ಮಾಜಿ ದೇವದಾಸಿಯರಿಗೆ ಉಚಿತ ಮನೆ ನಿರ್ಮಾಣಕ್ಕೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಕೆ

 ರಾಯಚೂರು,ಜು.30- ಮಾಜಿ ದೇವದಾಸಿಯರಿಗೆ ಮನೆ ನಿರ್ಮಿಸಿಬೇಕೆಂದು ಒತ್ತಾಯಿಸಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಪ್ರಸಾದ್ ಅಬ್ಬಯ್ಯರವರಿಗೆ  ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಜಿಲ್ಲಾ ಸಮಿತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.  ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘಟನೆ ನೇತೃತ್ವದಲ್ಲಿ ಹಲವು ವರ್ಷಗಳ ಹೋರಾಟ ಪರಿಣಾಮವಾಗಿ ರಾಯಚೂರು ತಾಲೂಕಿನ ೨೦೬ ಮಾಜಿ  ದೇವದಾಸಿ ಮಹಿಳೆಯರಿಗೆ ಪುನರ್ ವಸತಿ ಕಲ್ಪಿಸಲು ರಾಯಚೂರು ನಗರದ  ಸರ್ವೆ ನಂಬರ : ೧೪೦೩ ರಲ್ಲಿ ವಿಸ್ತೀರ್ಣ : ೫ ಎಕರೆ ಭೂ ಮಂಜೂರು ಮಾಡಿ ಮನೆಗಳ ನಿರ್ಮಾಣಕ್ಕೆ ಮುಂದಾಗಿದೆ. ೧ ಮನೆ ನಿರ್ಮಾಣ ವೆಚ್ಚವು ರೂ. ೬ ಲಕ್ಷ ೫೦ ಸಾವಿರ ರೂಪಾಯಿ ಸರ್ಕಾರ ನಿಗಧಿಪಡಿಸಲಾಗಿದ್ದು. ಅದರಲ್ಲಿ ಫಲಾನುವಿಯು  ರೂ. ೧ ಲಕ್ಷ  ಕಟ್ಟಬೇಕು ಎಂದು ಸರ್ಕಾರವು ಆದೇಶ ಮಾಡಿರುತ್ತದೆ. ಉಳಿದ ಹಣ ಸ್ಲಂ ಬೋರ್ಡ್ನಿಂದ  ಮತ್ತು ಸರ್ಕಾರದ ಕಡೆಯಿಂದ ನೀಡಲಾಗುತ್ತದೆ. 

ಆದರೆ ಸಮಾಜದಲ್ಲಿ ಅತ್ಯಂತ ದೌರ್ಜನ್ಯಕ್ಕೆ ಮತ್ತು ಮೂಢ ನಂಬಿಕೆಗಳಿಗೆ  ಒಳಗಾಗಿರುವ ಧಮನಿತ ಜನರಾದ ಮಾಜಿ ದೇವದಾಸಿ ಮಹಿಳೆಯರೇ ಆಗಿದ್ದು, ಇವರಿಗೆ ಸರ್ಕಾರವು ಉಚಿತವಾಗಿ ಪುನರ್ ವಸತಿ ಕಲ್ಪಿಸಿ ಕೊಡುವ ಜವಾಬ್ದಾರಿ ಸರ್ಕಾರವೇ ವಹಿಸಿಕೊಳ್ಳಬೇಕಾಗುತ್ತದೆ. ಯಾಕೆಂದರೆ, ಅವರಿಗೆ  ಸರ್ಕಾರ ನೀಡುವ ಮಾಸಿಕ ಸಹಾಯ ಧನ ರೂ. ೨,೦೦೦/- ದಲ್ಲಿ ತಮ್ಮ ಜೀವನ ನಿರ್ವಹಣೆ ಮಾಡಿಕೊಂಡು ಹೋಗುತ್ತಿದ್ದು ಇವರು ವಂತಿಗೆ ಹಣ ರೂ. ೧,೦೦,೦೦೦/- ಕಟ್ಟಲು ಸಾಧ್ಯವಾಗುತ್ತಿಲ್ಲ. ಕಾರಣ ಈ ಒಂದು ದೇವದಾಸಿ ಮಹಿಳೆಯರನ್ನು ಸಮಾಜದ ವಿಶೇಷ ದಮನಿತ ವರ್ಗವೆಂದು ಪರಿಗಣಿಸಿ ಜಾತಿ ದೌರ್ಜನ್ಯಕ್ಕೆ ಮೂಡ ನಂಬಿಕೆ ಬಲಿಯಾಗಿರುವ ಇವರಿಗೆ ಸರ್ಕಾರವೇ ಉಚಿತವಾಗಿ ಮನೆ ನಿರ್ಮಾಣ ಮಾಡಿಕೊಡಬೇಕು ಮತ್ತು ಈಗಾಗಲೇ ರಾಯಚೂರುನಲ್ಲಿ ನಡೆಯುವ ಮನೆಗಳ ನಿರ್ಮಾಣ ಕಾರ್ಯವು ಅನುದಾನದ ಕೊರತೆಯಿಂದ ಕಳೆದ ೨ ವರ್ಷದಿಂದ  ಪೂರ್ಣಗೊಳ್ಳದೇ ಅತ್ಯಂತ ಮಂದಗತಿಯಲ್ಲಿ ಸಾಗುತ್ತಿದೆ. ಇದರಿಂದ ಬಹಳಷ್ಟು ಫಲನುಭವಿಗಳು ಮೃತಪಟ್ಟಿದ್ದು ಮತ್ತು  ಈಗೀರುವವರು ಕೂಡಾ ಸುಮಾರು ೫೫ ರಿದ ೬೦ ವರ್ಷ ಮೇಲ್ಪಟ ವಯಸ್ಸಾದಂತ ವಯೋವೃದ್ಧರು ಇರುವುದರಿಂದ ಇವರು ತಮ್ಮ ವಂತಿಗೆ ಹಣ ಕಟ್ಟಲು ಸಾಧ್ಯವಾಗುತ್ತಿಲ್ಲ. 


ಆದ್ದರಿಂದ ಸರ್ಕಾರವೇ ಈ ದಮನಿತ ವರ್ಗದವರಿಗೆ  ಪರಿಗಣಿಸಿ ಉಚಿತವಾಗಿ ಮನೆಗಳ ನಿರ್ಮಿಸಿ ಪುನರ್ ವಸತಿ ಕಲ್ಪಿಸಿ ಕೊಡಬೇಕೆಂದು ಅಧ್ಯಕ್ಷರಲ್ಲಿ  ಮತ್ತು  ಕರ್ನಾಟಕ ರಾಜ್ಯ ಸರ್ಕಾರಕ್ಕೆ  ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ರಾಯಚೂರು ಜಿಲ್ಲಾ ಸಮಿತಿ ಮನವಿ ಮಾಡಿಕೊಂಡಿತು. 

ಈ ಸಂದರ್ಭದಲ್ಲಿ ಎಚ್. ಪದ್ಮಾ  ,ಜಮುಲಮ್ಮ  ,ಮಹಾದೇವಿ, ಕೆ.ಜಿ.ವಿರೇಶ, ಶರಣಬಸವ ಇನ್ನಿತರರು ಇದ್ದರು .       

    

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ