ದರ್ವೆಶ ಗ್ರೂಪ್ ಬಹುಕೋಟಿ ವಂಚನೆ ಪ್ರಕರಣ: ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಸಿಐಡಿ ತಂಡ. ರಾಯಚೂರು,ಜು.29- ದರ್ವೇಶ ಗ್ರೂಪ್ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಪಟ್ಟಂತೆ ಮೂವರು ಆರೋಪಿಗಳನ್ನು ಇಂದು ಸಿಐಡಿ ತಂಡ ನ್ಯಾಯಾಲಯಕ್ಕೆ ಹಾಜರು ಪಡಿಸಿತು. ಧರ್ವೆಶ ಗ್ರೂಪ್‌ನಲ್ಲಿ ಹಣ ಹೂಡಿದವರಿಗೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನ ಆರೋಪಿಗಳನ್ನು ಬಂಧಿಸಲಾಗಿದ್ದು ಬಂಧಿತರನ್ನು ಇಂದು ಎರಡನೇ ಹೆಚ್ಚುವರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.
ಧರವೇಶ ಗ್ರೂಪ್‌ನ ಸೈಯದ್ ವಸೀಂ, ಸೈಯದ್ ಮಸ್ಕಿನ್, ಬಬ್ಲೂ ಎಂಬುವವರು ಹೂಡಿಕೆದಾರರಿಗೆ ಹಣ ನೀಡದೇ ವಂಚಿಸಿದ್ದಾರೆ ಎಂದು ವೆಂಕಟೇಶ ಎಂಬುವವರು ರಾಯಚೂರು ಅಪರಾಧ ವಿಭಾಗ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಮೂರು ಜನರನ್ನು ಪೊಲೀಸರು ಬಂಧಿಸಿದ್ದರು. ಬಂಧಿತ ಮೂರು ಜನ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು. ಗ್ರೂಪ್ ಮುಖ್ಯಸ್ಥ ಮಹ್ಮದ ಸೂಜಾ ಸೇರಿ ನಾಲ್ಕು ಜನರ ವಿರುದ್ದ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆಯಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿ ನ್ಯಾಯಾಧೀಶರು ವಿಚಾರಣೆಯನ್ನು ಮುಂದೂಡಿದರು.
Comments
Post a Comment