ಸೆ.28 ಮತ್ತು 29 ರಂದು ಪುಟ್ಟರಾಜ ಕವಿ ಗವಾಯಿಗಳ ಪುಣ್ಯ ಸ್ಮರಣೆ- ಚಿನ್ನಯ್ಯ ಸ್ವಾಮಿ. ರಾಯಚೂರು,ಸೆ.26- ಲಿಂಗೈಕ್ಯ ಪಂಡಿತ ಡಾ.ಪುಟ್ಟರಾಜ ಕವಿ ಗವಾಯಿಗಳವರ 14 ನೇ ಪುಣ್ಯಸ್ಮರಣೆ ಅಂಗವಾಗಿ ಸೆ.28 ಮತ್ತು 29 ರಂದು ಸಂಗೀತ ಸಮ್ಮೇಳನ ಆಯೋಜಿಸಲಾಗಿದೆ ಎಂದು ಪಿ.ಚಿನ್ನಯ್ಯ ಸ್ವಾಮಿ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಂದು ಬೆಳಿಗ್ಗೆ 9ಕ್ಕೆ ನಗರದ ಸೋಮವಾರ ಪೇಟೆ ಹಿರೇಮಠದಲ್ಲಿ ನಡೆಯುವ ಕಾರ್ಯಕ್ರಮ ಸಾನಿಧ್ಯವನ್ನು ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿ ವೀರ ಶಿವಾಚಾರ್ಯ ಶ್ರೀ ಗಳು ವಹಿಸಲಿದ್ದು , ಉದ್ಘಾಟನೆಯನ್ನು ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಶ್ರೀಗಳು, ಮಂಗಳವಾರ ಪೇಟೆ ಹಿರೇಮಠ ವೀರಸಂಗಮೇಶ್ವರ ಮಹಾಸ್ವಾಮಿ ನೆರವೇರಿಸಿಲಿದ್ದು ಮುಖ್ಯ ಅತಿಥಿಗಳಾಗಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು , ಶಾಸಕ ಡಾ.ಶಿವರಾಜ ಪಾಟೀಲ್, ನಗರಸಭೆ ಅಧ್ಯಕ್ಷೆ ನರಸಮ್ಮ ಮಾಡಗಿರಿ ಆಗಮಿಸಲಿದ್ದಾರೆಂದರು.
ಅತಿಥಿಗಳಾಗಿ ಎನ್.ಗಿರಜಾಶಂಕರ, ಸೇರಿದಂತೆ ಅನೇಕರು ಆಗಮಿಸಲಿದ್ದಾರೆಂದರು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಖ್ಯಾತ ಕಲಾವಿದರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ರಘುಪತಿ ಪೂಜಾರ್, ಈರಣ್ಣ ಹೂಗಾರ್, ಸಿದ್ದಯ್ಯ ಸ್ವಾಮಿ, ರಘು ಕುಮಾರ್ ಸೇರಿದಂತೆ ಅನೇಕರಿದ್ದರು.
Comments
Post a Comment