ತಪ್ತ ಮುದ್ರಾ ಧಾರಣೆಯಿಂದ ಕ್ಲೇಶ ನಾಶ- ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರು. ರಾಯಚೂರು,ಜು.28- ವಿಷ್ಣುವಿನ ಚಿಹ್ನೆಗಳಾದ ಶಂಖ ಮತ್ತು ಚಕ್ರ ಮುದ್ರೆ ಧಾರಣೆಯಿಂದ ನಮ್ಮ ಸಕಲ ಕ್ಲೇಶಗಳು ನಾಶವಾಗುತ್ತವೆ ಎಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಹೇಳಿದರು. ಅವರಿಂದು ನಗರದ ಜವಾಹರ್ ನಗರ ರಾಯರ ಮಠದಲ್ಲಿ ಶಿಷ್ಯರಿಗೆ ಮತ್ತು ಭಕ್ತರಿಗೆ ಮುದ್ರಾ ಧಾರಣೆ ಮಾಡಿ ಆಶೀರ್ವಚನ ನೀಡಿದರು.
ದೇವರ ಚಿಹ್ನೆಗಳನ್ನು ನಾವು ಧಾರಣೆ ಮಾಡಿದರೆ ನಮ್ಮ ಕಷ್ಟಗಳು ಪರಿಹಾರವಾಗುತ್ತವೆ ಭಕ್ತಿಯಿಂದ ದೇವರನ್ನು ನೆನೆಯಬೇಕೆಂದ ಅವರು ರಾಯರು ಎಲ್ಲರಿಗೂ ಒಳಿತನ್ನು ಮಾಡಲಿ ಎಂದರು. ತಾವು ಎಲ್ಲಾ ಸ್ಥಳಗಳಿಗೆ ತೆರಳಿ ಅಲ್ಲಿರುವ ಶಿಷ್ಯರಿಗೆ ಮತ್ತು ಭಕ್ತರಿಗೆ ತಪ್ತ ಮುದ್ರಾ ಧಾರಣೆ ಮಾಡುತ್ತಿದ್ದು ಆಗಷ್ಟ 2 ರಂದು ಮಂತ್ರಾಲಯದಲ್ಲಿ ಚಾತುರ್ಮಾಸ್ಯ ದೀಕ್ಷೆ ಸಂಕಲ್ಪ ಕೈಗೊಳ್ಳಲಿದ್ದೇವೆಂದ ಅವರು ರಾಯರ ಆರಾಧನೆಗೆ ಎಲ್ಲರೂ ಆಗಮಿಸಲು ಆಹ್ವಾನ ನೀಡಿದರು. ಈ ಸಂದರ್ಭದಲ್ಲಿ ಪಂಡಿತರು, ಶ್ರೀ ಮಠದ ವ್ಯವಸ್ಥಾಪಕರು, ಸಿಬ್ಬಂದಿಗಳು, ವಿದ್ಯಾಪೀಠದ ವಿದ್ಯಾರ್ಥಿಗಳು ಅಪಾರ ಸಂಖ್ಯೆಯಲ್ಲಿ ಶಿಷ್ಯರು, ಭಕ್ತರು ನೆರೆದಿದ್ದರು.
Comments
Post a Comment