ಗೋವಿಂದ ಗಾನ ಕಾರ್ಯಕ್ರಮದ  ಯಶಸ್ಸಿಗೆ  ಭಜನಾ ಮಂಡಳಿಗಳು ಹಾಗೂ ಆಸ್ತಿಕ ಭಕ್ತರು ಕಾರಣರಾಗಿದ್ದಾರೆ- ಡಾ. ರಾಯಚೂರು ಶೇಷಗಿರಿದಾಸ್ 

 ರಾಯಚೂರು,ಸೆ.28-  ಕಳೆದ ವಾರ ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜರುಗಿದ ಶ್ರೀ ಅಸ್ಕಿಹಾಳ  ಗೋವಿಂದ ದಾಸರ ಸ್ಮರಣೋತ್ಸವದ ಅಂಗವಾಗಿ ನಡೆದ ಗೋವಿಂದ ಗಾನ ಕಾರ್ಯಕ್ರಮ  ಅಭೂತಪೂರ್ವ ಯಶಸ್ಸನ್ನು ಕಂಡು ಸಂಪನ್ನಗೊಂಡಿದೆ. ಇದಕ್ಕೆ ರಾಯಚೂರಿನ ಸಮಸ್ತ ಭಜನಾ ಮಂಡಳಿಗಳು ಹಾಗೂ ಆಸ್ತಿಕ  ಭಕ್ತ ವೃಂದದವರೆಲ್ಲಕಾರಣರಾಗಿದ್ದಾರೆಂದು ಖ್ಯಾತ ಗಾಯಕ ಡಾ .ರಾಯಚೂರು ಶೇಷಗಿರಿ ದಾಸ ಅವರು ಹೇಳಿದರು.


    ಅವರು ನಿನ್ನೆ ಸಂಜೆ ನಗರದ ವಾಸವಿ ನಗರದಲ್ಲಿರುವ ಶ್ರೀ ಬನ್ನಿ ಕಾಳಿಕಾಂಬ ದೇವಸ್ಥಾನದಲ್ಲಿ ಗೋವಿಂದ ಗಾನ  ಕಾರ್ಯಕ್ರಮ ದಲ್ಲಿ ವೇದಿಕೆಯ ಮೇಲೆ ಭಜನೆ ಕಾರ್ಯಕ್ರಮ ನೀಡಿದ ಭಜನಾ ಮಂಡಳಿಗಳ ಅಧ್ಯಕ್ಷರಿಗೆ ಮತ್ತು ಸದಸ್ಯರಿಗೆ  ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

  ವೈಭವದಿಂದ ನಡೆದ ಗೋವಿಂದ ಗಾನ ದಶಮಾನೋತ್ಸವ ಕಾರ್ಯಕ್ರಮದಲ್ಲಿ ನಿರೀಕ್ಷೆಗೂ ಮೀರಿದ ಭಕ್ತ ಸಾಗರ ಸೇರಿತ್ತು, 

 ಪರಮಪೂಜ್ಯ ಮಂತ್ರಾಲಯ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯ ಜೊತೆಗೆ ಅವರ ಆಶೀರ್ವಚನ, ತಿರುಪತಿಯಿಂದ ಆಗಮಿಸಿದ ಟಿಟಿಡಿ ದಾಸ ಸಾಹಿತ್ಯ ಪ್ರಾಜೆಕ್ಟಿನ ವಿಶೇಷ ಅಧಿಕಾರಿಗಳಾದ ಶ್ರೀ ಆನಂದ ತೀರ್ಥಾಚಾರ್ಯ ಪಗಡಾಲ್ ಅವರು ತಿರುಪತಿಯ ಶ್ರೀನಿವಾಸನ ಪ್ರತಿನಿಧಿಯಾಗಿ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀವಾರಿ ಉಂಜಾಲ ಸೇವೆಯನ್ನು ಅಭೂತಪೂರ್ವವಾಗಿ ನಡೆಸಿಕೊಟ್ಟರು. ಎಂದು ಅವರು ಹೇಳಿದರು. 


 ನಾಡಿನ ದಾಸ ಸಾಹಿತ್ಯ ವಿದ್ವಾಂಸರಾದ ಡಾ. ಜಯಲಕ್ಷ್ಮಿ ಮಂಗಳಮೂರ್ತಿಯವರು ಮಾತನಾಡಿ ಗೋವಿಂದ ಗಾನ ಕಾರ್ಯಕ್ರಮವು ನಮ್ಮ ಆತ್ಮ ಶುದ್ಧಿಯ ಜೊತೆಗೆ, ಅಧ್ಯಾತ್ಮ ಕಡೆ ಒಯ್ಯುವ ಅತ್ಯುತ್ತಮವಾದ ಕಾರ್ಯಕ್ರಮ ರಾಯಚೂರಿನಲ್ಲಿ ಗಾಯಕ ಡಾ. ರಾಯಚೂರು ಶೇಷಗಿರಿ ದಾಸ್, ಮುರಳಿಧರ ಕುಲಕರ್ಣಿ ಇವರ ಸಾರಥ್ಯದಲ್ಲಿ ಜರುಗುತ್ತಿರುವುದು ನಮ್ಮೆಲ್ಲರ ಭಾಗ್ಯ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ  ಮುರಳಿಧರ ಕುಲಕರ್ಣಿಯವರು ಮಾತನಾಡಿ, ದಾಸ ಸಾಹಿತ್ಯದ ತವರೂರಾದ ರಾಯಚೂರು ಜಿಲ್ಲೆಯಲ್ಲಿ ಅಸ್ಕಿಹಾಳ  ಗೋವಿಂದ ದಾಸರ ಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಂಡ ಗೋವಿಂದ ಗಾನ ಕಾರ್ಯಕ್ರಮ ಈ ಬಾರಿ ಅತ್ಯಂತ ವಿಶೇಷವಾಗಿತ್ತು. ಮೊದಲನೇ ದಿನ ನಡೆದ ಅಂತ್ಯಾಕ್ಷರಿ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ಸಿರಿ


ಗೋವಿಂದ ವಿಠ್ಠಲ ಪ್ರಶಸ್ತಿ, ಜೊತೆಗೆ ಭಜನಾ ಮಂಡಳಿಗಳಿಂದ ಭಜನೆ ಕಾರ್ಯಕ್ರಮ, ಎರಡನೇ ದಿನದ ಕಾರ್ಯಕ್ರಮದಲ್ಲಿ ಶ್ರೀ ಶ್ರೀಪಾದಂಗಳವರ ದಿವ್ಯ ಸಾನಿಧ್ಯದಲಿ ನಡೆದ ಭಜನಾ ಮಂಡಳಿಗಳ ಮಹಿಳೆಯರಿಂದ ಸಮೂಹ ಗಾಯನ ಅತ್ಯಂತ ಸುಶ್ರಾವ್ಯವಾಗಿ ಮೂಡಿ ಬಂದಿತು. ನಾಡಿನ ಖ್ಯಾತ ಕಲಾವಿದರ ಗಾನ ಪ್ರಸ್ತುತಿ, ಹೀಗೆ ಎಲ್ಲಾ ಆಯಾಮಗಳಿಂದ ಗೋವಿಂದ ದಾಸರ ಹೃದಯವಾಸಿ ಜಗದೊಡೆಯ ತಿರುಪತಿಯ ಗೋವಿಂದನು ಸ್ವತಹ: ರಾಯಚೂರಿಗೆ ಬಂದಂತೆ ಭಾಸವಾಗಿತ್ತು. ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಗರ ಸಭೆಯ ಮಾಜಿ ಅಧ್ಯಕ್ಷೆ ಲಲಿತಾ ಕಡಗೋಲ ಆಂಜನೇಯ, ಡಾ. ಜಯಲಕ್ಷ್ಮಿಮಂಗಳಮೂರ್ತಿ ,ಬ್ರಾಹ್ಮಣ ಸಮಾಜದ ಹಿರಿಯ ಮುಖಂಡರಾದ ಹನುಮಂತ ರಾವ್ ಕಲ್ಲೂರ್ , ನರಸಿಂಹಮೂರ್ತಿ ಕುಲಕರಣಿ, ಪತ್ರಕರ್ತ ಜಯಕುಮಾರ್ ದೇಸಾಯಿ


ಕಾಡ್ಲೂರು, ರಾಘವೇಂದ್ರ ಜಾಗೀರ್ದಾರ್, ಸಂಗೀತಗಾರರಾದ ಪ್ರತಿಭಾ ಗೋನಾಳ್, ಲಲಿತಾ ಭಜನಾ ಮಂಡಳಿಯ, ಅಧ್ಯಕ್ಷೆ ಶೈಲಜಾ ಶಾವಂತಗೇರಿ,  ,ಘಟ್ಟಿಕಾಚಲ ಭಜನಾ ಮಂಡಳಿ, ಶ್ರೀಹರಿ ಭಜನಾ ಮಂಡಳಿ, ವಾಸವಿ ಭಜನಾ ಮಂಡಳಿ, ಶ್ರೀ ಕೃಷ್ಣ ಭಜನಾ ಮಂಡಳಿ, ನಗರೇಶ್ವರ ಭಜನಾ ಮಂಡಳಿ, ಲಕ್ಷ್ಮಿ ಶೋಭಾನ ಭಜನಾ ಮಂಡಳಿ, ಮತ್ತು ಲಲಿತಾ ಮಹಿಳಾ ಮಂಡಳಿ ಇದರ ಅಧ್ಯಕ್ಷರು ಮತ್ತು ಸದಸ್ಯರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.

 ಪ್ರತಿಭಾ ಗೋನಾಳ ಪ್ರಾರ್ಥನೆಯೊಂದಿಗೆ  ಕಾರ್ಯಕ್ರಮ ಪ್ರಾರಂಭವಾಯಿತು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ