ಆ.29 ರಂದು ಸಂಸದ ಕುಮಾರ್ ನಾಯಕರಿಗೆ ಬೃಹತ್ ಅಭಿನಂದನಾ ಸಮಾರಂಭ- ಬಾಬುರಾವ್ ರಾಯಚೂರು,ಆ.27- ನೂತನ ಲೋಕಸಭಾ ಸದಸ್ಯರಾದ ಜಿ.ಕುಮಾರ ನಾಯಕ ರವರಿಗೆ ಆ.29 ರಂದು ಬೃಹತ್ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ ಎಂದು ಎಸ್ ಕೆ.ಇ.ಎಸ್ ಪ್ಯಾರಾಮೆಡಿಕಲ್ ಕಾಲೇಜಿನ ಪ್ರಾಚಾರ್ಯರಾದ ಡಾ.ಬಾಬು ರಾವ ಶೇಗುಣಸಿ ಹೇಳಿದರು.
ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಂದು ಬೆಳಿಗ್ಗೆ 9.30ಕ್ಕೆ ನಗರದ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮ ಉದ್ಘಾಟನೆಯನ್ನು ರಾಯಚೂರು ವಿಶ್ವವಿದ್ಯಾಲಯ ಕುಲಪತಿಗಳಾದ ಡಾ.ಹರೀಶ ರಾಮಸ್ವಾಮಿ ಮಾಡಲಿದ್ದು ಸಾನಿಧ್ಯವನ್ನು ಅಭಿನವ ರಾಚೋಟಿ ವೀರಶಿವಾಚಾರ್ಯ ಶ್ರೀ ಗಳು ,ತಬಲಿಜ ಜಮಾತ್ ಮೌಲಾನಾ ನಿಜಾಮುದ್ದೀನ್ ರಶಾದಿ ಹಾಗೂ ರೆ.ಜಾನ್ ವೆಸ್ಲಿ ಡೇವಿಡ್ ಆಗಮಿಸಲಿದ್ದಾರೆ ಎಂದರು. ಗೌರವಾಧ್ಯಕ್ಷತೆಯನ್ನು ಏಮ್ಸ್ ಹೋರಾಟ ಸಮಿತಿಯ ಬಸವರಾಜ ಕಳಸ ವಹಿಸಲಿದ್ದು, ಅತಿಥಿಗಳಾಗಿ ಪ್ರೋ.ಪರಮೇಶ್ವರ ಸಾಲಿಮಠ,ರಾಮಚಂದ್ರ ಪ್ರಭು, ಕೇಶವರೆಡ್ಡಿ, ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.ಈ ಸಂದರ್ಭದಲ್ಲಿ ಥಾಮಸ್ ಬೆಂಜಮಿನ್, ಆದಿಲ್,ಶರಣಪ್ಪ ನಂದಿಹಾಳ, ಭೀಮರೆಡ್ಡಿ ಇದ್ದರು.
Comments
Post a Comment