ಸೆ.21 ಮತ್ತು 22 ರಂದು ಗೋವಿಂದ ಗಾನ  ಅಂಗವಾಗಿ ವೈವಿಧ್ಯಮಯ ಕಾರ್ಯಕ್ರಮ:                     ದಾಸರು ಇಡಿ ಮನುಕುಲಕ್ಕೆ ಸೀಮಿತ- ಶೇಷಗಿರಿ ದಾಸ್.                 
        ರಾಯಚೂರು,ಸೆ.16- ಹರಿದಾಸ ಸೇವಾ ಇಂಟರ್ ನ್ಯಾಷನಲ್ ಹಾಗೂ ಟಿಟಿಡಿ ದಾಸ ಸಾಹಿತ್ಯ ಪ್ರಾಜೆಕ್ಟ್ ಸಂಯುಕ್ತಾಶ್ರಯದಲ್ಲಿ ಸೆ.21 ಮತ್ತು 22 ರಂದು ಗೋವಿಂದ ಗಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಖ್ಯಾತ ಗಾಯಕ ಹಾಗೂ ಗೋವಿಂದ ಗಾನ ಅಧ್ಯಕ್ಷರಾದ ಶೇಷಗಿರಿ ದಾಸ್ ಹೇಳಿದರು.                     ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದಾಸರ ತವರೂರು, ದಾಸರ ತೊಟ್ಠಿಲು ಎಂದು ಕರೆಸಿಕೊಳ್ಳುವ ರಾಯಚೂರು ಜಿಲ್ಲೆಯಲ್ಲಿ ಅನೇಕ ದಾಸರು ಜನ್ಮ ತಾಳಿದ್ದಾರೆ ಅಂತಹವರಲ್ಲಿ ಅಸ್ಕಿಹಾಳ ಗೋವಿಂದ ದಾಸರು ಸಹ ಒಬ್ಬರು ಅವರು ಕೇವಲ ಬ್ರಾಹ್ಮಣ ಸಮುದಾಯಕ್ಕೆ ಮಾತ್ರ ಸೀಮಿತವಾಗದೆ ಇಡಿ ಮನುಕುಲಕ್ಕೆ ಮೀಸಲಿದ್ದವರು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ದಾಸ ದೀಕ್ಷೆ ನೀಡಿ ಉದ್ಧರಿಸಿದವರು ಎಂದರು.

ಅಸ್ಕಿಹಾಳ ಗೋವಿಂದ ದಾಸರ ಸಂಸ್ಮರಣೆ ಗೋವಿಂದ ಗಾನ ಕಳೆದ ಹತ್ತು ವರ್ಷದಿಂದ ನಡೆಯುತ್ತಿದ್ದು ಕಳೆದ ಎರೆಡು ವರ್ಷ ಕೋವಿಡ್ ಮತ್ತು ಇನ್ನಿತರ ಕಾರಣಕ್ಕೆ ಗೋವಿಂದ ಗಾನ ಆಯೋಜಿಸರಲಿಲ್ಲ ಇದೀಗ ದಶಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆಂದರು.       ಸೆ.21 ರಂದು ಸಂಜೆ 5.30ಕ್ಕೆ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮದ ಸಾನಿಧ್ಯವನ್ನು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ವಹಿಸಲಿದ್ದು. ಉದ್ಘಾಟನೆಯನ್ನು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ನೆರವೇರಿಸಲಿದ್ದು ಮುಖ್ಯ ಅತಿಥಿಗಳಾಗಿ ಅನಂದತೀರ್ಥ ಆಚಾರ ಪಗಡಾಲ, ಸಂಸದ ಜಿ.ಕುಮಾರ ನಾಯಕ, ಶಾಸಕ ಡಾ.ಶಿವರಾಜ ಪಾಟೀಲ್, ವಿಧಾನ ಪರಿಷತ್ ಸದಸ್ಯ ಎ.ವಸಂತ ಕುಮಾರ್,ಮಾಜಿ ಶಾಸಕ ಎ.ಪಾಪಾರೆಡ್ಡಿ, ಆರ್ ಡಿ ಎ ಮಾಜಿ ಅಧ್ಯಕ್ಷ  ಜಗನ್ನಾಥ ಕುಲಕರ್ಣಿ, ಬಿಜೆಪಿ ಮುಖಂಡರಾದ ತ್ರಿವಿಕ್ರಮ ಜೋಷಿ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆಂದ ಅವರು ಅಂದು ಸಂಪ್ರತಿ ಮೋಹನ ರಿಂದ ದಾಸವಾಣಿ ನಡೆಯಲಿದೆ ಎಂದರು. ನಾಡಿನ ಪ್ರಸಿದ್ದ ಸಂಗೀತಗಾರರಾದ ಶೇಷಗಿರಿ ದಾಸ್, ಅನಂತರಾಜ್ ಮಿಸ್ತ್ರಿ,ಸುರೇಖಾ ಹೆಗಡೆ,ರಮೇಶ್ ಕುಲಕರ್ಣಿ, ಹರಿ ಚಂದನಾ ರವರಿಂದ ದಾಸರ ಪದಗಳ ಅಂತ್ಯಾಕ್ಷರಿ ನಡೆಯಲಿದೆ ಎಂದರು. ದಾಸ ಸಾಹಿತ್ಯಕ್ಕೆ ವಿಶೇಷ ಕೂಡುಗೆ ನೀಡಿದ ಸೇಡಂ ಪಟ್ಟಣದ ವಾಸುದೇವ ಅಗ್ನಿಹೋತ್ರಿಯವರಿಗೆ ಸಿರಿ ಗೋವಿಂದ ವಿಠಲ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದರು.  ಸೆ.22 ರಂದು ನಡೆಯುವ ಕಾರ್ಯಕ್ರಮದಲ್ಲಿ ತಿರುಪತಿ ಮಾದರಿಯಲ್ಲಿ ಶ್ರೀ ವೆಂಕಟೇಶ ದೇವರಿಗೆ ಊಂಜಾಲ ಸೇವೆ ಅರ್ಚಕರಿಂದ ಷೋಡಶೋಪಚಾರ ಪೂಜೆ, ವಿಶೇಷ ಪುಷ್ಪಾಲಂಕಾರ , ಪುಷ್ಪಾರ್ಚನೆ, ಮಹಾಮಂಗಳಾರತಿ ನಡೆಯಲಿದೆ ಎಂದರು. ವಿವಿಧ ಭಜನಾ ಮಂಡಳಿಗಳ ಸುಮಾರು 300 ಜನ ಮಹಿಳೆಯರಿಂದ ಸಮೂಹ ಗಾಯನ ನಡೆಯಲಿದ್ದು ನಂತರ ಖ್ಯಾತ ಗಾಯಕರಾದ ಅನಂತ ಕುಲಕರ್ಣಿ ಮತ್ತು ರಾಯಚೂರು ಶೇಷಗಿರಿ ದಾಸ್ ರಿಂದ ದಾಸವಾಣಿ ಜುಗಲ್ ಬಂದಿ ನಡೆಯಲಿದೆ ಎಂದರು. ಸಮಸ್ತ ಜನರು ,ದಾಸ ಸಾಹಿತ್ಯಾಸಕ್ತರು ಪಾಲ್ಗೊಳ್ಳುವಂತೆ ಕೋರಿದರು.            ಈ ಸಂದರ್ಭದಲ್ಲಿ ಮುರಳೀಧರ್ ಕುಲಕರ್ಣಿ, ವಾಸುದೇವ ಪಟವಾರಿ ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್