ದರ್ವೇಶ್ ಕಂಪನಿ ಹಗರಣ ಸಿಬಿಐ ಮತ್ತು ಇಡಿಗೆ ಹಸ್ತಾಂತರಿಸಬೇಕು- ಅಂಬಾಜಿ ರಾವ್.   
                             ರಾಯಚೂರು,ಸೆ.30- ದರ್ವೇಶ್ ಕಂಪನಿ ಬಹು ಕೋಟಿ ವಂಚನೆ ಪ್ರಕರಣವನ್ನು ಸಿಬಿಐ ಮತ್ತು ಇಡಿಗೆ ಹಸ್ತಾಂತರ ಮಾಡಬೇಕೆಂದು ಸಾಮಾಜಿಕ ಕಾರ್ಯಕರ್ತ ಅಂಬಾಜಿರಾವ್ ಮೈದರಕರ್ ಹೇಳಿದರು.                        ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದರ್ವೇಶ್ ಕಂಪನಿಯಲ್ಲಿ ಹಣ ಹೂಡಿದವರಿಗೆ ಇದುವರೆಗೂ ಹಣ ಹಿಂದಿರುಗಿಸಿಲ್ಲ ಸಿಐಡಿ ತನಿಖೆ ನಡೆಯುತ್ತಿದ್ದರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿಲ್ಲವೆಂದರೆ ಸಿಐಡಿ ತನಿಖೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ತಿಳಿಯುತ್ತದೆ ಆದ್ದರಿಂದ ಪ್ರಕರಣವನ್ನು ಸಿಬಿಐ ,ಇಡಿ ತನಿಖೆಗೆ ರಾಜ್ಯ ಸರ್ಕಾರ ಹಸ್ತಾಂತರ ಮಾಡಬೇಕೆಂದರು.

ಇತ್ತೀಚೆಗೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದಲ್ಲಿ ಬಂಧಿತ ಆರೋಪಿಗಳಿಗೆ ಮತ್ತು ತಲೆಮರಿಸಿಕೊಂಡ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ತಿರಸ್ಕರಿಸಲಾಗಿದೆ ಆದ್ದರಿಂದ ಉಚ್ಚ ನ್ಯಾಯಾಲಯದಲ್ಲಿ ಜಾಮಿನು ಅರ್ಜಿ ಸಲ್ಲಿಸಲಾಗಿದ್ದರೂ ಅಲ್ಲಿ ಅರ್ಜಿ ಸ್ವೀಕೃತಗೊಂಡಿಲ್ಲವೆಂಬ ಮಾಹಿತಿಯಿದ್ದು ನಕಲಿ ಬಾಂಡ್ ಮೂಲಕ ಹಣ ಹೂಡಿಕೆದಾರರಿಗೆ ಹಣ ಹಿಂತಿರುಗಿಸುವತ್ತೇವೆಂದು ನ್ಯಾಯಾಲಯದಲ್ಲಿ ಜಾಮೀನು  ಪಡೆಯಲು ಸುಳ್ಳು ಹೇಳುತ್ತಿದ್ದಾರೆ ಎಂದರು. ಪ್ರಸ್ತುತ ಸಿಐಡಿ ತನಿಖೆಯಲ್ಲಿ ನ್ಯಾಯ ದೊರೆಯುವ ಬಗ್ಗೆ ಅನುಮಾನವಿದ್ದು ಸಿಬಿಐ ಮತ್ತು ಇಡಿಗೆ ಪೂರ್ಣ ಪ್ರಕರಣ ಹಸ್ತಾಂತರಿಸಬೇಕೆಂದು ಆಗ್ರಹಿಸಿ. ಈ ಸಂದರ್ಭದಲ್ಲಿ ಮಸೂದ ಅಲಿ, ಹುಸೇನ್, ಆಸೀಫ್, ಇಮಾಮ್ , ಜಾಫರ್,ಅಬ್ರಾಹಂ ಇನ್ನಿತರರು ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ