ನಗರಸಭೆ ಗದ್ದುಗೆ ಏರಿದ ಕಾಂಗ್ರೆಸ್:
                                               ಅಧ್ಯಕ್ಷರಾಗಿ ನರಸಮ್ಮ ನರಸಿಂಹಲು ಮಾಡಗಿರಿ , ಉಪಾಧ್ಯಕ್ಷರಾಗಿ ಸಾಜಿದ್ ಸಮೀರ್ ಅವಿರೋಧ ಆಯ್ಕೆ.     
                                                                                                                ರಾಯಚೂರು,ಆ.28- ನಗರಸಭೆ ಗದ್ದುಗೆ ಏರುವಲ್ಲಿ ಕಾಂಗ್ರೆಸ್ ಪಕ್ಷ ಸಫಲವಾಗಿದೆ.     ಇಂದು ನಡೆದ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ನಗರಸಭೆ  ಅಧ್ಯಕ್ಷರಾಗಿ ನರಸಮ್ಮ ನರಸಿಂಹಲು ಮಾಡಗಿರಿ , ಉಪಾಧ್ಯಕ್ಷರಾಗಿ ಸಾಜಿದ್ ಸಮೀರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಮತ್ತು ಸಹಾಯಕ ಆಯುಕ್ತರಾದ‌ ಮೆಹೆಬೂಬಿ ಘೋಷಿಸಿದರು. 

          ನರಸಮ್ಮ ನರಸಿಂಹಲು ಮಾಡಗಿರಿ ಮಾತನಾಡಿ ನಗರದಲ್ಲಿ ಕುಡಿಯುವ ನೀರು,  ಬೀದಿ ದೀಪ ಮುಂತಾದ ಮೂಲಭೂತ ಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ಉಪಾಧ್ಯಕ್ಷ ಸಾಜಿದ್ ಸಮೀರ್ ಮಾತನಾಡಿ ನನಗೆ ಪಕ್ಷ ಉಪಾಧ್ಯಕ್ಷ ಸ್ಥಾನ ನೀಡಿದೆ  ನಗರದ ಜನತೆಯ ಆಶೀರ್ವಾದದೊಂದಿಗೆ ಎಲ್ಲರ ವಿಶ್ವಾಸ ಪಡೆದು ಸ್ವಚ್ಚ ನಗರಕ್ಕೆ ಸಂಕಲ್ಪಿಸುವುದಾಗಿ ಹೇಳಿದರು.     

                                           

 
ಕ್ರೇನ್ ಮೂಲಕ  ಭಾರಿ ಹಾರ ಮಾಲಾರ್ಪಣೆ: ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯಲ್ಲಿ ತೆರೆಮರೆಯಲ್ಲಿ ಕಸರತ್ತು ಮಾಡಿ ಕಾಂಗ್ರೆಸ್ ಪಕ್ಷದ ತೆಕ್ಕೆಗೆ ನಗರಸಭೆ ತರುವಲ್ಲಿ ಯಶಸ್ವಿಯಾದ ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ಮತ್ತು ಮುಖಂಡರಾದ ಶಾಲಂ, ನರಸಿಂಹಲು ಮಾಡಗಿರಿಗೆ ಕ್ರೇನ್ ಮೂಲಕ ಬೃಹತ್ ಹಾರ ಹಾಕಿ ಪಟಾಕಿ ಸಿಡಿಸಿ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು.

        ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು, ಸಂಸದ ಜಿ.ಕುಮಾರ ನಾಯಕ, ವಿಧಾನ ಪರಿಷತ್ ಸದಸ್ಯರಾದ ಎ.ವಸಂತಕುಮಾರ, ಮುಖಂಡರಾದ ಕೆ.ಶಾಂತಪ್ಪ, ಬಷೀರುದ್ದೀನ್, ನಗರಸಭೆ ಹಿರಿಯ‌ ಸದಸ್ಯಜಯಣ್ಣ, ದರೂರು ಬಸವರಾಜ, ಜಿಂದಪ್ಪ, ರಮೇಶ್,ಎನ್.ಶ್ರೀನಿವಾಸ ರೆಡ್ಡಿ, ಎಂ.ಪವನ ಕುಮಾರ್ ಸೇರಿದಂತೆ ನಗರಸಭೆ ಸದಸ್ಯರು ಉಪಸ್ಥಿತರಿದ್ದರು .ಅಪಾರ ಸಂಖ್ಯೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ನೆರೆದಿದ್ದರು.        

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ