ಹಿಂದೂ ಮಹಾಗಣಪತಿ ಅದ್ದೂರಿ ವಿಸರ್ಜನಾ ಶೋಭಾಯಾತ್ರೆ. ರಾಯಚೂರು,ಸೆ.27- ವಿಶ್ವ ಹಿಂದೂ ಪರಿಷತ್ ,ಬಜರಂಗದಳ ವತಿಯಿಂದ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾ ಗಣಪತಿಯ ವಿಸರ್ಜನಾ ಶೋಭಾಯಾತ್ರೆ ಅದ್ದೂರಿಯಾಗಿ ನೆರವೇರಿತು.
ಗಂಜ್ ಬಳಿ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾಗಣಪತಿ ವಿಸರ್ಜನಾ ಶೋಭಾಯಾತ್ರೆ ಸಂಜೆ ಪ್ರಾರಂಭಗೊಂಡು ನಗರದ ಪ್ರಮುಖ ಬೀದಿಗಳಾದ ಚಂದ್ರ ಮೌಳೇಶ್ವರ ವೃತ್ತ, ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ, ಶೆಟ್ಟಿ ಭಾವಿ ವೃತ್ತ, ಸರಾಫ್ ಬಜಾರ್, ಕಲ್ಲಾನೆ, ಸೂಪರ್ ಮಾರ್ಕೇಟ್, ಪೇಟ್ಲಾಬುರ್ಜ್, ಗಂಗಾ ನಿವಾಸ ಮಾರ್ಗವಾಗಿ ಖಾಸ್ ಬಾವಿಯಲ್ಲಿ ವಿಸರ್ಜನೆಗೊಂಡಿತು. ಕಿವಿಗಡಚಿಕ್ಕುವ , ಪ್ರಖರ ಬಹು ವರ್ಣದ ಲೈಟ್ ಗಳ ಮಧ್ಯೆ ಯುವಕರು ಜೋಷ್ ನಿಂದ ಕುಣಿದು ಕುಪ್ಪಳಿಸಿದರು.
ಶೋಭಾಯಾತ್ರೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜನ ನೆರೆದು ಶೋಭಾಯಾತ್ರೆ ಕಣ್ತುಂಬಿಕೊಂಡರು. ಗಣೇಶ ಮೂರ್ತಿ ಮುಂಭಾಗದಲ್ಲಿ ಭವ್ಯ ಶ್ರೀ ರಾಮನ ಮೂರ್ತಿ ಶೋಭಾಯಾತ್ರೆಗೆ ಮೆರಗು ನೀಡಿತು. ಅರೆ ಸೇನಾ ಪಡೆ, ಸಶಸ್ತ್ರ ಮೀಸಲು ಪಡೆ, ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟ ಮಾದಯ್ಯ ಸ್ಥಳದಲ್ಲಿ ಉಪಸ್ಥಿತರಿದ್ದರು. ಎಎಸ್ಪಿ,ಡಿಎಸ್ಪಿ , ಸಿಪಿಐ , ಪಿಎಸ್ಐ ಹಾಗೂ ಪೊಲೀಸ್ ಸಿಬ್ಬಂದಿಗಳು ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಂದೋ ಬಸ್ತ್ ಕೈಗೊಂಡಿದ್ದರು.
Comments
Post a Comment