ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ -ಸಚಿವ ಎನ್ ಎಸ್ ಬೋಸರಾಜು.

ರಾಯಚೂರು. ಸೆ 8-ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ  ಹಿಂದುಳಿದ ಕಲ್ಯಾಣ ಕರ್ನಾಟಕದ ಭಾಗದ ಜಿಲ್ಲೆಗಳಲ್ಲಿ ಈಗಾಗಲೇ ರಾಜ್ಯ ಸರ್ಕಾರ  ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ  ಸಚಿವರಾದ ಎನ್ಎಸ್ ಬೋಸರಾಜು ಹೇಳಿದರು. 

ಅವರು ಇಂದು ರಾಯಚೂರು ನಗರದ ರಂಗಮಂದಿರದಲ್ಲಿ ಕಲಾ ಸಂಕುಲ ಸಂಸ್ಥೆ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡುತ್ತಾ ಕಲಾ  ಸಂಕುಲ ಸಂಸ್ಥೆ ನಿರಂತರವಾಗಿ ಕಲೆ ಸಾಹಿತ್ಯಕ ಸಾಮಾಜಿಕ ಸಾಂಸ್ಕೃತಿಕ ಜೊತೆಯಲ್ಲಿ ಇವತ್ತು ಶಿಕ್ಷಕರನ್ನು ಗೌರವಿಸುವಂತಹ ಅದ್ಭುತವಾದ ಕಾರ್ಯಕ್ರಮವನ್ನು ಮಾಡಿದ್ದಾರೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಬಂದಿರುವ ಅತ್ಯುತ್ತಮ ಆದರ್ಶ ಶಿಕ್ಷಕರಿಗೆ ಸನ್ಮಾನಿಸುವುದು ಈ ಸಂಸ್ಥೆಯ ಉತ್ತಮ ಕೆಲಸವಾಗಿದೆ ಎಂದು ಶ್ಲಾಘಿಸಿದರು. 

ಕಾರ್ಯಕ್ರಮದ ಮೊದಲಿಗೆ ಕಪಗಲ್ ಹತ್ತಿರ ಮೃತಪಟ್ಟ ಮಕ್ಕಳಿಗೆ ಸಂತಾಪ ಸೂಚನೆ ಮಾಡಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಸರ್ವಪಲ್ಲಿ ರಾಧಾಕೃಷ್ಣ ಭಾವಚಿತ್ರಕ್ಕೆ ಪೂಜಿ ಸಲ್ಲಿಸಲಾಯಿತು. 


 ಅಕ್ಷರ ಸಂತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹರೆಕಳ ಹಜ್ಜಬ್ಬ ಮಾತನಾಡಿ ಸರ್ಕಾರಿ ಶಾಲೆ ಉಳಿಸಲು ಎಲ್ಲರೂ ಪಣ ತೊಡಬೇಕು ನಿಮ್ಮೂರಿನ ಶಾಲೆಗಳ ಅಭಿವೃದ್ಧಿಗಾಗಿ ಶ್ರಮಿಸಬೇಕು. ಯಾರು ಸಹ ಸರ್ಕಾರಿ ಶಾಲೆಗಳನ್ನು ಕಡೆಗಣಿಸಬಾರದು ನಾನು ನಮ್ಮೂರಲ್ಲಿ ಶಾಲೆ ಇರಲಿಲ್ಲ ಹಾಗಾಗಿ ನಾನು ಅವಿದ್ಯಾವಂತನಾಗಿದ್ದೇನೆ ಅದಕ್ಕಾಗಿಯೇ ನಾನು ಶಾಲೆ ಕಟ್ಟಲು ಪ್ರಯತ್ನಪಟ್ಟೆ ಎಂದು ಹೇಳಿದರು. 

ಶಿಕ್ಷಣ ಪ್ರೇಮಿ ಸೇವಾ ಕಾಲೇಜಿನ ಡಾ. ಶರಣಬಸವ ಪಾಟೀಲ್ ಜೋಳದಡಗಿ ಮಾತನಾಡಿ ಕಲಾ ಸಂಕುಲ ಸಂಸ್ಥೆ ರಾಯಚೂರಿನಲ್ಲಿ ಒಂದು ಮಾದರಿಯ ಸಂಸ್ಥೆಯಾಗಿದೆ. ಅದ್ಭುತ ಸಾಧಕರನ್ನು ರಾಯಚೂರಿಗೆ ಪರಿಚಯಿಸುತ್ತಿರುವ ಉತ್ತಮ ವೇದಿಕೆಯನ್ನು ರೂಪಿಸುವಂತಹ ಕೆಲಸವನ್ನು ರೇಖಾಬಡಿಗೇರ್ ಮತ್ತು ಮಾರುತಿ ಬಡಿಗೇರ್ ಮಾಡುತ್ತಿದ್ದಾರೆ ಇವರು ಆದರ್ಶ ದಂಪತಿಗಳಾಗಿ ಬೇರೆಯವರಿಗೆ ಮಾದರಿಯಾಗಿದ್ದಾರೆ ಎಂದು ಅವರು ಹೇಳಿದರು.


ಈ ಕಾರ್ಯಕ್ರಮದಲ್ಲಿ ಮಂಗಳೂರಿನ ಸಂಗೀತ ಶರ್ಮಾ ಶಿಕ್ಷಕಿ ಮತ್ತು ಪೆರುವಾಯಿ ಗ್ರಾಮದ ಗ್ರಾಮ ಪಂಚಾಯಿತಿ ಅಧ್ಯಕ್ಷ ನಫೀಸ, ಕಿರುತೆರೆನಟಿ ಚಿತ್ರನಟಿ ರಜಿನಿ ಬೆಂಗಳೂರು ಹಾಗೂ ಕಲಾವಿದೆ ಭಾರತಿ ಗೋಪಾಲ್ ಹೆಬ್ರಿ, ಮಹಮ್ಮದ್ ಶರೀಫ್. ಪದ್ಮಜಾ ಶಿಕ್ಷಕಿ, ನಾಗರತ್ನ ಮಂಡ್ಯ ಮುಂತಾದ ಆದರ್ಶ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯದರ್ಶಿ ಮಾರುತಿ ಬಡಿಗೇರ್ ಸ್ವಾಗತಿಸಿದರು. ವೈದ್ಯರತ್ನ  ಪ್ರಶಸ್ತಿ ಪಡೆದಿರುವ ಡಾ ಎನ್ ವಿಜಯಶಂಕರ್ ಇವರನ್ನು ಅಭಿನಂದಿಸಲಾಯಿತು. 

ವೇದಿಕೆ ಮೇಲೆ ಕಲಾ ಸಂಕುಲ ಸಂಸ್ಥೆಯ ಅಧ್ಯಕ್ಷರಾದ ಡಾ. ರೇಖಾ ಬಡಿಗೇರ್ , ಕೇರಳದ ಲಿಬೀನ್ ಕೃಷ್ಣ ಇನ್ನಿತರರು ಇದ್ದರು. 

ಕಾರ್ಯಕ್ರಮವನ್ನು ಡಾ. ವಿಜಯ ಅವರು ನಿರೂಪಿಸಿದರು. ಕಲಾವಿದರಾದ ಅಮರಗೌಡ, ಮಹಾಲಕ್ಷ್ಮಿ, ಚಿರಂಜೀವಿ ಯಾದವ್ ,ಸೈಯದ್ ಅಲಿ,ಮೌನೇಶ ,ಮಹೇಶ, ಗೋವಿಂದ ವಡವಾಟಿ ಇನ್ನಿತರರು ಭಾಗವಹಿಸಿದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್