ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘದ ೧೦ನೇ ರಾಯಚೂರು ಜಿಲ್ಲಾ ಸಮ್ಮೇಳನದಲ್ಲಿ ಹಲವು ನಿರ್ಣಯ ಅಂಗಿಕಾರ
ರಾಯಚೂರು,ಸೆ.30- ಗ್ರಾಮ ಪಂಚಾಯತಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕರವಸೂಲಿಗಾರ, ಕ್ಲರ್ಕ್ ಕಂ. ಡಾಟಾ ಆಪರೇಟರ್‌ಗಳು, ನೀರಗಂಟಿಗಳು, ಜವಾನ್ ಹಾಗೂ ಸ್ವಚ್ಛತಾಗಾರರನ್ನು ಏಕಕಾಲಕ್ಕೆ ಸರಕಾರಿ ನೌಕರರೆಂದು ಘೋಷಿಸಲುಒತ್ತಾಯಿಸಿ ಮತ್ತು
ಕನಿಷ್ಠವೇತನ ₹. ೩೧,೦೦೦/- ಜಾರಿಗೆ ಆಗ್ರಹಿಸಿ ಅಕ್ಟೋಬರ್-೧, ೨೦೨೪ ರಂದು ಗ್ರಾಮೀಣಾಧಿಕಾರಿಗಳ ಮನೆಗೆ ಚಲೋ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘದ ೧೦ನೇ ರಾಯಚೂರು ಜಿಲ್ಲಾ ಸಮ್ಮೇಳನವು ಸೆ.27ರಂದು ಮಾನವಿಯಲ್ಲಿ ನಡೆದಿದ್ದು, ಈ ಸಮ್ಮೇಳನದಲ್ಲಿ ಈ ಕೆಳಕಂಡ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.
ಗ್ರಾಮ ಪಂಚಾಯತಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕರವಸೂಲಿಗಾರ, ಕ್ಲರ್ಕ್ ಕಂ. ಡಾಟಾ ಆಪರೇಟರ್‌ಗಳು,
ನೀರಗಂಟಿಗಳು, ಜವಾನ್ ಹಾಗೂ ಸ್ವಚ್ಛತಾಗಾರರನ್ನು ಏಕಕಾಲಕ್ಕೆ ಸರಕಾರಿ ನೌಕರರೆಂದು ಘೋಷಿಸಲು ದಿನನಿತ್ಯದ ಬೆಲೆ ಏರಿಕೆ ಅನುಗಣವಾಗಿ ಕನಿಷ್ಠವೇತನ ₹. ೩೧,೦೦೦/- ಜಾರಿಗೆ ಆಗ್ರಹ.
ಗ್ರಾಮ ಪಂಚಾಯತಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನಿವೃತ್ತ ಅಥವಾ ಮರಣ ಹೊಂದಿದರೆ ಅವರಿಗೆ ಪ್ರತಿ
ತಿಂಗಳು ಕನಿಷ್ಟ ₹. ೬೦೦೦/- ಗಳ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕು.
ಗ್ರಾಮ ಪಂಚಾಯತಿಗಳಲ್ಲಿ ಕೆಲಸ ನಿರ್ವಹಿಸುವ ನೌಕರರಿಗೆ ವರ್ಗಾವಣೆ ಅವಕಾಶ ನೀಡಬೇಕು.
ಆದಾಯಕ್ಕೆ ಅನುಗುಣವಾಗಿ ಕರವಸೂಲಿಗಾರರ ಹುದ್ದೆಗಳನ್ನು ನಿಗಧಿಗೊಳಿಸಬೇಕು. ಗ್ರೇಡ್-೧ ಕಾರ್ಯದರ್ಶಿ ಹುದ್ದೆಗಳಿಗೆ ಶೇ. ೧೦೦% ರಷ್ಟು ಸ್ಥಾನಗಳನ್ನು, ಗ್ರೇಡ್-೨ ಕಾರ್ಯದರ್ಶಿಗಳಿಗೆ ಶೇಕಡಾ
೫೦% ರಷ್ಟು ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳಿಗೆ ಶೇ. ೫೦% ರಷ್ಟು ಸ್ಥಾನಗಳನ್ನು ಬಡ್ತಿ ನೀಡಬೇಕು.
ಇವುಗಳಿಗೆ ಅನ್ಯ ಇಲಾಖೆಯವರೆಗೆ ಬಡ್ತಿ ನೀಡಬಾರದು.
ಗ್ರೇಡ್-೧ ಪಂಚಾಯತಿಗಳನ್ನು ಜನಸಂಖ್ಯೆಗೆ ಆಧರಿಸಿ ಗ್ರಾಮ ಪಂಚಾಯತಿಗಳನ್ನು ಮೇಲ್ದರ್ಜೆಗೆ ಏರಿಸಬೇಕು.
ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ಇ-ಹಾಜರಾತಿ ಲೋಪದೋಷಗಳನ್ನು ಪಂಚಾಯತ ತಂತ್ರಾಂಶದಲ್ಲಿ ಸರಿ
ಪಡಿಸುವವರೆಗೆ ಸಿಬ್ಬಂದಿಗಳಿಗೆ ಪೂರ್ಣ ವೇತನ ನೀಡಬೇಕು.
ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ ಎಲ್ಲಾ ವಿಭಾಗದ ಹುದ್ದೆಗಳನ್ನು ತುಂಬಬೇಕು. ಸಂಖ್ಯೆ :
ಕೆಪಿಆರ್‌ಸಿ-ಜಿಪಿಎ-೧೩೪/೨೦೨೪ ದಿ: ೨೬-೦೬-೨೦೨೪ ರ ಆದೇಶವನ್ನು ಹಿಂಪಡೆಯಬೇಕು ಎಂಬ ಬೇಡಿಕೆಗಳು
ಸೇರಿದಂತೆ ಸುಮಾರು ೧೯ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದ್ದು, ಇವುಗಳ ಈಡೇರಿಕೆಗಳಿಗೆ ಒತ್ತಾಯಿಸಿ
ನಾಳೆ ದಿನಾಂಕ ೦೧-೧೦-೨೦೨೪ ರಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ
ಸಚಿವರಾದ ಶ್ರೀ ಪ್ರಿಯಾಂಕ ಖರ್ಗೆ ರವರ ಮನೆಯ ಮುಂದೆ ಪ್ರತಿಭಟನೆ ನಡೆಸಲು ಕಲಬುರಗಿ ಚಲೋ
ಹೋರಾಟ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಗೆ ಜಿಲ್ಲೆಯಿಂದ ಸುಮಾರು ೫೦೦ ಕ್ಕೂ ಹೆಚ್ಚು ನೌಕರರು
ಭಾಗವಹಿಸಲಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಸಂಘಟನೆಯನ್ನು ಜಿಲ್ಲೆಯಲ್ಲಿ ಬಲಿಷ್ಠವಾಗಿ
ಕೊಂಡೊಯ್ಯಲು ಹೊಸ ಸಮಿತಿಯನ್ನು ಆಯ್ಕೆ ಮಾಡಲಾಗಿದೆ. ನೂತನ ಜಿಲ್ಲಾಧ್ಯಕ್ಷರಾಗಿ ಮಲ್ಲಿಕಾರ್ಜುನ
ಮನ್ಸಲಾಪೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆಂಜಿನೇಯ ಸಿರವಾರ, ಖಜಾಂಚಿಯಾಗಿ ಪಾಂಡುರಂಗ ನಾಯಕ
ದೇವದುರ್ಗ, ಉಪಾಧ್ಯಕ್ಷರುಗಳಾಗಿ ಆಂಜಿನೇಯ ಮಾನವಿ, ಜಂಬಣ್ಣ ರಾಯಚೂರು, ಶರಣಬಸವ ಹರವಿ, ಹೊನ್ನಪ್ಪ ನಾಯಕ ದೇವದುರ್ಗ, ಮೌನೇಶ ಮಟ್ಟೂರು ಲಿಂಗಸೂಗೂರು, ಶಿವಪ್ಪ ನಾಯಕ ಪೈದೊಡ್ಡಿ ಜಾರ್ಜ್ ಸಿರವಾರ, ಮೊಹಮ್ಮದ ನೀರಮಾನವಿ. ಸಹ ಕಾರ್ಯದರ್ಶಿಗಳಾಗಿ ಸುರೇಶ ಸ್ವಾಮಿ ರಾಯಚೂರು, ಅಂಬಣ್ಣ ನಾಯಕ ಬ್ಯಾಗವಾಟ, ಶಿವರಾಜ ಸ್ವಾಮಿ ಮಸ್ಕಿ, ಶರಣಬಸವ ಹೊನ್ನಳ್ಳಿ, ಶ್ರೀರಾಮುಲು ಸಿಂಧನೂರು, ಸಂಧ್ಯಾ ರಾಯಚೂರು ಸೇರಿದಂತೆ ಒಟ್ಟು
೧೯ ಜನರ ಸಮಿತಿಯನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ
ಮಲ್ಲಿಕಾರ್ಜುನ ಮನ್ಸಲಾಪೂರು ಕಾರ್ಯದರ್ಶಿ ಆಂಜಿನೇಯ ಸಿರವಾರ ತಿಳಿಸಿದ್ದಾರೆ.
Comments
Post a Comment