ಛಲವಾದಿ ಸಮುದಾಯ ಒಳಮೀಸಲಾತಿ ವಿರುದ್ಧವಿಲ್ಲ- ಶಿವರಾಜ್ ಜಾನೇಕಲ್. ರಾಯಚೂರು,ಸೆ.29- ಛಲವಾದಿ ಸಮುದಾಯ ಒಳಮೀಸಲಾತಿ ವಿರುದ್ಧವಿಲ್ಲವೆಂದು ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಶಿವರಾಜ್ ಜಾನೇಕಲ್ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಹಳೆ ಮೈಸೂರು ಭಾಗ ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿ ಹೊಲೆಯ ಮತ್ತು ಮಾದಿಗ ಈ ಎರೆಡು ಸಮುದಾಯವನ್ನು ಆದಿ ಕರ್ನಾಟಕವೆಂದು ಕರೆಯುತ್ತಾರೆ ಇದು ಗೊಂದಲಕ್ಕೆ ಕಾರಣವಾಗಿದೆ ಎಂದರು. ಮಧ್ಯ ಕರ್ನಾಟಕ, ಶಿವಮೊಗ್ಗ ಬಳ್ಳಾರಿ , ಚಿತ್ರದುರ್ಗ ಮುಂತಾದೆಡೆ ಹೊಲೆಯ ಸಮುದಾಯವನ್ನು ಆದಿ ದ್ರಾವಿಡ ವೆಂದು ಕರೆಯುತ್ತಾರೆ ಮತ್ತು ಮಾದಿಗ ಸಮುದಾಯವನ್ನು ಆದಿ ದ್ರಾವಿಡ ವೆಂಬ ವ್ಯಾಪಕವಾದ ನಂಬಿಕೆಯಿದೆ ಅದು ತಪ್ಪು ಎಂದರು.
ಒಳಮೀಸಲಾತಿ ವರ್ಗೀಕರಣ ಮಾಡಿರುವ ನ್ಯಾ.ಸದಾಶಿವ ಆಯೋಗ ವರದಿ ಅನ್ವಯ ಕೇವಲ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಸ್ಥಿತಿಗತಿ ಬಗ್ಗೆ ವರದಿ ನೀಡಿದೆ ಸರ್ಕಾರಿ ಉಪಜಾತಿವಾರು ವೈಜ್ಞಾನಿಕವಾಗಿ ಅಂಕಿ ಅಂಶ ಲಭ್ಯವಿಲ್ಲದ ಕಾರಣ ಒಳ ಮೀಸಲಾತಿ ಶೇಕಡಾವಾರು ಮೀಸಲಾತಿ ನಿರ್ಧಾರ ಹೇಗೆ ಸಾಧ್ಯವೆಂದರು.ಆದ ಕಾರಣ ಸರ್ಕಾರ ಕೆಲ ನ್ಯೂನ್ಯತೆ ನಿವಾರಿಸಿಕೊಂಡು ಮೀಸಲಾತಿ ಜಾರಿ ಮಾಡಿದರೆ ನ್ಯಾಯ ದೊರಕುತ್ತದೆ ಅಲ್ಲದೆ ನಾವು ಒಳಮೀಸಲಾತಿ ವಿರುದ್ಧವಿಲ್ಲ ಕಂಡಿತವಾಗಿ ವರದಿ ಜಾರಿಯಾಗಲೇಬೇಕೆಂಬ ಒತ್ತಾಯ ನಮ್ಮದು ಇದೆ ಎಂದರು. ಕೆಲವರು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ವರದಿ ಜಾರಿ ಮಾಡದಿರುವಂತೆ ರಾಜ್ಯ ಸರ್ಕಾರಕ್ಕೆ ಒತ್ತಡ ಹಾಕಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿ ಈ ಬಗ್ಗೆ ಆ ರೀತಿ ಹೇಳಿರುವ ದಾಖಲೆಯಿದ್ದರೆ ಬಹಿರಂಗಪಡಿಸಿ ಎಂದು ಹೇಳಿದರು. ಜಗನ್ನಾಥ ಸುಂಕಾರಿ ಮಾತನಾಡಿ ನಾವು ವರದಿ ವಿರುಧ್ದ ಧ್ವನಿಯೆತ್ತಿಲ್ಲ ಬದಲಾಗಿ ವರದಿಯಲ್ಲಿ ಉಲ್ಲೇಖಿತ ಅಂಶಗಳ ದೋಷ ಸರಿಪಡಿಸಿ ಜಾರಿ ಮಾಡಿದರೆ ಎಲ್ಲರಿಗೂ ನ್ಯಾಯ ಸಲ್ಲುತ್ತದೆ ಎಂದರು. ಈ ಸಂದರ್ಭದಲ್ಲಿ ರವಿ ಕುಮಾರ್ ರಾಂಪೂರು,ತಿಮ್ಮಣ್ಣ ವಕೀಲ,ಶಿವಕುಮಾರ್, ಶ್ರೀ ನಿವಾಸ್ ಸೇರಿದಂತೆ ಅನೇಕರಿದ್ದರು.
Comments
Post a Comment