ಜಿಲ್ಲಾ ವಾಲ್ಮೀಕಿ ಭವನ ಕಟ್ಟಡ ಕಾಯಕಲ್ಪಕ್ಕೆ ಸೆ.15 ರಂದು ಪೂರ್ವಭಾವಿ ಸಭೆ- ವೆಂಕಟೇಶ ನಾಯಕ.       
                                                                                                           ರಾಯಚೂರು,ಸೆ.11- ನಗರದ ಆಶಾಪೂರು ರಸ್ತೆಯ ಜಿಲ್ಲಾ ವಾಲ್ಮೀಕಿ ಕಟ್ಟಡದ ಕಾಯಕಲ್ಪಕ್ಕೆ ಸರ್ಕಾರಕ್ಕೆ ಒತ್ತಾಯಿಸಲು ಸೆ.15 ರಂದು ಬೆಳಿಗ್ಗೆ 10.30ಕ್ಕೆ  ಜಿಲ್ಲಾ ವಾಲ್ಮೀಕಿ  ಭವನದಲ್ಲಿ ಜಿಲ್ಲಾ ವಾಲ್ಮೀಕಿ ಸಮಾಜದಿಂದ ಪೂರ್ವಭಾವಿ ಸಭೆ ಆಯೋಜಿಸಲಾಗಿದೆ ಎಂದು ವೆಂಕಟೇಶ ನಾಯಕ ಅಸ್ಕಿಹಾಳ ಹೇಳಿದರು.

ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಗರದಲ್ಲಿ ನಿರ್ಮಾಣವಾಗಿರುವ ಜಿಲ್ಲಾ ವಾಲ್ಮೀಕಿ ಭವನ ಕಟ್ಟಡದಲ್ಲಿ ಮೂಲಭೂತ ಸೌಲಭ್ಯದ ಕೊರತೆಯಿದ್ದು ವಾಲ್ಮೀಕಿ ಜಯಂತಿ ಅಚ್ಚುಕಟ್ಟಾಗಿ ನಡೆಸುವ  ಬಗ್ಗೆ ಸರ್ಕಾರಕ್ಕೆ ಒತ್ತಾಯಿಸಲು ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದ ಅವರು ಪ್ರತಿ ವರ್ಷ ವಾಲ್ಮೀಕಿ ಜಯಂತಿ ಆಚರಿಸಲಾಗುತ್ತದೆ ಆದರೆ ವಾಲ್ಮೀಕಿ ಭವನ ನಿರ್ಮಾಣವಾಗಿದ್ದರೂ ಅಸ್ತಿತ್ವವಿಲ್ಲದ ರೀತಿಯಲ್ಲಿದೆ ಆದ್ದರಿಂದ ಈ ಸಭೆ ಎಲ್ಲಾ ತಾಲೂಕುಗಳಿಂದ ಸಮಾಜದ ಜನ ಪ್ರತಿನಿಧಿಗಳು ರಾಜಕಾರಣಿಗಳು, ಸರ್ಕಾರಿ ನೌಕರರು, ನಿವೃತ್ತ ನೌಕರರು, ನ್ಯಾಯವಾದಿಗಳು, ವಿದ್ಯಾರ್ಥಿಗಳು ಯುವಕರು , ಸಂಘ ಸಂಸ್ಥೆಗಳ, ಮಹಿಳಾ ಸಂಘಗಳ ಪ್ರತಿನಿಧಿಗಳು ಭಾಗವಹಿಸುವಂತೆ ಕೋರಿದರು. ಈ ಸಂದರ್ಭದಲ್ಲಿ ಬುಡ್ಡಪ್ಪ ನಾಯಕ,ಶರಣಪ್ಪ, ಚಿದಾನಂದ ನಾಯಕ, ಈರಣ್ಣ, ರಂಗರಾಜ ನಾಯಕ,ನರಸಿಂಹ ನಾಯಕ್, ಯಲ್ಲಪ್ಪ ನಾಯಕ, ಗೋವಿಂದ ನಾಯಕ ಇನ್ನಿತರರು ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್