ಆ.25 ರಂದು ಮಂತ್ರಾಲಯದಲ್ಲಿ ಅಂತರಾಷ್ಟ್ರೀಯ ದಾಖಲೆಗಾಗಿ ಏಕಕಾಲದಲ್ಲಿ 300 ನೃತ್ಯ ಕಲಾವಿದರಿಂದ ನಾಮ ರಾಮಾಯಣಂ ನೃತ್ಯ ಪ್ರದರ್ಶನ
ರಾಯಚೂರು,ಆ.24- ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ ಮಂತ್ರಾಲಯ ಹಾಗೂ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿ ಚನ್ನರಾಯಪಟ್ಟಣ ಹಾಸನ ಇವರ ಸಂಯುಕ್ತ ಆಶ್ರಯದಲ್ಲಿ
ಶ್ರೀ ಸುಬುಧೇ೦ದ್ರ ತೀಥ೯ ಶ್ರೀಪಾದ೦ಗಳವರ ಆಶೀರ್ವಾದದೊಂದಿಗೆ ಆಗಸ್ಟ್ 25ರಂದು ಭಾನುವಾರ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಮುಂಭಾಗದಲ್ಲಿರುವ ಕಾರಿಡಾರ್ ನಲ್ಲಿ ವಿಶ್ವದಾದ್ಯಂತ ಕಡೆಯಿಂದ ಆಗಮಿಸುತ್ತಿರುವ ನೃತ್ಯ ಗುರುಗಳು ಮತ್ತು ನೃತ್ಯ ಕಲಾವಿದರು ಸೇರಿ 300ಕ್ಕೂ ಹೆಚ್ಚು ನೃತ್ಯಪಟುಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ 15 ನಿಮಿಷಗಳ ಕಾಲ ಶ್ರೀ ನಾಮ ರಾಮಾಯಣಂ ಗೀತಗೆ ಪಕ್ಕ ವಾದ್ಯದೊಂದಿಗೆ ಏಕಕಾಲದಲ್ಲಿ ನೃತ್ಯ ಮಾಡುವ ಮೂಲಕ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ಅಕಾಡೆಮಿ ಮತ್ತು ಮಕ್ಕಳು ಹಾಗೂ ಮಠದ ಹೆಸರನ್ನು ಸೇರಿಸುವ ಹಿನ್ನೆಲೆಯಲ್ಲಿ ಜಪಾನ್ ,ಜರ್ಮನಿ ಇಂಡೋನೇಷಿಯಾ, ದೇಶ ಸೇರದಂತೆ ಭಾರತ ದೇಶದ ಹಲವಾರು ರಾಜ್ಯದ ಭಾಗಗಳಿಂದ ಆಗಮಿಸುತ್ತಿರುವ ಕಲಾವಿದರಿಗೆ ರಾಯರ ದರ್ಶನ ಮಾಡಿಸುವ ಮೂಲಕ ಈ ನೃತ್ಯೋತ್ಸವ ಸಂಭ್ರಮವನ್ನು ರಾಯರ ಪಾದದಲ್ಲಿ ಸಮರ್ಪಣೆ ಮಾಡಲಿದ್ದಾರೆ.
ಈ ಕಾರ್ಯಕ್ರಮವನ್ನು ಆ ದಿನ ಸಂಜೆ 5 ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಸುಬುಧೇ೦ದ್ರ ತೀಥ೯ ಶ್ರೀಪಾದ೦ಗಳವರರು ಉದ್ಘಾಟನೆ ಮಾಡಲಿದ್ದಾರೆ ಎಂದು ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಡಾ. ಸ್ವಾತಿ ಪಿ ಭಾರದ್ವಾಜ್ ತಿಳಿಸಿದ್ದಾರೆ.
Comments
Post a Comment