ಜು. 27 ರಂದು ರಾಮಕೃಷ್ಣ ಪರಮಹಂಸ ಭಕ್ತಿಮಾಲಾ ಧ್ವನಿಸುರಳಿ ಬಿಡುಗಡೆ ಸಮಾರಂಭ

                                                                             ರಾಯಚೂರು,ಜು.26- ನಗರದ ಸ್ವರಸಂಗಮ ಸಂಗೀತ ವಿದ್ಯಾಸಂಸ್ಥೆ ಹಾಗೂ ಬೆಂಗಳೂರಿನ ಭಾರತ್ ಸಾಂಸ್ಕೃತಿಕ ಕಲಾಕೇಂದ್ರ(ರಿ)  ಇವುಗಳ ಜಂಟಿ ಆಶ್ರಯದಲ್ಲಿ  ಜು.27 ರಂದು ಶ್ರೀರಾಮಕೃಷ್ಣ ಪರಮಹಂಸ ಭಕ್ತಿಮಾಲಾ ಎಂಬ ಹೆಸರಿನ ಧ್ವನಿ ಸುರಳಿ ಬಿಡುಗಡೆ ಸಮಾರಂಭವುನ್ನು ಆಯೋಜಿಸಲಾಗಿದೆ ಎಂದು   ಭಾರತ್ ಸಾಂಸ್ಕೃತಿಕ ಕಲಾಕೇಂದ್ರ, ಬೆಂಗಳೂರಿನ  ಕಾರ್ಯದರ್ಶಿಗಳಾದ  ಕೆ .ಯೋಗ ರವೀಶ ಭಾರತ್  ಅವರು ಹೇಳಿದ್ದಾರೆ.  ಶ್ರೀ ರಾಮಕೃಷ್ಣ ಪರಮಹಂಸ, ಮಾತಾ ಶಾರದಾದೇವಿ ಮತ್ತು ಸ್ವಾಮಿ ವಿವೇಕಾನಂದರ ಕುರಿತು ಹಿಂದುಸ್ಥಾನಿ  ಶೈಲಿಯಲ್ಲಿ ಖ್ಯಾತ ಅಂತಾರಾಷ್ಟ್ರೀಯ ಕ್ಲಾರಿಯೋನಿಟ್ ವಾದಕ ಪಂ.ನರಸಿಂಹಲು ವಡವಾಟಿ ಹಾಗೂ ಕರ್ನಾಟಕ  ಸಂಗೀತ ನೃತ್ಯ ಅಕಾಡೆಮಿಯ ಮಾಜಿ ಸದಸ್ಯರೂ ಖ್ಯಾತ ಹಿಂದೂಸ್ಥಾನಿ ಗಾಯಕರೂ ಆದ   ವಡವಾಟಿ ಶಾರದಾ ಭರತ್ ಅವರು ಹಾಡಿದ  ಧ್ವನಿ ಸುರಳಿ ಇದಾಗಿರುತ್ತದೆ ಎಂದು ತಿಳಿಸಿದ್ದಾರೆ.  ಕಾರ್ಯಕ್ರಮದ ಸಾನಿಧ್ಯವನ್ನು  ಶ್ರೀ ನಿರ್ಭಯಾನಂದ ಸ್ವಾಮೀಜಿ ಅಧ್ಯಕ್ಷರು, ಶ್ರೀ  ರಾಮಕೃಷ್ಣ ವಿವೇಕಾನಂದ  ಆಶ್ರಮ, ಗದಗ ಹಾಗೂ ಬಿಜಾಪುರ ಇವರು ವಹಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಪಂನರಸಿಂಹಲು ವಡವಾಟಿಯವರು ವಹಿಸಿದರೆ, ಮುಖ್ಯ ಅತಿಥಿಗಳಾಗಿ   ಬಸವರಾಜ ಸ್ವಾಮಿ, ಸಂಪಾದಕರು ಸುದ್ದಿಮೂಲ ಇವರು ಆಗಮಿಸಲಿದ್ದಾರೆ. ಕಾರ್ಯಕ್ರಮವು ಸ್ವರ ಸಂಗಮ ವಿದ್ಯಾಸಂಸ್ಥೆ, ಉದಯನಗರ,  ಸಭಾಮಂಟಪದಲ್ಲಿ  ಸಾಯಂಕಾಲ 6 ಗಂಟೆಗೆ ನಡೆಯಲಿದ್ದು ಹೆಚ್ಚಿನ ಸಂಗೀತಾಸಕ್ತರು ಕಲಾಭಿಮಾನಿಗಳು ಭಾಗವಹಿಸಬೇಕೆಂದು ಆಯೋಜಕರು ಕೋರಿದ್ದಾರೆ.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್