ಸೆ.27 ರಂದು ಹಿಂದೂ ಮಹಾ ಗಣಪತಿ ವಿಸರ್ಜನೆ ಬೃಹತ್ ಶೋಭಾಯಾತ್ರೆ- ರವಿ ಕುಮಾರ್ ರಾಯಚೂರು,ಸೆ.24- ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ರಾಯಚೂರು ಜಿಲ್ಲೆ ವತಿಯಿಂದ ಪ್ರತಿಷ್ಟಾಪಿಸಿದ ಹಿಂದೂ ಮಹಾಗಣಪತಿ ವಿಸರ್ಜನಾ ಬೃಹತ್ ಶೋಭಾಯಾತ್ರೆ ಸೆ.27 ರಂದು ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಕಾರ್ಯದರ್ಶಿ ರವಿ ಕುಮಾರ್ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಿಹೆಚ್ ಪಿ , ಬಜರಂಗದಳ ಸಹಯೋಗದೊಂದಿಗೆ ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಆರ್ ಜೆ ಎಸ್ ಕಲ್ಯಾಣ ಮಂಟಪದಲ್ಲಿ ಗಣೇಶ ಚತುರ್ಥಿ ಯಂದು ಗಣೇಶನನ್ನು ಪ್ರತಿಷ್ಠಾಪಿಸಿದ್ದು ಸೆ.27 ರಂದು ಬೃಹತ್ ವಿಸರ್ಜನಾ ಶೋಭಾಯಾತ್ರೆ ಮಧ್ಯಾಹ್ನ 11.45ಕ್ಕೆ ಪ್ರಾರಂಭವಾಗಲಿದ್ದು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಖಾಸ್ ಬಾವಿಯಲ್ಲಿ ವಿಸರ್ಜನೆಯಾಗಲಿದ್ದು ವಿವಿಧ ಕಲಾ ತಂಡಗಳು ಭಾಗವಹಿಸಲಿದ್ದು ಸಮಸ್ತ ಹಿಂದೂ ಬಾಂಧವರು ಪಾಲ್ಗೊಳ್ಳಬೇಕೆಂದು ಕೋರಿದರು.
ಪ್ರತಿ ದಿನ ಗಣೇಶನಿಗೆ ವಿಶೇಷ ಪೂಜೆ, ಮಂಗಳಾರತಿ ನೆರವೇರಿಸಲಾಗುತ್ತಿದೆ ಅಲ್ಲದೆ ಹೋಮ ಹವನ ಸಹ ಕೈಗೊಳ್ಳಲಾಗಿತ್ತು ಎಂದರು. ಈ ಸಂದರ್ಭದಲ್ಲಿ ಸುನೀಲ್ ಕುಮಾರ್, ರವಿಕೃಷ್ಣಾ, ಶರಣಬಸವ, ಚಂದ್ರ ಶೇಖರ್, ಸಾಯಿರಾಯಾಯಣ ರೆಡ್ಡಿ, ಗೌತಮ್ ಜೈನ್, ಶಿವಕುಮಾರ್ ಇದ್ದರು.
Comments
Post a Comment