                                  ರಾಯಚೂರು,ಜು.27- ನಗರದ ಜವಾಹರ್ ನಗರ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ನಾಳೆ ಜು.28, ಭಾನುವಾರದಂದು  ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರಿಂದ ತಪ್ತ  ಮುದ್ರಾ ಧಾರಣೆ ನಡೆಯಲಿದೆ .                     ಚಾರ್ತುಮಾಸದ ಅಂಗವಾಗಿ ನಾಳೆ ಬೆಳಿಗ್ಗೆ 8:30ಕ್ಕೆ  ಶ್ರೀಪಾದಂಗಳವರಿಂದ ಶ್ರೀ ಮಠದ ಶಿಷ್ಯರಿಗೆ ಮತ್ತು ಭಕ್ತರಿಗೆ ತಪ್ತ ಮುದ್ರಾ ಧಾರಣೆ ನಡೆಯಲಿದೆ.ಕಾರಣ ಶ್ರೀ ಮಠದ ಶಿಷ್ಯರು ಮತ್ತು ಭಕ್ತರು ಭಾಗವಹಿಸಿ ಗುರುಗಳು ಅನುಗ್ರಹಕ್ಕೆ ಪಾತ್ರರಾಗಬೇಕೆಂದು ವಿನಂತಿಸಲಾಗಿದೆ.

Comments

Popular posts from this blog