ಗೋವಿಂದ ಗಾನ:  ಕರಪತ್ರ ಬಿಡುಗಡೆ

ರಾಯಚೂರು,ಸೆ.14-  ನಗರದಲ್ಲಿ ಇದೇ ತಿಂಗಳು 21 ಮತ್ತು 22 ಶನಿವಾರ ಮತ್ತು ಭಾನುವಾರದಂದು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಹಮ್ಮಿಕೊಂಡ ಶ್ರೀ ಅಸ್ಕಿಹಾಳ ಗೋವಿಂದ ದಾಸರ ಸ್ಮರಣೋತ್ಸವದ ಅಂಗವಾಗಿ 

ಜರಗಲಿರುವ ಗೋವಿಂದ ಗಾನ ಕಾರ್ಯಕ್ರಮದ ಕರಪತ್ರವನ್ನು ನಿನ್ನೆ ಸಂಜೆ  ಜವಾಹರ್ ನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪೂಜೆ ಸಲ್ಲಿಸುವುದರ ಮೂಲಕ ಬಿಡುಗಡೆಗೊಳಿಸಲಾಯಿತು.


  ಶ್ರೀ ಮಠದ ಸಂಸ್ಕೃತ ವಿದ್ಯಾಪೀಠದ ಅಧ್ಯಾಪಕರಾದ ಶ್ರೀ ಆನಂದ್ ದಿವಾನಜಿ ಯವರು ಕರ ಪತ್ರವನ್ನು ಬಿಡುಗಡೆಗೊಳಿಸಿ ಇದೊಂದು ರಾಯಚೂರಿನಲ್ಲಿ ಖ್ಯಾತ ಗಾಯಕ ಡಾ. ರಾಯಚೂರು ಶೇಷಗಿರಿ ದಾಸ ಇವರ ನೇತೃತ್ವದಲ್ಲಿನಡೆಯುತ್ತಿರುವ ದಾಸ ಸಾಹಿತ್ಯ ಸುಂದರವಾದ ಕಾರ್ಯಕ್ರಮ ವಾಗಿದ್ದು, ಇದರಲ್ಲಿ ಎಲ್ಲರೂ ಭಾಗವಹಿಸಬೇಕೆಂದು ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. 


   ಈ ಬಿಡುಗಡೆಯ ಸಮಾರಂಭದಲ್ಲಿ ಶ್ರೀ ಮುರಳಿಧರ ಕುಲಕರ್ಣಿ ಅವರು ಮಾತನಾಡಿ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಎಲ್ಲಾ ಆಸಕ್ತ ಬಂಧುಗಳು ಭಾಗವಹಿಸಬಹುದಾಗಿದೆ ಎಂದು ಹೇಳಿದರು. 


ಶ್ರೀ ಪ್ರಸನ್ನ ಆಲಂಪಲ್ಲಿ, ವಾಸುದೇವ ಪಟವಾರಿ, ನರಸಿಂಹಮೂರ್ತಿ ಕುಲಕರ್ಣಿ, ವೇಣುಗೋಪಾಲ್ ವರಪ್ಪ, ಪತ್ರಕರ್ತ ಜಯಕುಮಾರ ದೇಸಾಯಿ ಕಾಡ್ಲೂರು, ರಮೇಶ್, ರಾಘವೇಂದ್ರ ಜಾಗೀರದಾರ, ಕೊಪ್ರೇಶ್ ದೇಸಾಯಿ, ರಾಘವೇಂದ್ರ ಇನಾಂದಾರ್, ಲಕ್ಷ್ಮಿಕಾಂತ್ ಬಾಗಲವಾಡ, ಕಲಾವಿದೆ ಪರಿಮಳ ದೀಕ್ಷಿತ್, ಶ್ರೀಮತಿ ಸುಷ್ಮಾಕರಣ೦, ಶ್ರೀಮತಿ ನಾಗರತ್ನ ಕುಲಕರ್ಣಿ ,ಶ್ರೀ ರಾಘವೇಂದ್ರ ಸ್ವಾಮಿಗಳ  ಪಂಡಿತರು ಮತ್ತು ಸಿಬ್ಬಂದಿಗಳು, ಇನ್ನಿತರರು


ಉಪಸ್ಥಿತರಿದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್