ಮತ್ತೊಮ್ಮೆ ಜಲಾವೃತವಾದ ಕಾಡ್ಲೂರು ಶ್ರೀ ಉಪೇಂದ್ರ ತೀರ್ಥ ಕರಾರ್ಚಿತ ಪ್ರಾಣದೇವರ ದೇವಸ್ಥಾನ ರಾಯಚೂರು, ಆ.29- ತಾಲೂಕಿನ ಕಾಡ್ಲೂರು ಕೃಷ್ಣಾ ನದಿ ತೀರದ ಶ್ರೀ ಉಪೇಂದ್ರ ತೀರ್ಥ ಕರಾರ್ಚಿತ ಶ್ರೀ ಪ್ರಾಣದೇವರ ದೇವಸ್ಥಾನ ಮತ್ತೊಮ್ಮೆ ಜಲಾವೃತವಾಗಿದೆ. ನದಿಯಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿದ್ದು ನಾರಾಯಣಪೂರು ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನದಿಗೆ ನೀರು ಬಿಡಲಾಗಿದೆ ಅಲ್ಲದೆ ರಾಜ್ಯದೆಲ್ಲಡೆ ಮಳೆಯಾಗುತ್ತಿದ್ದು ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗುತ್ತಿದೆ. ಕಳೆದ ಒಂದು ತಿಂಗಳ ಹಿಂದೆ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದ್ದರಿಂದ ದೇವಸ್ಥಾನ ಮುಳುಗಡೆಯಾಗಿತ್ತು ಇದೀಗ ಮತ್ತೊಮ್ಮೆ ಮುಳುಗಡೆಯಾಗಿದ್ದು ಭಕ್ತರಿಗೆ ಶ್ರಾವಣಮಾಸದ ಕೊನೆಯಲ್ಲಿ ದೇವಸ್ಥಾನಕ್ಕೆ ತೆರಳುವುದು ಅಸಾಧ್ಯವಾಗಿದೆ. ನದಿಯಲ್ಲಿ ನೀರಿನ ಹರಿವು ಮತ್ತುಷ್ಟು ಏರುವ ಸಾಧ್ಯತೆಯಿದ್ದು ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ ನೀಡಲಾಗಿದೆ.
Comments
Post a Comment