ಗಣಪತಿ ಕಲಾವಿದರಾದ ಆನಂದ ಕುಲಕರ್ಣಿಯವರಿಗೆ ಕಣ್ವ ಮಠದಿಂದ ಆಶೀರ್ವಾದ                     ರಾಯಚೂರು,ಸೆ.6- ನಗರದ ಶ್ರೀ ಆನಂದ ಕುಲಕರ್ಣಿ ಯವರು ಹವ್ಯಾಸಿ ಕಲಾವಿದರು ನಿವೃತ್ತ ಬ್ಯಾಂಕ ಉದ್ಯೋಗಿಯಾಗಿದ್ದು ಕಳೆದ 30-35 ವರ್ಷಗಳಿಂದ ಪ್ರತಿವರ್ಷ 50 ರಿಂದ ಮಣ್ಣಿನ ಗಣಪತಿ ಮೂರ್ತಿ ಗಳನ್ನು ಸ್ವತಃ ತಯಾರಿಸಿ ಸಹೋದ್ಯೋಗಿಗಳು,ಬಂಧುಮಿತ್ರರು ಹಾಗೂ

ಅಪೇಕ್ಷಿತರಿಗೆ  ಕೊಟ್ಟು ಉತ್ಕಷ್ಟ ವಾದ ಪರಿಸರ ಕಾಳಜಿ ಹಾಗೂ ಜಾಗೃತಿ ಯನ್ನು ಮೂಡಿಸುತ್ತಿದ್ದಾರೆ ಇತ್ತೀಚೆಗೆ ಶಂಕರ ಮಠ ದದಲ್ಲಿ ಆಯೋಜಿಸಿದ ಮಕ್ಕಳಿಗೆ ಮಣ್ಣಿನ ಗಣಪತಿ ತಯಾರಿಸುವ ಕಾರ್ಯಾಗಾರ ದಲ್ಲಿ ಸುಮಾರು 50

ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿ ರಕ್ತಗತವಾದ ಕಲೆಯನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಕಾರ್ಯಶ್ಲಾಘನೀಯ ಶ್ರೀ ಯುತರ ಪರಿಸರ ಕಾಳಜಿಯನ್ನು ಶ್ರೀ ಕಣ್ವ ಮಠಾಧೀಶರಾದ ಶ್ರೀ ವಿದ್ಯಾಕಣ್ವ ವಿರಾಜ ತೀರ್ಥರು ಶೇಷವಸ್ತ್ರ ಚಾತುರ್ಮಾಸ ಫಲವನ್ನು ಕಳುಹಿಸಿ ಆಶಿರ್ವದಿಸಿದ್ದಾರೆ ಎಂದು ಶ್ರೀ ಮಠದ ಟ್ರಸ್ಟಿಗಳಾದ ಶ್ರೀ ಪ್ರಸನ್ನ ಆಲಂಪಲ್ಲಿ ತಿಳಿಸಿದ್ದಾರೆ.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್