ಸಿದ್ದರಾಮಯ್ಯ ಬ್ಲಾಕ್ ಮೇಲ್ ಸೋನಿಯಾಗಾಂಧಿ, ರಾಹುಲ್ ಗಾಂಧಿ ಮುಂದೆ ನಡೆಯುತ್ತೆ ಬಿಜೆಪಿ ಮುಂದೆ ನಡೆಯಲ್ಲ: ಮೈಸೂರು ಪಾದಯಾತ್ರೆ ಕುರಿತು ಕುಮಾರಸ್ವಾಮಿ ಮುನಿಸು ತಾತ್ಕಾಲಿಕ -ಛಲುವಾದಿ ನಾರಾಯಣಸ್ವಾಮಿ. ರಾಯಚೂರು,ಜು.31- ಸಿದ್ಧರಾಮಯ್ಯ ಬ್ಲಾಕ್ ಮೇಲ್ ಸೋನಿಯಾಗಾಂಧಿ , ರಾಹುಲ್ ಗಾಂಧಿ ಮುಂದೆ ನಡೆಯುತ್ತೆ ಬಿಜೆಪಿ ಮುಂದೆ ನಡೆಯಲ್ಲ ವೆಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲುವಾದಿ ನಾರಾಯಣ ಸ್ವಾಮಿ ಹೇಳಿದರು. ಅವರಿಂದು ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಾಂಗ್ರೆಸ್ ಅಕ್ರಮಗಳ ಬಗ್ಗೆ ಧ್ವನಿಯತ್ತಿದರೆ ಬಿಜೆಪಿ ಸರ್ಕಾರದ ಅವಧಿಯಲ್ಲಾದ ಹಗರಣ ಬಿಚ್ಚಿಡುತ್ತೇನೆಂದು ಬ್ಲಾಕ್ ಮೇಲ್ ಮಾಡಿದರೆ ನಾವು ಹೆದರುವುದಿಲ್ಲ ನಿಮ್ಮ ಬ್ಲಾಕ್ ಮೇಲ್ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಮುಂದೆ ನಡೆಯುತ್ತೆ ಎಂದು ಹೇಳಿದರು. ಪಂಚ ಗ್ಯಾರಂಟಿ ಚುನಾವಣೆ ಆಮೀಷವೆಂದು ಆರೋಪಿಸಿದ ಅವರು ದಲಿತರ ಎಸ್ಸಿಪಿ ಟಿಎಸ್ಪಿ ಹಣ ಗ್ಯಾರಂಟಿಗಳಿಗೆ ನೀಡುತ್ತಿದ್ದಾರೆ ಈ ಹಿಂದೆ ಇದ್ದ ಕುಟೀರ ಜ್ಯೋತಿ, ಭಾಗ್ಯಜ್ಯೋತಿ ವಿದ್ಯುತ್ ಯೋಜನೆ ಸ್ಥಗಿತಗೊಳಿಸಿ ಗೃಹಜ್ಯೋತಿ ತಂದಿದ್ದಾರೆ ಅದಕ್ಕೆ 200 ಯೂನಿಟ್ ಮಿತಿ ಹೇರಿದ್ದಾರೆ ಮತ್ತು ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣವೆಂದು ಹೇಳಿದ್ದಾರೆ ಬಡ ದಲಿತ ಹೆಣ್ಣು ಮಕ್ಕಳು ದಿನನಿತ್ಯ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಬಸ್ ನಲ್ಲಿ ಓಡಾಡಿಕೊಂಡಿರಬೇಕೆ ಎಂದು ಪ್ರಶ್ನಿಸಿದ ಅವರು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದಂತೆ ನಡೆಯುತ್ತಿಲ್ಲವೆಂದರು.
ವಾಲ್ಮೀಕಿ ಹಗರಣದಲ್ಲಿ ಸಚಿವ ನಾಗೇಂದ್ರ ರಾಜಿನಾಮೆ ನೀಡಿದ್ದಾರೆ ಶಾಸಕ ದದ್ದಲ್ ಸಹ ತಪ್ಪಿತಸ್ಥರು ಅವರ ಮೇಲು ಕ್ರಮವಾಗಬೇಕೆಂದ ಅವರು ವಾಲ್ಮೀಕಿ ಅಭಿವೃದ್ಧಿ ಮಂಡಳಿಯಿಂದ ಪರಿಶಿಷ್ಟ ಪಂಗಡದ ಬಡವರಿಗೆ ಕಾರು ಮತ್ತು ಭೂಮಿ ಮಂಜೂರು ಮಾಡುವ ಬದಲು ಸಚಿವರು ಮತ್ತು ಮಂಡಳಿ ಅಧ್ಯಕ್ಷರು ಮಂಡಳಿಯ ಹಣದಿಂದ ಐಷಾರಾಮಿ ಕಾರು, ನೂರಾರು ಎಕರೆ ಬೇನಾಮಿ ಭೂಮಿ ಖರೀದಿಸಿದ್ದಾರೆ ಎಂದು ದೂರಿದರು. ವಾಲ್ಮೀಕಿ ಮತ್ತು ಮೂಡಾ ಹಗರಣದ ಬಗ್ಗೆ ಸದನದಲ್ಲಿ ಸಿಎಂ ಉತ್ತರ ನೀಡದೆ ಪಲಾಯನವಾದ ಮಾಡಿದರು ಸದನವನ್ನು ಮುಂಚಿತವಾಗಿ ಮೊಟಕುಗೊಳಿಸಿದರು. ವಿರೋಧ ಪಕ್ಷವಾಗಿ ನಾವು ಸರಿಯಾಗಿ ಅವರ ಬೆವರು ಇಳಿಸಿದ್ದೇವೆಂದ ಅವರು ದಲಿತರ ಭೂಮಿಯನ್ನು ಸಿಎಂ ಲಪಟಾಯಿಸಿದ್ದು ಅಕ್ಷಮ್ಯವೆಂದರು. ಸರ್ಕಾರದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಹಣವಿಲ್ಲ ಟೇಪು ಕತ್ತರಿಗೆ ಕೆಲಸವಿಲ್ಲ ಹೊಸಯೋಜನೆಗಳಿಗೆ ಹಣ ನೀಡದೆ ಸರ್ಕಾರ ದಿವಾಳಿಯಾಗಿದೆ ಎಂದ ಅವರು ಸಿದ್ದರಾಮಯ್ಯ ಆಡಳಿತ ಅಂತ್ಯ ಸಮೀಪಿಸುತ್ತಿದೆ ಎಂದರು. ಮೂಡಾ ಹಗರಣ ವಿರುದ್ಧ ಬಿಜೆಪಿ ಪಕ್ಷ ಮೈಸೂರುವರೆಗೂ ಆ.3 ರಿಂದ ಪಾದಯಾತ್ರೆ ಹಮ್ಮಿಕೊಂಡಿದ್ದು ಈ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿರುವುದಕ್ಕೆ ಕಾರಣ ರಾಜ್ಯದಲ್ಲಿ ನೆರೆಯಿಂದ ಜನರು ತತ್ತರಿಸಿದ್ದಾರೆ ಈಗ ಪಾದಯಾತ್ರೆ ಬೇಡವೆಂದಿದ್ದಾರೆ ಹೊರತು ಬೇರೆ ಉದ್ದೇಶದಿಂದಲ್ಲ ಆದರೆ ಪಕ್ಷ ಇದೆ ಸೂಕ್ತ ಸಮಯ ಸಿಎಂ ಕೆಳೆಗಿಳಿಸಲು ಎಂಬ ತೀರ್ಮಾನಕ್ಕೆ ಬಂದಿದೆ ಎಂದರು. ಹೆಚ್ ಡಿ ಕೆ ಮುನಿಸು ತಾತ್ಕಾಲಿಕವಾಗಿದ್ದು ಅವರು ಪಾದಯಾತ್ರೆಗೆ ಬರುತ್ತಾರೆ ಎಂದರು.ಡಿಕೆಶಿ ಸಿಎಂ ಮಾಡಲು ವಿಜಯೇಂದ್ರ ಪಾದಯಾತ್ರೆ ರೂಪಿಸಿದ್ದಾರೆ ಎಂಬ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ಯತ್ನಾಳ್ ಪಕ್ಷದಲ್ಲಿ ಹಿರಿಯರು ಅವರು ವಾಲ್ಮೀಕಿ ಹಗರಣ ವಿರುದ್ಧ ಉತ್ತರ ಕರ್ನಾಟಕದಲ್ಲಿ ಪಾದಯಾತ್ರೆ ಮಾಡುವ ಬಗ್ಗೆ ನಿರ್ಧರಿಸಿದ್ದು ಅದಕ್ಕೆ ಪಕ್ಷ ಸಹಮತ ವ್ಯಕ್ತಪಡಿಸಿದೆ ಎಂದರು. ಈ ಸಂದರ್ಭದಲ್ಲಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಶಿವರಾಜ ಪಾಟೀಲ್, ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ, ಮುಖಂಡರಾದ ರವೀಂದ್ರ ಜಲ್ದಾರ್ ,ಉಟ್ಕೂರು ರಾಘವೇಂದ್ರ, ಕಡಗೋಲು ಆಂಜಿನೇಯ, ಪಿ.ಯಲ್ಲಪ್ಪ, ಪಲಗುಲ ನಾಗರಾಜ, ಮುಕ್ತಿಯಾರ್ ಇನ್ನಿತರರು ಇದ್ದರು.
Comments
Post a Comment