ಐದು ಜಿಲ್ಲೆಗಳ ಅಂಗನವಾಡಿ ಕೇಂದ್ರಗಳ ಮೂಲಭೂತ ಸಮಸ್ಯೆಗಳ ಕುರಿತು ಅಧ್ಯಯನ:                                              ಅಂಗನವಾಡಿ ಕೇಂದ್ರಗಳ ಆಹಾರ ಸ್ಥಳೀಯವಾಗಿ ತಯಾರಿಕೆಗೆ ಸರ್ಕಾರ ಆದೇಶಿಸಲಿ- ರವೀಂದ್ರ ಜನೇಕಲ್.                                                     ರಾಯಚೂರು,ಆ.27- ಅಂಗನವಾಡಿ ಕೇಂದ್ರಗಳಿಗೆ ವಿತರಿಸುವ ಆಹಾರವನ್ನು ಈ‌ ಮೊದಲಿನಂತೆ ಸ್ಥಳೀಯವಾಗಿ ತಯಾರಿಸಲು ಸರ್ಕಾರ ಆದೇಶಿಸಬೇಕೆಂದು ಸಾಮಾಜಿಕ ಸುರಕ್ಷಾ ಜನ ವೇದಿಕೆ ಮಾನ್ವಿ ಘಟಕದ ರವೀಂದ್ರ ಜಾನೇಕಲ್ ಹೇಳಿದರು.

ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಂಗನವಾಡಿ ಕೇಂದ್ರಗಳ ಬಗ್ಗೆ ನಮ್ಮ  ಸಂಸ್ಥೆಯಿಂದ ಅಧ್ಯಯನ ಮಾಡಿದ್ದು ಅಂಗನವಾಡಿ ಕೇಂದ್ರಗಳ ಮೂಲಭೂತ ಸಮಸ್ಯೆಗಳ ನಿವಾರಣೆ ಮತ್ತು ಮಕ್ಕಳಿಗೆ ಆಹಾರ ಗುಣಮಟ್ಟ ಹೆಚ್ಚಿಸುವಂತೆ ಹಕ್ಕೊತ್ತಾಯ ಮಾಡಲಾಗಿದೆ ಎಂದರು. ಮಕ್ಕಳಿಗೆ  ಮಹಿಳಾ ಪೂರಕ ಪೌಷ್ಟಿಕ ಆಹಾರ ತಯಾರಿಕೆ ಕೇಂದ್ರಗಳಿಂದ ಕಳುಹಿಸುವ ಆಹಾರ ಸಾಮಗ್ರಿಗಳು ಗುಣಮಟ್ಟದ ಬಗ್ಗೆ ಅನುಮಾನವಿದ್ದು ಮಿಲೆಟ್ ಲಡ್ಡು ಹಾಗೂ ರವೆಯಿಂದ ಮಾಡಿದ ಆಹಾರ ಸೇವಿಸಿದ ಮಕ್ಕಳಿಗೆ ಹೊಟ್ಟೆನೋವು ಮತ್ತು ಬೇಧಿಯಾಗಿದೆ ಆದ್ದರಿಂದ ಸರ್ಕಾರ ಈ ಬಗ್ಗೆ ತ್ವರಿತಗತಿಯಲ್ಲಿ ಕ್ರಮ ಕೈಗೊಂಡು ಅಂಗನವಾಡಿಗಳ ಬಲವರ್ಧನೆಗೆ ಮುಂದಾಗಬೇಕೆಂದರು. ಈ ಸಂದರ್ಭದಲ್ಲಿ ಚಾರ್ಲಿ, ಸದಾನಂದ,ಕಾಸಿಂ,ಈಶಮ್ಮ, ಗಂಗಮ್ಮ ಇನ್ನಿತರರು ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ