ಮಂತ್ರಾಲಯದಲ್ಲಿ ರಾಯರ ಉತ್ತರಾರಾಧನೆ ಮಹಾರಥೋತ್ಸವಕ್ಕೆ  ಹೆಲಿಕಾಪ್ಟರ್ ನಿಂದ ಪುಷ್ಪ ವೃಷ್ಟಿ:            ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರವರಿಗೆ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ                                 ರಾಯಚೂರು,ಆ.22- ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಾಯರ 353ನೇ ಉತ್ತರಾರಾಧನೆ ಅಂಗವಾಗಿ ಶ್ರೀ ಪ್ರಹ್ಲಾದ ರಾಜರ ಮಹಾರಥೋತ್ಸವ ಅದ್ದೂರಿಯಾಗಿ ನೆರವೇರಿತು. 

                                             ಬೆಳಿಗ್ಗೆ ಶ್ರೀ  ಪ್ರಹಲ್ಲಾದರಾಜರ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು.          ನಂತರ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಮಹಾರಥೋತ್ಸಕ್ಕೆ ಚಾಲನೆ ನೀಡಿ ಅನುಗ್ರಹ ಸಂದೇಶ ನೀಡಿದರು. 

                      ಬಾನಂಗಳಿಂದ ಹೆಲಿಕಾಪ್ಟರ್ ಮೂಲಕ ರಥೋತ್ಸವಕ್ಕೆ ಪುಷ್ಪ ವೃಷ್ಟಿ ನೆರವೇರಿತು.   ಇದಕ್ಕೂ ಪೂರ್ವ ಶ್ರೀಮಠದಲ್ಲಿ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿಯನ್ನು ಮೈಸೂರು ಕೊಡಗು ಸಂಸದರು ಹಾಗೂ ಮೈಸೂರು ಮಹಾರಾಜರಾದ ಶ್ರೀ ಯದುವೀರ ಶ್ರೀ ಕೃಷ್ಣದತ್ತ ಒಡೆಯರ್ ರವರಿಗೆ ಪೀಠಾಧಿಪತಿಗಳು ಪ್ರದಾನ ಮಾಡಿದರು.       

   ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಮಾತನಾಡಿ ಮೈಸೂರು ಮತ್ತು ಮಂತ್ರಾಲಯಕ್ಕೆ ಮೂರು ಶತಮಾನಗಳ ಸಂಬಂಧವಿದೆ ಜಯಚಾಮರಾಜೇಂದ್ರ ಒಡೆಯರ್ ಶ್ರೀ ಮಠದ ಭಕ್ತರಾಗಿದ್ದರು ಅವರು ಶ್ರೀ ಮಠಕ್ಕೆ ಭಕ್ತಿ ಸಮರ್ಪಿಸಿದ್ದಾರೆ ಎಂದರು.

ಗುರು ಪೀಠ ಮತ್ತು ರಾಜಪೀಠಕ್ಕೆ ಅನ್ಯೋನ್ಯ ಸಂಬಂಧವಿದೆ ಎಂದರು. ಪ್ರಜಾ ಪ್ರಭುತ್ವ ಸ್ಥಾಪನೆ ನಂತರ ಅನೇಕ ಸಂಸ್ಥಾನಗಳು ದೇಶದಲ್ಲಿ ವಿಲೀನವಾದವು ಅಂತಹವುಗಳಲ್ಲಿ ಮೊದಲನೆಯದ್ದು ಮೈಸೂರು ಸಂಸ್ಥಾನವೆಂದ ಅವರು ಮೈಸೂರು ಸಂಸ್ಥಾನದ ರಾಜರು ಈ ನಾಡಿಗೆ ಅನೇಕ ಕೂಡುಗೆ ನೀಡಿದ್ದಾರೆ ತಮ್ಮ ಅನೇಕ ಆಸ್ತಿಗಳನ್ನು ಸರ್ಕಾರಕ್ಕೆ ಒಪ್ಪಿಸಿ ತ್ಯಾಗಮಯಿಗಳಾಗಿದ್ದಾರೆ ಸ್ವಾತಂತ್ರ್ಯ ಪೂರ್ವದಲ್ಲಿ ರಾಜ್ಯದಲ್ಲಿ ಅನೇಕ ಜನಪರ ಕಾರ್ಯ ಮಾಡಿದ್ದಾರೆ ಕೆಆರ್ ಎಸ್ ನಿರ್ಮಿಸಿ ಅನ್ನದಾತರಿಗೆ ನೀರಾವರಿ ಕಲ್ಪಿಸಿದ್ದಾರೆ ಜನೋಪಯೋಗಿ ಕಾರ್ಯಕ್ಕೆ ಸಂಸ್ಥಾನದ ಒಡವೆಗಳನ್ನು ಮಾರಿರುವ ಉದಾಹರಣೆಯಿದೆ ಅಂತಹ ವಂಶದ ಕುಡಿಗೆ ಇಂದು ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ ನೀಡುತ್ತಿದ್ದು ಹೆಮ್ಮೆಯ ಸಂಗತಿಯಂದರು. 

  ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಯದುವೀರ ಶ್ರೀಕೃಷ್ಣದತ್ತ ಒಡೆಯರ್ ರವರು ಅನೇಕ ದಿನಗಳಿಂದ ಮಂತ್ರಾಲಯಕ್ಕೆ ಬರಬೇಕು ಎಂದುಕೊಂಡಿದ್ದೆ ಅದಕ್ಕೆ ಇಂದು ಕಾಲ ಕೂಡಿ ಬಂದಿದ್ದು ರಾಯರು ನಮ್ಮನ್ನು ಇಲ್ಲಿಗೆ ಕರೆಸಿಕೊಂಡಿದ್ದಾರೆ ಶ್ರೀ ಮಠ ಹಾಗೂ ಮೈಸೂರು ಸಂಸ್ಥಾನದ ಸಂಬಂಧ ಹೀಗೆ ಮುಂದುವರೆಯಲಿ ಎಂದರು.ಈ ಸಂದರ್ಭದದಲ್ಲಿ ರಾಜಾ ಎಸ್.ಗಿರಿಯಾಚಾರ್ ಇನ್ನಿತರರು ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ