ಜಿಲ್ಲಾಡಳಿತದಿಂದ ಅರ್ಥಪೂರ್ಣ ಶ್ರೀಕೃಷ್ಣ ಜಯಂತಿ ಆಚರಣೆ, ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ:

ಶ್ರೀಕೃಷ್ಣನ ಆದರ್ಶ ಪಾಲನೆ ಮಾಡಬೇಕಾಗಿದೆ-  ಎ.ವಸಂತ ಕುಮಾರ

ರಾಯಚೂರು,ಆ.26 ಶ್ರೀಕೃಷ್ಣ ಜೀವನೋತ್ಸಾಹದ ಸಂಕೇತ ಶ್ರೀಕೃಷ್ಣನ ಪ್ರಬುದ್ಧತೆ, ಮುತ್ಸದ್ದಿತನ ಇಂದಿನ ಕಾಲಘಟ್ಟಕ್ಕೂ ಮಾದರಿಯಾಗಿ ನಿಲ್ಲುತ್ತದೆ ಯುದ್ಧ ಕಾಲದಲ್ಲಿ ನೀಡಿದ ಶ್ರೀಕೃಷ್ಣ ಭೋದನೆ ಸಹ ಗಮನ ಸೆಳೆಯುತ್ತದೆ ಆದ್ದರಿಂದ ನಾವೆಲ್ಲರೂ ಶ್ರೀಕೃಷ್ಣನ ಆದರ್ಶ ಪಾಲನೆ ಮಾಡಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಎ.ವಸಂತ ಕುಮಾರ ಅವರು ಹೇಳಿದರು.    

ಅವರಿಂದು ನಗರದ ಯಾದವ ಸಂಘದ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಭಗವದ್ಗೀತೆ ಅರಿತುಕೊಂಡವರು ಜೀವನ ಮೌಲ್ಯ ಮತ್ತು ಬದುಕಿನ ಪ್ರಮುಖ ಅಂಶಗಳನ್ನು ತಿಳಿದುಕೊಳ್ಳತ್ತಾರೆ. ಭಗವದ್ಗೀತೆಯ ಸಾರವನ್ನು ಮಾತ್ರವೇ ಶ್ರೀಕೃಷ್ಣನು ಭೋದಿಸದೆ ತಮ್ಮ ಜೀವನದಿಂದಲೂ ಮಾನವ ಅರಿತುಕೊಳ್ಳಬೇಕಾದ ಅಂಶಗಳನ್ನು ತಿಳಿಸಿಕೊಟ್ಟಿದ್ದಾರೆ ಎಂದರು.   


 

ಭಗವಾನ್ ವಿಷ್ಣುವಿನ ಎಂಟನೆಯ ಅವತಾರವಾಗಿರುವ ಶ್ರೀಕೃಷ್ಣನು, ದುಷ್ಟರನ್ನು ಶಿಕ್ಷಿಸುವುದಕ್ಕೆ ಮತ್ತು ಧರ್ಮದಸ್ಥಾಪನೆಗಾಗಿ ಅವತಾರವೆತ್ತಿದ್ದಾನೆ. ತನ್ನ ಅವತಾರದ ಮಹತ್ವ ಮತ್ತು ಧರ್ಮ ಸಂಸ್ಥಾಪನೆಯ ಉದ್ದೇಶವನ್ನು ಕೃಷ್ಣನು ಅರ್ಜುನನಿಗೆ ಮಹಾಭಾರತ ಯುದ್ಧ ಸಮಯದಲ್ಲಿ ಭೋದಿಸಿದ್ದಾರೆ. ಜೀವನದ ಪ್ರತಿ ಹಂತದಲ್ಲೂ ಕೃಷ್ಣ ನಮಗೆ ಆದರ್ಶ ಪುರುಷನಾಗಿ ಕಾಣುತ್ತಾನೆ ಎಂದರು.

ಈ ವೇಳೆ ರಾಯಚೂರು ತಹಶೀಲ್ದಾರ್ ಸುರೇಶ್ ವರ್ಮ ಅವರು ಮಾತನಾಡಿ, ಕೃಷ್ಣ ಉತ್ತಮ ರಾಜನೀತಿಜ್ಞನಾಗಿದ್ದು, ಸಹನೆ, ತಾಳ್ಮೆಯಂತಹ ಗುಣಗಳಿಂದ ವಿಶಿಷ್ಟವಾಗಿ ನಿಲ್ಲುತ್ತಾನೆ. ಕಲಿಯುಗದಲ್ಲಿ ನಡೆಯಬಹುದಾದ ವಿದ್ಯಮಾನಗಳ ಬಗ್ಗೆ ದ್ವಾಪರ ಯುಗದಲ್ಲಿಯೇ ಶ್ರೀಕೃಷ್ಣ ತಿಳಿಸಿದ್ದ. ಧರ್ಮ, ಪರಂಪರೆ, ಸಾತ್ವಿಕ ರಕ್ಷಣೆಗೆ ಶ್ರೀಕೃಷ್ಣ ಕಾರಣರಾದರು ಎಂದರು.

ಪಸ್ತುತ ನಡೆಯುತ್ತಿರುವ ಎಲ್ಲ ವಿದ್ಯಮಾನಗಳಿಗೆ, ರಾಜಕೀಯ ರಣತಂತ್ರ, ಚಾಣಾಕ್ಷ ನಡೆಗಳಿಗೆ ಕೃಷ್ಣನ ಜೀವನ ಚರಿತ್ರೆಯೇ ಮೂಲಾಧಾರ. ಜಗತ್ತಿನ ಎಲ್ಲ ಆಗುಹೋಗುಗಳಿಗೆ ಅವನೇ ಸೂತ್ರಧಾರ. ಮಾನವೀಯ ಮೌಲ್ಯಗಳು ನಶಿಸುತ್ತಿರುವ ಇಂದಿನ ದಿನಗಳಲ್ಲಿ ಕೃಷ್ಣನ ಆದರ್ಶಗಳು ನಮಗೆ ಮಾರ್ಗದರ್ಶನ ನೀಡುತ್ತವೆ. ಶತ್ರುಗಳ ಸಂಹಾರಕ್ಕಾಗಿ ಅವತಾರ ತಾಳಿದ ಕೃಷ್ಣ ಶಿಷ್ಟರನ್ನು ರಕ್ಷಿಸಿದ ಎಂದರು.  ಮಾಜಿ   ಎಂಎಲ್ಸಿ  ಎನ್.ಶಂಕ್ರಪ್ಪ ವಕೀಲರು  ಮಾತನಾಡಿ, ಮಹಾಭಾರತ ಹಾಗೂ ಭಗವದ್ಗೀತೆ ನೀಡುವ ಸಂದೇಶವನ್ನು ಎಲ್ಲರೂ ಅರಿತುಕೊಳ್ಳಬೇಕಿದೆ ಧರ್ಮವನ್ನು ಉಳಿಸುವಲ್ಲಿ ಕೃಷ್ಣನ ಪಾತ್ರ ಮಹತ್ವದ್ದಾಗಿದೆ. ಅಧರ್ಮವನ್ನು ನಾಶಗೊಳಿಸಲು ಕೃಷ್ಣ ಅವತಾರ ಎತ್ತಿದರು ಅಂಧಕಾರವನ್ನು ತೊಲಗಿಸಲು ಕೃಷ್ಣ ಮಧ್ಯರಾತ್ರಿ ಜನ್ಮ ತಾಳಿದ ಕೃಷ್ಣನ ಜೀವನ ದರ್ಶನ ಮಾಡಿಕೊಂಡು ಎಲ್ಲರೂ ಸನ್ಮಾರ್ಗದಲ್ಲಿ ಸಾಗುವಂತಾಗಬೇಕು ಎಂದರು. 

ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಹರೀಶ್, ಮುಖಂಡರಾದ ತಿಮ್ಮಪ್ಪ ನಾಡಗೌಡ, ಹರೀಶ್ ನಾಡಗೌಡ, ರಾಮರೆಡ್ಡಿ,ದಾನಪ್ಪ ಯಾದವ್, ಸಮಾಜದ ಜಿಲ್ಲಾಧ್ಯಕ್ಷ ಹನಮಂತಪ್ಪ ಯಾದವ್ ಸೇರಿದಂತೆ ಇತರರು ಇದ್ದರು.   


                                                                             
ಭವ್ಯ ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ನಡೆದ ಶ್ರೀ ಕೃಷ್ಣನ ಭಾವಚಿತ್ರದ ಮೆರವಣಿಗೆಯಲ್ಲಿ ಸಣ್ಣ ನಿರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಭಾಗವಹಿಸಿದ್ದರು. ಮುಖಂಡರಾದ ಕೆ.ಶಾಂತಪ್ಪ, ತಿಮ್ಮಪ್ಪ ನಾಡಗೌಡ ಇನ್ನಿತರರು ಇದ್ದರು.


Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ