ಅ.3 ರಿಂದ ಮುನ್ನೂರು ಕಾಪು ಸಮಾಜದಿಂದ ನವರಾತ್ರಿ ಉತ್ಸವ ಆರಂಭ:

ಜಿಲ್ಲಾ ಮಟ್ಟದ ಪ್ರೌಢಶಾಲೆ, ಕಾಲೇಜುಗಳ ವಿದ್ಯಾರ್ಥಿಗಳಿಂದ ನೃತ್ಯ, ಸಮೂಹ ಗಾಯನ ಸ್ಫರ್ಧೆ- ಎ.ಪಾಪಾರೆಡ್ಡಿ

ರಾಯಚೂರು,ಸೆ.30- ಮುನ್ನೂರು ಕಾಪು ಸಮಾಜದ ವತಿಯಿಂದ ಶ್ರೀ ಮಾತಾ ಮಹಾಲಕ್ಷ್ಮಿ ಹಾಗೂ ಶ್ರೀಮಾತಾ ಕಾಳಿಕಾದೇವಿಯ ನವರಾತ್ರಿ ಉತ್ಸವ ಅ. 3 ರಿಂದ 11 ರವರೆಗೆ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಮುನ್ನೂರು ಕಾಪು ಸಮಾಜ ಮುಖಂಡ ಹಾಗೂ ಮಾಜಿ ಶಾಸಕ ಎ.ಪಾಪಾರೆಡ್ಡಿ ಹೇಳಿದರು.   ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಉತ್ಸವದಲ್ಲಿ ಹೆಸರಾಂತ ಸಂಗೀತ ನೃತ್ಯಕಲಾ ತಂಡಗಳು ಭಾಗವಹಿಸಲಿವೆ ಎಂದ ಅವರು ಜಿಲ್ಲಾ ಮಟ್ಟದ ಪ್ರೌಢಶಾಲಾ ಹಾಗೂ ಕಾಲೇಜುಗಳ ಕಲಾತಂಡಗಳನ್ನು ಆಹ್ವಾನಿಸಲಾಗುತ್ತದೆ ಎಂದರು. ಆಯ್ಕೆಯಾದ ತಂಡಗಳಿಗೆ ಸೂಕ್ತ ಬಹುಮಾನ ನೀಡಿ ಗೌರವಿಸಲಾಗುವುದು ಎಂದರು.

ಈ ನವರಾತ್ರಿ ದಸರಾ ಉತ್ಸವದಲ್ಲಿ ಜಿಲ್ಲಾ ಮಟ್ಟದ  ಪ್ರೌಢ ಶಾಲೆ ಹಾಗೂ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸ್ಫರ್ಧೆ ಆಯೋಜಿಸಲಾಗಿದ್ದು ಜಾನಪದ, ನವದುರ್ಗೆ ನೃತ್ಯ, ಭರತ ನಾಟ್ಯ, ಸಮೂಹ ಗೀತೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಭಾಗವಹಿಸುವ ನೃತ್ಯ ತಂಡದಲ್ಲಿ 12ರಿಂದ 15ವಿದ್ಯಾರ್ಥಿಗಳು  ಭಾಗವಹಿಸಬಹುದು. ಸಮೂಹ ಗೀತೆಗಳಲ್ಲಿ ವಾದ್ಯ ಮೇಳ ಸಮೇತ 8ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದೆ. ಪ್ರೌಢಶಾಲಾ ಮುಖ್ಯಾಧ್ಯಾಪಕ ಹಾಗೂ ಕಾಲೇಜು ಪ್ರಚಾರ್ಯರ ದೃಢೀಕರಣ ಪತ್ರವನ್ನು ಯಾದಿಗೆ ಲಗತ್ತಿಸಬೇಕು ಎಂದು ವಿವರಿಸಿದರು.


ಕಾಲೇಜು ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ 30 ಸಾವಿರ ನಗರದ, ದ್ವಿತೀಯ 2೦ ಸಾವಿರ, ತೃತೀಯ 15 ಸಾವಿರ ನಗದು ಬಹುಮಾನ ಹಾಗೂ ಟ್ರೋಫಿ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಪ್ರೌಢಶಾಲಾ ವಿಭಾಗದಲ್ಲಿ ಪ್ರಥಮ ಬಹುಮಾನ 25 ದ್ವಿತೀಯ 15 ಸಾವಿರ, ತೃತೀಯ 10 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ಹೇಳಿದರು.

ಕಾಲೇಜು ಹಾಗೂ ಪ್ರೌಢಶಾಲಾ  ವಿದ್ಯಾರ್ಥಿಗಳ ಸಮೂಹ ಗೀತೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ 20 ಸಾವಿರ ನಗದು, ದ್ವಿತೀಯ 15 ಸಾವಿರ ಹಾಗೂ ತೃತೀಯ 10ಸಾವಿರ ನಗದು ಬಹುಮಾನ ನೀಡಲಾಗುತ್ತಿದೆ. ಆಸ್ತಕ ಕಲಾತಂಡಗಳು ಪಟ್ಟಿಯನ್ನು ಮುನ್ನೂರುಕಾಪು ಶಿಕ್ಷಣ ಸಂಸ್ಥೆಯಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಡಾ.ಶರಣಪ್ಪ ಗೋನಾಳ ಮೊಬೈಲ್ ನಂಬರ್ 9448910253  ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.

ಮುನ್ನೂರು ಕಾಪು ಸಮಾಜ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ಸಮಾಜದ ಮುಖಂಡರಾದ ಗೋಪಾಲರೆಡ್ಡಿ, ಜಿ.ಬಸವರಾಜರೆಡ್ಡಿ, ನಗರಸಭೆ ಸದಸ್ಯ ಶ್ರೀನಿವಾಸರೆಡ್ಡಿ, ಭಂಗಿ ನರಸರೆಡ್ಡಿ, ಶಂಕರರೆಡ್ಡಿ, ರಾಜೇಂದ್ರರೆಡ್ಡಿ, ಚಂದ್ರಶೇಖರರೆಡ್ಡಿ ಇನ್ನಿತರರು ಇದ್ದರು.


Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ