ಎಸ್.ಕೆ.ಇ.ಎಸ್ ಪ್ಯಾರಾ ಮೆಡಿಕಲ್ ಕಾಲೇಜು ವತಿಯಿಂದ ಅಭಿನಂದನಾ ಸಮಾರಂಭ: ಜಿಲ್ಲೆಗೆ ಏಮ್ಸ್ ಶತಸಿದ್ಧ- ಜಿ. ಕುಮಾರ್ ನಾಯಕ. ರಾಯಚೂರು,ಆ.29- ಜಿಲ್ಲೆಗೆ ಏಮ್ಸ್ ಶತಸಿದ್ಧವೆಂದು ಲೋಕಸಭಾ ಸದಸ್ಯರಾದ ಜಿ.ಕುಮಾರ ನಾಯಕ ಹೇಳಿದರು. ಅವರಿಂದು ನಗರದ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಎಸ್.ಕೆ.ಇ.ಎಸ್ ಪ್ಯಾರಾ ಮೆಡಿಕಲ್ ಕಾಲೇಜು ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಜಿಲ್ಲೆ ವಿವಿಧ ಕ್ಷೇತ್ರದಲ್ಲಿ ತನ್ನ ಸಾಧನೆ ಮೆರೆದಿದೆ ಇಲ್ಲಿರುವ ಸುಸಂಸ್ಕೃತ ಜನರು ಸಹೃದಯರಾಗಿದ್ದಾರೆ ನಾನು ಇಲ್ಲಿ ಸೇವೆ ಮಾಡಿದ್ದು ಈಗ ಸಂಸದನನ್ನಾಗಿ ನೀವು ದೆಹಲಿಗೆ ಕಳುಹಿಸಿದ್ದು ನಿಮ್ಮ ಆಶಯಕ್ಕೆ ತಕ್ಕಂತೆ ನಡೆದುಕೊಳ್ಳುತ್ತೇನೆಂದ ಅವರು ಬಸವರಾಜ ಕಳಸ ನೇತೃತ್ವದಲ್ಲಿ ಸುಮಾರು ಎರೆಡು ವರ್ಷಕ್ಕೂ ಮೇಲ್ಪಟ್ಟ ದಿನಗಳಿಂದ ಸುಧೀರ್ಘ ಹೋರಾಟ ನಡೆಯುತ್ತಿದೆ ಏಮ್ಸ್ ನಮ್ಮೆಲ್ಲರ ಹಕ್ಕು ಅದನ್ನು ಪಡೆಯುವುದು ಶತಸಿದ್ಧವೆಂದರು.
ಬಾಬುರಾವ್ ಶೇಗುಣಸಿ ತಮ್ಮ ಸಂಸ್ಥೆಯ ಮೂಲಕ ಅನೇಕ ವಿದ್ಯಾರ್ಥಿಗಳ ಬಾಳಿಗೆ ಭರವಸೆ ಮೂಡಿಸಿದ್ದಾರೆ ಅದೇ ರೀತಿ ಥಾಮಸ್ ಮತ್ತು ಯುವಕರಾದ ಆದಿಲ್ ತಮ್ಮ ಶಿಕ್ಷಣ ಸಂಸ್ಥೆಯಿಂದ ಶೈಕ್ಷಣಿಕ ಪ್ರಗತಿ ಮಾಡುತ್ತಿದ್ದಾರೆಂದರು. ಸಾನಿಧ್ಯ ವಹಿಸಿದ್ದ ಸೋಮವಾರಪೇಟೆ ಹೀರೆಮಠದ ಅಭಿನವ ರಾಚೋಟಿ ವೀರಶಿವಾಚಾರ್ಯ ಶ್ರೀ ಗಳು ಆಶೀರ್ವಚನ ನೀಡಿ ಕುಮಾರ್ ನಾಯಕರು ಜಿಲ್ಲೆಗೆ ಏಮ್ಸ್ ದೊರಕಿಸಿಕೊಡುತ್ತಾರೆ ಎಂಬ ದೃಢ ವಿಶ್ವಾಸವಿದೆ ಎಂದ ಅವರು ಇಂದು ಅವರಿಗೆ ಸನ್ಮಾನ ಮಾಡಿದ್ದು ಸ್ವಾರ್ಥತೆ ಯಿಂದ ಅವರಿಂದ ಅನುದಾನ ಇನ್ನಿತರ ಸಹಾಯಪಡೆಯಲು ಆಯೋಜಕರು ಮಾಡಿಲ್ಲ ಬದಲಾಗಿ ಅವರು ಜಿಲ್ಲೆಗೆ ಕೊಡುಗೆ ನೀಡಲೆಂದು ಎಂದರು. ಪ್ರಧಾನಿ ಲಾಲ ಬಹದ್ದೂರ್ ಶಾಸ್ತ್ರಿ ಯುವರ ಉದಾಹರಣೆ ನೀಡಿ ಅವರಿಗೆ ಬರುತ್ತಿದ್ದ ವೇತನದಲ್ಲಿ ಅವಶ್ಯಕತೆಯಿದ್ದಷ್ಟು ಮಾತ್ರ ಉಪಯೋಗಿಸಿ ಉಳಿದಿದ್ದನ್ನು ಸರ್ಕಾರದ ಕೆಲಸಕ್ಕೆ ವಿನಿಯೋಗಿಸಿ ಆದರ್ಶ ರಾಜಕಾರಣಿಯಾಗಿದ್ದರು ಅವರ ಗುಣ ಇಂದಿನ ರಾಜಕಾರಣಿಗಳು ರೂಡಿಸಿಕೊಳ್ಳಬೇಕು ಎಂದರು. ವೇದಿಕೆಯಲ್ಲಿ ತಬಲಿಜ ಜಮಾತ್ ಮೌಲಾನಾ ನಿಜಾಮುದ್ದೀನ್ ರಶಾದಿ , ರೆ.ಜಾನ್ ವೆಸ್ಲಿ ಡೇವಿಡ್ , ರಾಯಚೂರು ವಿವಿ ಕುಲಪತಿ ಹರೀಶ್ ರಾಮಸ್ವಾಮಿ, ನರಸಿಂಹಲು ವಡವಾಟಿ ಬಸವರಾಜ ಕಳಸ, ರಾಮಚಂದ್ರ ಪ್ರಭು,ಪರಮೇಶ್ವರ್ ಸಾಲಿಮಠ, ಕೇಶವರೆಡ್ಡಿ, ಬಾಬುರಾವ್ ಶೇಗುಣಸಿ, ಬೆಂಜಮಿನ್ ಥಾಮಸ್, ಆದಿಲ್, ಇನ್ನಿತರರು ಇದ್ದರು.
Comments
Post a Comment