ಭಾವನಾ ಲೋಕಕ್ಕೆ ಕರೆದ್ಯೊಯ್ದ  ಭಾವ ಶ್ರುತಿ ಸಂಗೀತ ಕಾರ್ಯಕ್ರಮ :

ಶ್ರುತಿ ಸಾಹಿತ್ಯ ಮೇಳದ ಕಾರ್ಯ ಶ್ಲಾಘನೀಯವಾಗಿದೆ-ಕೆ. ಶಾಂತಪ್ಪ

 ರಾಯಚೂರು,ಜು.29-  ಕಳೆದ 37 ವರ್ಷಗಳಿಂದ ರಾಯಚೂರು ನಗರದಲ್ಲಿ ಸಾಂಸ್ಕೃತಿಕವಾಗಿ,ಸಾಹಿತಿಕವಾಗಿ ಸೇವೆ ಸಲ್ಲಿಸುತ್ತಾ, ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹಿಸಿ ವೇದಿಕೆ ನಿರ್ಮಿಸಿ ಕೊಡುತ್ತಿರುವ ಶ್ರುತಿ ಸಾಹಿತ್ಯ ಮೇಳದ ಕಾರ್ಯ ಶ್ಲಾಘನೀಯವಾಗಿದೆ, ಎಂದು ಕರ್ನಾಟಕ ಸಂಘದ ಅಧ್ಯಕ್ಷ ಶ್ರೀ ಕೆ.ಶಾಂತಪ್ಪ ಅವರು ಹೇಳಿದರು.

      ಅವರು ಆದಿವಾರ ಸಂಜೆ ಕರ್ನಾಟಕ ಸಂಘದಲ್ಲಿ ಶೃತಿ ಸಾಹಿತ್ಯ ಮೇಳ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಇವರು ಏರ್ಪಡಿಸಿದ ಭಾವಗೀತೆ ಭಕ್ತಿಗೀತೆಗಳು,ಜನಪದ ಗೀತೆಗಳ ಸಂಗಮದ ಭಾವ ಶ್ರುತಿ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

  ಸಂಗೀತ ಕಾರ್ಯಕ್ರಮಗಳು  

ಮನಸ್ಸನ್ನು ಉಲ್ಲಾಸ ಗೊಳಿಸಿ ಒತ್ತಡವನ್ನು ದೂರ ಮಾಡುತ್ತೇವೆ. ನಗರದ ಜನರಿಗೆ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿ ಸಾಂಸ್ಕೃತಿಕ ಪರಿಸರವನ್ನು ನಿರ್ಮಾಣ ಮಾಡುತ್ತಿರುವ ಶ್ರುತಿ ಸಾಹಿತ್ಯ ಮೇಳ ಸಂಘಟನೆಯ ಕಾರ್ಯ ಚಟುವಟಿಕೆ ಇತರ  ಸಂಘಟನೆಗಳಿಗೆ ಮಾದರಿಯಾಗಿದೆ ಎಂದು ಹೇಳಿದರು. 


     ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗಡಿನಾಡು ಪ್ರಾಧಿಕಾರದ ಸದಸ್ಯರಾದ ಭಗತ್ ರಾಜ್ ನಿಜಾಮಕಾರಿ ಮಾತನಾಡಿ ಗಡಿನಾಡು ಪ್ರಾಧಿಕಾರದಿಂದ ರಾಜ್ಯದಲ್ಲಿ ನಾಲ್ಕು ಗಡಿನಾಡ ಪ್ರದೇಶಗಳಲ್ಲಿ ಸಮ್ಮೇಳನವನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಮುಂಬರುವ ಅಕ್ಟೋಬರ್ ನಲ್ಲಿ ಶ್ರುತಿ ಸಾಹಿತ್ಯ ಮೇಳ ರಾಯಚೂರಿನ ಸಹಕಾರದೊಂದಿಗೆ ರಾಯಚೂರಿನಲ್ಲಿ ಗಡಿನಾಡ ಸಮ್ಮೇಳನವನ್ನು ಆಯೋಜಿಸಲು ಯೋಜಿಸಲಾಗಿದೆ ಎಂದು ಹೇಳಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರುತಿ ಸಾಹಿತ್ಯ ಮೇಳದ ಗೌರವಾಧ್ಯಕ್ಷರಾದ ಡಾ. ಜಯಲಕ್ಷ್ಮಿ ಮಂಗಳಮೂರ್ತಿಯವರು ಮಾತನಾಡಿ, ಸಂಗೀತ ಮತ್ತು ಸಾಹಿತ್ಯ  ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ.

ಸಂಗೀತ ಮತ್ತು ಸಾಹಿತ್ಯ ಮನಸ್ಸನ್ನು ಹಾಗೂ ಆತ್ಮವನ್ನು ಶುದ್ಧಿ ಮಾಡುವ ಶಕ್ತಿಯನ್ನು ಹೊಂದಿವೆ. ಶ್ರುತಿ ಸಾಹಿತ್ಯ ಮೇಳದಿಂದ ಮನಸ್ಸಿಗೆ ಮುದ ನೀಡುವ ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ.ಎಂದು ಹೇಳಿದರು.

  ಕಾರ್ಯಕ್ರಮದಲ್ಲಿ ಇನ್ನೊಬ್ಬ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಯಚೂರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ವೆಂಕಟೇಶ ಬೇವಿನ ಬೆಂಚಿ ಅವರು ಮಾತನಾಡಿ  ಪದವಿ ಓದುತ್ತಿರುವ ಸಂದರ್ಭದಿಂದಲೂ ಶೃತಿ ಸಾಹಿತ್ಯ ಮೇಳದ ಕಾರ್ಯ ಚಟುವಟಿಕೆಗಳನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. 


 ಶೃತಿಸಾಹಿತ್ಯ ಮೇಳ ಸಾಂಸ್ಕೃತಿಕವಾಗಿ ಅತ್ಯುತ್ತಮ ಕೊಡುಗೆ ನೀಡಿದೆ ಎಂದು ಹೇಳಿದರು. 

   ಭಾವ ಶ್ರುತಿ ಸಂಗೀತ ಕಾರ್ಯಕ್ರಮದಲ್ಲಿ ಪ್ರಸಿದ್ಧ ಕವಿಗಳು ಬರೆದ ಹಲವಾರು ಭಾವಗೀತೆ, ಜನಪದ, ಭಕ್ತಿ ಗೀತೆಗಳನ್ನು ಮಹಾಲಕ್ಷ್ಮಿ,ಪ್ರತಿಭಾ ಗೋನಾಳ, ಡಾ.ಪಲ್ಲವಿ ಮುಜುಮುದಾರ,ರಾಜೇಶ್ವರಿ, ವಾಸುಕಿ ಕರಣ೦, ಹೇಮಾ ಸಿರವಾರ್, ಜಯಸಿಂಹ, ಅಚ್ಚುತ್ ಕುರುಡಿಕರ್ ಅವರು ಹಾಡಿ ಪ್ರೇಕ್ಷಕರಿಗೆ ಮುದ ನೀಡಿದರು.

    ಇವರಿಗೆ ವಾದ್ಯ ವೃಂದದಲ್ಲಿ 

ವೀರೇಂದ್ರ ಕುರುಡಿ, ಸೇತು ಮಾಧವ ಕೆರೂರ್, ಕೊಪ್ರೇಶ್ ದೇಸಾಯಿ ಅವರು ಸಾತ್ ನೀಡಿದರು.

 ನಗರ ಕೇಂದ್ರ ಗ್ರಂಥಾಲಯ ಅಧಿಕಾರಿಗಳಾದ ನಿರ್ಮಲ ಎಚ.ಹೊಸೂರ್  ,ಕನ್ನಡ ಜನಪದ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಶರಣಪ್ಪ ಗೋನಾಳ್ ಅವರು  ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

    ಈ ಸಂದರ್ಭದಲ್ಲಿ ಕಲಾವಿದರಾದ ಶ್ರೀ ನರಸಿಂಹಲು ಅಸ್ಕ್ಯಾಳ್ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.

   ಶ್ರೀ ಕೃಷ್ಣ ಸಂಗೀತ ವಿದ್ಯಾಲಯ ವಿದ್ಯಾರ್ಥಿಗಳಿಂದ ಹಾಗೂ ಸೇಂಟ್ ಜಾನ್ಸ್ ಶಾಲೆಯ ವಿದ್ಯಾರ್ಥಿಗಳಿಂದ ಪ್ರಾರ್ಥನೆ ಗೀತೆ  ಜರುಗಿತು. 

     ಕಾರ್ಯದರ್ಶಿ ಜೆ.ಎಂ. ವೀರೇಶ್ ಅವರು ಸ್ವಾಗತಿಸಿದರು. ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರುಳಿಧರ ಕುಲಕರ್ಣಿ ಅವರು ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. 

   ಭಾವ ಶ್ರುತಿ ಸಂಗೀತ ಕಾರ್ಯಕ್ರಮದ ನಿರೂಪಣೆಯನ್ನು ರವೀಂದ್ರ ಕುಲಕರ್ಣಿ ಅವರು ಮಾಡಿದರು. 


    ಶೃತಿ ಸಾಹಿತ್ಯ ಮೇಳದ ಸದಸ್ಯರುಗಳಾದ ಸುರೇಶ್ ಕಲ್ಲೂರ್, ವಸುದೇಂದ್ರ ಸಿರವಾರ್, ರಾಘವೇಂದ್ರ ಜಾಗೀರ್ದಾರ್, ಪ್ರಸನ್ನ ಆಲಂಪಲ್ಲಿ, ಮುಂತಾದವರು ಉಪಸ್ಥಿತರಿದ್ದರು. 

  ಕಾರ್ಯಕ್ರಮದಲ್ಲಿ ನೂರಾರು ಪ್ರೇಕ್ಷಕರು ಭಾಗವಹಿಸಿ ಸುಶ್ರಾವ್ಯವಾಗಿ ಮೂಡಿ ಬಂದ ಹಲವಾರು ಗೀತೆಗಳು ಮೆಚ್ಚುಗೆ ವ್ಯಕ್ತಪಡಿಸಿದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ