ಕನಿಷ್ಟ ಬೆಂಬಲ ಬೆಲೆ ಕಾನೂನು ಕಟ್ಟು ನಿಟ್ಟಾಗಿ ಜಾರಿಗೊಳಿಸಿ -
ಶರಣಪ್ಪ ಮರಳಿ
.   
                                                                                        ರಾಯಚೂರು,ಸೆ.11- ರಾಜ್ಯ ಸರ್ಕಾರ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ವರ್ತಕರು ಕನಿಷ್ಟ ಬೆಂಬಲ ಬೆಲೆಗಿಂತ ಕಡಿಮೆ ದರ ನಮೂದಿಸದಂತೆ ಕಟ್ಟು ನಿಟ್ಟಿನ ಕಾನೂನು ಜಾರಿಗೊಳಿಸಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಶರಣಪ್ಪ ಮರಳಿ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ  ಪ್ರತಿ ಒಂದು ವಸ್ತುವಿಗೂ ಗರಿಷ್ಟ ಮಾರಾಟ ದರವಿದೆ ಆದರೆ ದೇಶದ ಬೆನ್ನೆಲುಬಾದ ರೈತನು ಬೆಳೆವ ಬೆಳೆಗೆ ನಿಗದಿತ ದರವಿಲ್ಲ ದರ ಕುಸಿತ ವೇಳೆ ಸರ್ಕಾರ ನಿಗದಿಪಡಿಸಿರುವ ಕನಿಷ್ಟ ಬೆಂಬಲ ಬೆಲೆ ಪಾಲನೆಯಾಗದೆ ರೈತರಿಗೆ ಮೋಸವಾಗುತ್ತಿದೆ ಸರ್ಕಾರ ಸ್ವಾಮಿನಾಥನ್ ಆಯೋಗದ ಶಿಫಾರಸು ಜಾರಿಗೋಳಿಸಬೇಕು ಎಂದರು. 

                  ಜಿಲ್ಲಾ ಕೃಷಿ ಇಲಾಖೆಗಳಲ್ಲಿ ವಿವಿಧ ತಾಲೂಕುಗಳಲ್ಲಿ  ಒಟ್ಟು 62 ಸಹಾಯಕ ಹುದ್ದೆಗಳಲ್ಲಿ 42 ಹುದ್ದೆಗಳು ಖಾಲಿಯಾಗಿವೆ ಅವುಗಳನ್ನು ಕೂಡಲೆ ಭರ್ತಿ ಮಾಡಬೇಕೇಂದ ಅವರು ಹಗರಣಗಳಲ್ಲಿ ಮುಳುಗಿದ ಸರ್ಕಾರ ರೈತರ ಕಷ್ಟ ಆಲಿಸಬೇಕೆಂದ ಆಗ್ರಹಿಸಿದರು.                                                                                ಈ ಸಂದರ್ಭದಲ್ಲಿ ವೆಂಕಟೇಶ, ಗೋವರ್ಧನ ರೆಡ್ಡಿ, ತಿಮ್ಮಣ್ಣ ಭೋವಿ,ರಾಮಯ್ಯ, ನರಸಪ್ಪ, ಶಿವು , ಬಸವರಾಜ ಸರ್ಜಾಪುರ ಇನ್ನಿತರರು ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್