ಆ.29 ಮತ್ತು 30 ರಂದು ರಾಜ್ಯಮಟ್ಟದ ಹೊನಲು ಬೆಳಕಿನ ಹಾಕಿ ಪಂದ್ಯಾವಳಿ:                                                                            ಪುರುಷರು ಮತ್ತು ಮಹಿಳೆಯರ 24 ತಂಡಗಳು ಭಾಗಿ- ಜಯ ಪ್ರಕಾಶ್ ರೆಡ್ಡಿ.                                                       ರಾಯಚೂರು,ಆ.27- ಹಾಕಿ ಮಾಂತ್ರಿಕ ಧ್ಯಾನ ಚಂದರವರ 119ನೆ ಹುಟ್ಟು ಹಬ್ಬದ ಪ್ರಯುಕ್ತ ಆ.29 ಮತ್ತು 30 ರಂದು ಹೊನಲು ಬೆಳಕಿನ ಹಾಕಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಹಾಕಿ ರಾಯಚೂರು ಸಂಸ್ಥೆಯ ಉಪಾಧ್ಯಕ್ಷ ಜಯಪ್ರಕಾಶ್ ರೆಡ್ಡಿ ಹೇಳಿದರು.             ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಷ್ಟ್ರೀಯ ಹಾಕಿ ದಿನಾಚರಣೆ ಪ್ರಯುಕ್ತ ಹಾಕಿ ರಾಯಚೂರು ಮತ್ತು ಹಾಕಿ ಕರ್ನಾಟಕ ಸಂಯುಕ್ತಾಶ್ರಯದಲ್ಲಿ ಆ.29 ರಂದು ಮಧ್ಯಾಹ್ನ 3.30ಕ್ಕೆ ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದ ಬಾಸ್ಕೇಟ್ ಬಾಲ್ ಕೋರ್ಟ್ ನಲ್ಲಿ ಆಯೋಜಿಸಲಾಗಿದ್ದು ಉದ್ಘಾಟನೆಯನ್ನು ಶಾಸಕ ಡಾ.ಶಿವರಾಜ ಪಾಟೀಲ್ ಹಾಗೂ ವಿಧಾನ ಪರಿಷತ್ ಸದಸ್ಯ ಎ. ವಸಂತ್ ಕುಮಾರ್ ಮಾಡಲಿದ್ದು ಮುಖ್ಯ ಅತಿಥಿಗಳಾಗಿ ಆರ್ ಡಿ ಎ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ರವಿ ಫೌಂಡೇಶನ್ ಅಧ್ಯಕ್ಷ ರವಿ ಪಾಟೀಲ್ ಆಗಮಿಸಲಿದ್ದಾರೆಂದು.                                 ಆ.30 ರಂದು ರಾತ್ರಿ 9.30 ನಡೆಯುವ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು, ಲೋಕಸಭಾ ಸದಸ್ಯ ಜಿ.ಕುಮಾರ ನಾಯಕ ಆಗಮಿಸಲಿದ್ದು , ಬಹುಮಾನ ವಿತರಣೆಯನ್ನು ಎನ್.ಶಶಿಕಲಾ ದಿ. ಎನ್.ಈಶ್ವರ ಪ್ರಸಾದ್ ಮಾಡಲಿದ್ದಾರೆಂದರು. ಹಾಕಿ ಪಂದ್ಯಾವಳಿಯಲ್ಲಿ ರಾಜ್ಯ ಮತ್ತು ಹೊರರಾಜ್ಯಗಳಿಂದ ಸುಮಾರು 24 ಪುರುಷ ಮತ್ತು ಮಹಿಳಾ ತಂಡಗಳು ಭಾಗವಹಿಸಲಿವೆ ಎಂದರು. ಹಾಕಿ ನಮ್ಮ ದೇಶಿ ಕ್ರೀಡೆಯಾಗಿದ್ದು ಅದನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕೆಂದ ಅವರು ಹಾಕಿ ಕ್ರೀಡೆ ತರಬೇತುದಾರರು ಮತ್ತು ಪ್ರತ್ಯೇಕ ಕ್ರೀಡಾಂಗಣ ಅವಶ್ಯಕತೆಯಿದ್ದು ಸರ್ಕಾರ ಇದರ ಬಗ್ಗೆ ಗಮನಹರಿಸಬೇಕೆಂದ ಅವರು ಯುವ ಪೀಳಿಗೆ ಕ್ರೀಡೆಯಲ್ಲಿ ಹೆಚ್ಚು ತೊಡಗಿಸಿಕೊಂಡಾಗ ಮಾತ್ರ ರೋಗ ರುಜಿನಗಳಿಂದ ದೂರವಿರಲು ಸಾಧ್ಯ ದೈಹಿಕ ಹಾಗೂ ಮಾನಸಿಕವಾಗಿ ಸದೃಡರಾಗಿರಲು ಕ್ರೀಡೆ ಅತ್ಯವಶ್ಯಕವೆಂದರು.                                   ಈ ಸಂದರ್ಭದಲ್ಲಿ  ರಾಷ್ಟ್ರೀಯ ಮಾಜಿ ಹಾಕಿ ಕ್ರೀಡಾಪಟು ಹನುಮಂತಪ್ಪ, ಇಸ್ಮಾಯಿಲ್, ತಿರುಮಲ ರೆಡ್ಡಿ, ಇನ್ನಿತರರು ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ