ಯರಗೇರಾ ತಾಲೂಕಾ ರಚನೆ ಪೂರ್ವಭಾವಿ ಸಭೆ
: ಹೋರಾಟ ರೂಪುರೇಷೆ  ನಿರ್ಣಯಗಳ ಅಂಗೀಕಾರ
   ರಾಯಚೂರು,ಸೆ.15- ತಾಲೂಕಿನ ಯರಗೇರಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾಯಾ೯ಲಯದಲ್ಲಿ  ಯರಗೇರಾ  ತಾಲೂಕ ಕೇಂದ್ರವನ್ನಾಗಿ ಘೋಷಣೆ ಮಾಡುವುದರ ಸಲುವಾಗಿ ಮುಂದಿನ ಹೋರಾಟದ ರೂಪುರೇಷೆ ತಯಾರಿಸಲು ಪೂರ್ವಭಾವಿ ಸಿದ್ಧತೆ ವಿಶೇಷ ಸಭೆ ನಡೆದು ಈ ಕೆಳಗಿನ ನಿಣ೯ಯಗಳು ಸವಾ೯ನುಮತದಿಂದ ಕೈಗೊಳ್ಳಲಾಯಿತು.  ಬಸನಗೌಡ ದದ್ದಲ್ ಶಾಸಕರು ರಾಯಚೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಇವರ ನೇತೃತ್ವದಲ್ಲಿ ಮಾನ್ಯ  ಮುಖ್ಯಮಂತ್ರಿಯವರಿಗೆ  ಯರಗೇರಾ ಗ್ರಾಮವನ್ನು ತಾಲೂಕ ಕೇಂದ್ರವನ್ನಾಗಿ ಘೋಷಣೆ ಮಾಡಲು ಜಿಲ್ಲೆಯ ಉಭಯ  ಸಚಿವರು, ಮಾಜಿ ಶಾಸಕರು,  ಹಾಲಿ ಹಾಗೂ ಮಾಜಿ ಲೋಕಸಭಾ ಸದಸ್ಯರು,  ಹಾಲಿ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರು, ಹಾಗೂ ಗಿಲೇಸೂಗೂರ್, ತಲಮಾರಿ, ಯರಗೇರಾ ಜಿಲ್ಲಾ ಪಂಚಾಯತ್ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳ ಮತ್ತು ಕಲಮಲಾ ಜಿಲ್ಲಾ ಪಂಚಾಯತ್ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕೆಲ ಗ್ರಾಮಗಳ  ಸವ೯ ಪಕ್ಷಗಳ ಮುಖಂಡರ ನಿಯೋಗದೊಂದಿಗೆ ಖುದ್ದಾಗಿ ಭೇಟಿ ನೀಡಿ ಒತ್ತಾಯ ಪಡಿಸುವುದು. ಅಂದಾಜು ೩೨೬ ಎಕರೆ ಸರಕಾರಿ ಜಮೀನು ಅಭಿವೃದ್ಧಿ ಪಡಿಸಲು ಲಭ್ಯವಿರುತ್ತದೆ.

ಮುಂದಿನ ವಾರದಿಂದ ಹಂತ ಹಂತವಾಗಿ ವಿವಿಧ ರೀತಿಯ ಹೋರಾಟ ಅಂದರೆ  ಬೃಹತ್ ರಸ್ತೆ ತಡೆ ಚಳವಳಿ,  ನಿರಂತರ ಅನಿಧಿ೯ಷ್ಟ  ಉಗ್ರ  ಪ್ರತಿಭಟನೆ, ಇನ್ನಿತರ  ಹೋರಾಟಕ್ಕೆ ಅಣಿಗೊಳ್ಳಲು ನಿಣ೯ಯಿಸಲಾಯಿತು. 

  ಮಹ್ಮದ್ ನಿಜಾಮುದ್ದೀನ್ ಪ್ರಧಾನ ಸಂಚಾಲಕರು ಹೋರಾಟ ಸಮಿತಿ ಇವರ ನೇತೃತ್ವದಲ್ಲಿ ಹೋರಾಟಗಳು   ನಡೆಸಲು ನಿರ್ಧರಿಸಲಾಯಿತು. ಒಂದು ದಿನಾಂಕ ನಿಗದಿಪಡಿಸಿ ಮಂತ್ರಾಲಯಕ್ಕೆ ಹೋಗಿ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆಶೀರ್ವಾದ ಪಡೆಯಲು ನಿಣ೯ಯಿಸಲಾಯಿತು.

 ಇಂದಿನ ಸಭೆಯಲ್ಲಿ  ಹೋರಾಟ ಸಮಿತಿಯ ಪ್ರಧಾನ ಸಂಚಾಲಕರಾದ ಮಹ್ಮದ್ ನಿಜಾಮುದ್ದೀನ್, ಸಹ ಸಂಚಾಲಕರಾದ ಬಸವರಾಜ  ಹೂಗಾರ್, ಕೆ. ಲಕ್ಷ್ಮಿಪತಿ, ಮಹೆಬೂಬ್ ಪಟೇಲ್ ನಿವೃತ್ತ ಪೊಲೀಸ್ ಅಧಿಕಾರಿ, ಹರಿಶ್ಚಂದ್ರ ರೆಡ್ಡಿ, ರವಿತಾತಾ,   ಜನಾರ್ದನ  ರೆಡ್ಡಿ ಮಂಜಲಾ೯,  ಹುಲಿಗಯ್ಯ  ನಿವೃತ್ತ ಪೊಲೀಸ್  ಅಧಿಕಾರಿ, ಮಹ್ಮದ್ ರಫಿ, ಹುಲಿಗೆಪ್ಪ ನಾಯಕ್, ಗುಜ್ಜರ್ ತಾಯಪ್ಪ ನಾಯಕ್, ರಂಗಪ್ಪ ನಾಯಕ, ಮಹಾದೇವ ನಾಯಕ್, ಶ್ರೀನಿವಾಸ ರೆಡ್ಡಿ, ಜಗದೀಶ್ ರೆಡ್ಡಿ,  ಬಸಪ್ಪ,ಎನ್. ವೀರೇಶ ಶೆಟ್ಟಿ, ಸುರೇಶ್  ಶೆಟ್ಟಿ,  ಅಬ್ದುಲ್  ಸಮದ್ ಪಟೇಲ್,ಎಲ್ ಐಸಿ ಫಾರೂಕ್ ಹಾಗೂ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.  ಹರಿಶ್ಚಂದ್ರ ರೆಡ್ಡಿ ಸ್ವಾಗತಿಸಿದರೆ, ಬಸವರಾಜ ಹೂಗಾರ್ ವಂದಿಸಿದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್