ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರ ನಡೆ ವಿರೋಧಿಸಿ  ಆ.27 ರಂದು ಬೆಂಗಳೂರಲ್ಲಿ ಪ್ರತಿಭಟನೆ:                 
ಮೂಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಪಾತ್ರವಿಲ್ಲ- ಕೆ.ಶಾಂತಪ್ಪ.       
                              ರಾಯಚೂರು,ಆ.25- ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರ ನಡೆ ವಿರೋಧಿಸಿ ಆ.27 ರಂದು ಬೆಂಗಳೂರಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹಿಂದುಳಿದ ವರ್ಗಗಳ ಒಕ್ಕೂಟ ಜಿಲ್ಲಾಧ್ಯಕ್ಷ ಕೆ.ಶಾಂತಪ್ಪ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ  ಮೂಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ಸಿದ್ದರಾಮಯ್ಯ ಏಳ್ಗೆ ಸಹಿಸದೆ ಅವರ ಜನಪ್ರಿಯತೆ ಮತ್ತು ಪಂಚ ಗ್ಯಾರಂಟಿಗಳ ಯಶಸ್ಸು ಕಂಡು ಹತಾಶರಾಗಿದ್ದಾರೆ  ಎಂದು ಹೇಳಿದರು. ಬಡವರ, ಶೋಷಿತರ ಪರ ಕಾಂಗ್ರೆಸ್ ಪಕ್ಷ ಇರುವ ಕಾರಣ ಜನರು ನಮಗೆ ಆಶೀರ್ವದಿಸಿದ್ದರಿಂದ ಬಿಜೆಪಿ ಜೆಡಿಎಸ್ ವಾಮ ಮಾರ್ಗದಿಂದ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ಮಾಡುತ್ತಿವೆ ಅದಕ್ಕೆ ಕೇಂದ್ರ ಬಿಜೆಪಿ ನಾಯಕರು ಸಹ ಕೈಜೋಡಿಸಿದ್ದಾರೆ ಎಂದರು.

ರಾಜ್ಯಪಾಲರು ಸಂವಿಧಾನ ವಿರೋಧಿ ನಡೆ ಅನುಸರಿಸಿದ್ದು ಯಾವುದೇ ಆಯೋಗ, ತನಿಖಾ ಸಂಸ್ಥೆ ವರದಿ ನೀಡದಿದ್ದರು ಪ್ರಾಸಿಕ್ಯೂಷನ್ ಗೆ ಅನುಮತಿ ಸಿದ್ದಾರೆ ಎಂದ ಅವರು ಲೋಕಾಯುಕ್ತ ಸಂಸ್ಥೆ ಹೆಚ್.ಡಿ.ಕುಮಾರ ಸ್ವಾಮಿ  ಇನ್ನಿತರರ ವಿರುದ್ಧ ಅಭಿಯೋಜನೆಗೆ ಕೋರಿದ್ದರು ರಾಜ್ಯಪಾಲರು ಅನುಮತಿ ನೀಡದಿರುವುದು ನೋಡಿದರೆ ಇದೊಂದು ದುರುದ್ದೇಶದ ನಡೆ ರಾಜ್ಯಪಾಲರು ತೋರುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ಎಂದು ದೂರಿದರು. ಸಿದ್ದರಾಮಯ್ಯ ಸರ್ವ ಜಾತಿಗಳ ನಾಯಕ ಎಲ್ಲಾ ಸಮಾಜದವರು ಅವರನ್ನು ಕೊಂಡಾಡುತ್ತಾರೆ ಈ ಹಿಂದೆ ದಾವಣಗೇರಿಯಲ್ಲಿ ನಡೆದ ಸಿದ್ದರಾಮೋತ್ಸವದಲ್ಲಿ ಲಕ್ಷಾಂತರ ಜನರು ಸೇರಿದ್ದನ್ನು ಕಂಡು ದಿಗಿಲಾಗಿ ಬಿಜೆಪಿ, ಜೆಡಿಎಸ್ ಪಕ್ಷದ ವರಿಷ್ಠರು ಷಡ್ಯಂತ್ರದಿಂದ ಸಿದ್ದರಾಮಯ್ಯ ರಾಜಕೀಯ ಜೀವನಕ್ಕೆ ಕುಂದು ತರುತ್ತಿದ್ದಾರೆ ಎಂದರು.                                                        ಈ ಸಂದರ್ಭದಲ್ಲಿ   ಶ್ರೀ ಕಾಂತ ವಕೀಲ, ವಿ.ಲಕ್ಷ್ಮೀಕಾಂತರೆಡ್ಡಿ, ಸುರೇಖಾ,ಜಿ. ಸುರೇಶ್, ಪಂಪಾಪತಿ, ಜಂಬಣ್ಣ ಇನ್ನಿತರರು ಇದ್ದರು
.

Comments

Popular posts from this blog