ನಗರದೆಲ್ಲಡೆ ಸಂಭ್ರಮದಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ. ರಾಯಚೂರು,ಆ.26- ದೇವಕಿ ನಂದನ, ವಾಸುದೇವ ಸುತ, ಗೋಪಾಲ, ಶ್ರೀ ಕೃಷ್ಣ... ಹೀಗೆ ಅನೇಕ ನಾಮಗಳಿಂದ ಸ್ತುತಿಸುವ ಲೋಕೋಧ್ಧಾರಕನಾದ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಗರದೆಲ್ಲೆಡೆ ಕೃಷ್ಣ ದೇವಾಲಯಗಳಲ್ಲಿ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.
ಜವಾಹರ್ ನಗರ ಶ್ರೀ ವಿಠಲ ಕೃಷ್ಣ ಮಂದಿರ, ಆರ್ಯ ವೈಶ್ಯ ಗೀತಾ ಮಂದಿರ, ಯಾದವ್ ಸಂಘದ ಕೃಷ್ಣ ದೇವಾಲಯ, ಇಸ್ಕಾನ್ ಮುಂತಾದೆಡೆ ಶ್ರೀ ಕೃಷ್ಣ ಜನ್ಮಾಷ್ಟಮಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಶ್ರೀ ಕೃಷ್ಣನ ಮೂರ್ತಿಗೆ ಭವ್ಯ ಅಲಂಕಾರ ಮಾಡಲಾಗಿತ್ತು.
ವೇದಿಕೆ ಕಾರ್ಯಕ್ರಮದಲ್ಲಿ ಭರತನಾಟ್ಯ, ದಾಸವಾಣಿ, ಕೃಷ್ಣನ ವೇಷ ಭೂಷಣ ತೊಟ್ಟ ಚಿಣ್ಣರ ಕಲರವ ಕೃಷ್ಣನೆ ಧರೆಗಿಳಿದು ಬಂದಂತೆ ಭಾಸವಾಯಿತು.
ಕಣ್ಮನ ಸೆಳೆದ ಕೃಷ್ಣ ವೇಷಧಾರಿ: ಸರ್ವಶ್ರೀ ಎಂಬ ಮುದ್ದು ಬಾಲಕಿ ಕೃಷ್ಣವೇಷಧಾರಿಯಾಗಿ ಕೊಳಲನ್ನು ಹಿಡಿದು ಗಮನ ಸೆಳೆದಳು . ಭಕ್ತರು ಕೃಷ್ಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಗೈದು ಅರ್ಘ್ಯ ಪ್ರದಾನ ಮಾಡಿದರು.
Comments
Post a Comment