ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್: ಸರ್ಕಾರದ ಹಸ್ತಕ್ಷೇಪವಿಲ್ಲ- ಸಚಿವ ಬೋಸರಾಜು                                                                                                                  ರಾಯಚೂರು, ಆ.28- ರೇಣುಕಾಸ್ವಾಮಿ‌ ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವ ಪ್ರಕ್ರಿಯೆಯಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ ಪೊಲೀಸರು ಮತ್ತು ಜೈಲು ಅಧಿಕಾರಿಗಳ ನಿರ್ಣಯದಂತೆ ಮತ್ತು ನ್ಯಾಯಾಲಯ ಅನುಮತಿ ಪಡೆದು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗುತ್ತಿದೆ ಇದರಲ್ಲಿ ಯಾವುದೆ ಸಚಿವರು ಮತ್ತು ಸರ್ಕಾರದ ಹಸ್ತಕ್ಷೇಪವಿಲ್ಲವೆಂದು ಸಣ್ಣ ನೀರಾವರಿ ‌ಹಾಗೂ ವಿಜ್ಞಾನ ಮತ್ತು  ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು  ಹೇಳಿದರು.

ಅವರಿಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆರವರು ಅಕ್ರಮವಾಗಿ ಯಾವುದೆ ಭೂಮಿ ಪಡೆದಿಲ್ಲ ಬಿಜೆಪಿ ಆರೋಪದಲ್ಲಿ ಹುರುಳಿಲ್ಲವೆಂದರು. ಮೂಡಾ ಪ್ರಕರಣದಲ್ಲಿ ಸಿಎಂ ಪಾತ್ರವಿಲ್ಲದಿದ್ದರೂ ಬಿಜೆಪಿ ಮತ್ತು ಜೆಡಿಎಸ್ ಕ್ಷುಲ್ಲಕ ರಾಜಕೀಯ ಮಾಡುತ್ತಿವೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಿಟ್ ಆಂಡ್ ರನ್ ಮಾಡುತ್ತಾರೆ ಯಾವುದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದಿಲ್ಲವೆಂದರು.                             ಸರ್ಕಾರ ಸುಭದ್ರವಾಗಿದ್ದು ವಿರೋಧ ಪಕ್ಷಗಳು ವಾಮ  ಮಾರ್ಗದಿಂದ  ಕೇಂದ್ರ ಸರ್ಕಾರ ಅಧೀನದ  ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಸರ್ಕಾರ ಅಸ್ಥಿರಗೊಳಿಸುವ ಹುನ್ನಾರ ಮಾಡುತ್ತಿದೆ ಅದು ಸಫಲವಾಗುವುದಿಲ್ಲವೆಂದ ಅವರು ಬಿಜೆಪಿ ನಿರಂತರವಾಗಿ ಆಪರೇಷನ್ ಕಮಲ ಮಾಡುತ್ತಿರುತ್ತದೆ ಅದಕ್ಕೆ ನಾವು ಬಲಿಯಾಗುವುದಿಲ್ಲವೆಂದರು. ಈ ಸಂದರ್ಭದಲ್ಲಿ ಸಂಸದ ಜಿ‌.ಕುಮಾರ ನಾಯಕ ಇನ್ನಿತರರು ಇದ್ದರು.

Comments

Popular posts from this blog