ನಗರಸಭೆ ಪೌರಾಯುಕ್ತರನ್ನು ವರ್ಗಾವಣೆ ಮಾಡಿ- ಮಹಾವೀರ.                                  ರಾಯಚೂರು,ಸೆ.26- ಸರಿಯಾಗಿ ಕಾರ್ಯನಿರ್ವಹಿಸದ ಪೌರಾಯುಕ್ತ ಗುರು ಸಿದ್ದಯ್ಯ ಹಿರೇಮಠರವರನ್ನು ವರ್ಗಾವಣೆ ಮಾಡುವಂತೆ ಉಸ್ಮಾನಿಯಾ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾಧ್ಯಕ್ಷ ಎನ್.ಮಹಾವೀರ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪೌರಾಯುಕ್ತರು ಸರಿಯಾದ‌ ಸಮಯಕ್ಕೆ ಕಛೇರಿಗೆ ಬರುವುದಿಲ್ಲ ಮತ್ತು ನಗರಸಭೆ‌ ಆದಾಯಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆ ಅವರಿಗೆ ಬೆಂಬಲವಾಗಿ ಸಚಿವ ಬೋಸರಾಜು ಮತ್ತು ರವಿ ಬೋಸರಾಜು ಇದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಮುಖಂಡರಾದ ರವೀಂದ್ರ ಜಲ್ದಾರ್ ಆಶೀರ್ವಾದ ಲೇಔಟ್ ಬಡವಾಣೆಯನ್ನು ನಿರ್ಮಿಸಲು ಸರ್ಕಾರಿ ಜಮೀನು ಕಬಳಿಸಿದ್ದಾರೆಂದು ದೂರಿದ ಅವರು ಈ ಬಗ್ಗೆ ಬೆಂಗಳೂರು ವಿಶೇಷ ಭೂ ನ್ಯಾಯಾಲಯದಲ್ಲಿ ದಾವೆ ಹೂಡುತ್ತೇವೆಂದರು. 2014 ಎಪಿಎಂಸಿ ಯಿಂದ ನಿವೇಶನ ಹಂಚಿಕೆ ಕಾನೂನು ಬಾಹಿರವಾಗಿದೆ ಈ ಬಗ್ಗೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ಮುಂದು ವರೆಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಪ್ರಭು ನಾಯಕ, ಬಸವರಾಜ್,ಉದಯ ಕುಮಾರ್,ರಿಜ್ವಾನ್,ಈರೇಶ್ ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ