ಸೋಮವಾರ ಪೇಟೆ ಮಠಕ್ಕೆ ಸಚಿವ ಎನ್ಎಸ್ ಬೋಸರಾಜು ಭೇಟಿ: ಸ್ವಾಮಿಗಳಿಂದ ಆಶೀರ್ವಾದ
ರಾಯಚೂರು,ಆ.30-
ನಗರದ ಸೋಮವಾರ ಪೇಟೆ ಹಿರೇಮಠಕ್ಕೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ಎಸ್ ಬೋಸರಾಜು ಅವರು ಭೇಟಿ ನೀಡಿ ಶ್ರೀ ಮಠದ ಪೀಠಾಧಿಪತಿಗಳಾದ ಶ್ರೀ ಅಭಿನವ ರಾಚೋಟಿ ವೀರ ಶಿವಾಚಾರ್ಯ ಮಹಾ ಸ್ವಾಮಿಗಳಿಗೆ ಸನ್ಮಾನಿಸಿ ಆಶೀರ್ವಾದ ಪಡೆದರು. ಶ್ರೀಗಳು ಸಚಿವರಾದ ಎನ್ ಎಸ್ ಬೋಸರಾಜು ಸನ್ಮಾನಿಸಿ ಅವರಿಗೆ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕೆ. ಶಾಂತಪ್ಪ, ರುದ್ರಪ್ಪ ಅಂಗಡಿ, ಮಲ್ಲಿಕಾರ್ಜುನ್ ದೋತರಬಂಡಿ, ಯುವ ಕಾಂಗ್ರೆಸ್ ಜಿಲ್ಲಾದ್ಯಕ್ಷರಾದ ಅರುಣ ದೋತರಬಂಡಿ, ಈರಣ್ಣ ಚಿತ್ರಗಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Comments
Post a Comment