ಸೆ.29 ರಂದು ವಿಜಯ್ ಪಾಲಿ ಕ್ಲಿನಿಕ್ ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ: ಆರೋಗ್ಯಪೂರ್ಣ ಜೀವನ ಶೈಲಿಯಿಂದ ಹೃದ್ರೋಗ ತಡೆ ಸಾಧ್ಯ - ಅಜಿತ್ .ವಿ.ಕುಲಕರ್ಣಿ. ರಾಯಚೂರು,ಸೆ.27- ನಗರದ ಆಜಾದ್ ನಗರದಲ್ಲಿರುವ ವಿಜಯ್ ಪಾಲಿ ಕ್ಲಿನಿಕ್ ನಲ್ಲಿ ಸೆ.29 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಹೃದ್ರೋಗ ತಜ್ಞ ಡಾ.ಅಜಿತ್ ವಿ.ಕುಲಕರ್ಣಿ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಿಶ್ವ ಹೃದಯ ದಿನ ಅಂಗವಾಗಿ ಆಸ್ಪತ್ರೆಯಲ್ಲಿ ಅಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ರವರೆಗೆ ನಡೆಯಲಿರುವ ಆರೋಗ್ಯ ತಪಾಸಣಾ ಶಿಬಿರದಲ್ಲಿ ಉಚಿತವಾಗಿ ಇಸಿಜಿ ,ಎಕೋ ಮುಂತಾದ ಹೃದಯ ತಪಾಸಣೆ ನಡೆಸಲಾಗುತ್ತದೆ ಎಂದರು.
ಇಂದಿನ ದಿನಗಳಲ್ಲಿ ಹೃದಯಾಘಾತ ಯಾವುದೆ ವಯೋಮಿತಿಯಿಲ್ಲದೆ ಸಣ್ಣ ವಯಸ್ಸಿನವರಿಗೂ ಆವರಿಸಿಕೊಳ್ಳುತ್ತಿದೆ ಇದಕ್ಕೆ ನಿರ್ದಿಷ್ಟ ಕಾರಣ ಆರೋಗ್ಯ ವಿಜ್ಞಾನಿಗಳು ಕಂಡು ಹಿಡಿಯಲು ಆಗುತ್ತಿಲ್ಲ ಶೇ.25 ರಷ್ಟು ಕಾರಣ ನಿಗೂಢವಾಗಿದೆ ಎಂದರು. ಹೃದ್ರೋಗ ತಡೆಗಟ್ಟಲು ಆರೋಗ್ಯ ಪೂರ್ಣ ಜೀವನ ಶೈಲಿ, ಸತ್ವಯುತ ಆಹಾರ ಸೇವನೆ, ದಿನನಿತ್ಯ ನಡಿಗೆ, ವ್ಯಾಯಾಮ ಅವಶ್ಯಕತೆಯಿದೆ ಎಂದರು. ಮಧ್ಯಪಾನ, ಧೂಮಪಾನ ಹೆಚ್ಚು ಕೊಬ್ಬಿನಾಂಶವಿರುವ ಪಧಾರ್ಥ ಸೇವನೆಯೂ ಹೃದ್ರೋಗಕ್ಕೆ ದಾರಿ ಮಾಡಿಕೊಡುತ್ತದೆ ಎಂದರು. ಸಣ್ಣ ವಯಸ್ಸಿನವರಿಗೆ ಹೃದಯಾಘಾತಕ್ಕೆ ಅನೇಕ ಅಂಶಗಳು ಕಾರಣವಾಗುತ್ತವೆ ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ ಮತ್ತು ಅನುವಂಶಿಕತೆಯು ಪ್ರಭಾವ ಬೀರುತ್ತದೆ ಎಂದರು. ಸಾರ್ವಜನಿಕರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕೆಂದ ಅವರು ಪ್ರತಿ ವರ್ಷ ನಮ್ಮ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸುತ್ತೇವೆಂದ ಅವರು ಕಳೆದ ವರ್ಷ ಮಾಧ್ಯಮ ಮಿತ್ರರಿಗೆ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದೆವು ಎಂದರು. ಈ ಸಂದರ್ಭದಲ್ಲಿ ಅಮರೇಶ ಇದ್ದರು.
Comments
Post a Comment