ಸುಗಮ ಸಂಚಾರಕ್ಕಾಗಿ ಅಸ್ಕಿಹಾಳದಿಂದ ಪವರಗ್ರಿಡ್ ವರೆಗೆ 4 ಕೀ.ಮಿ ರಸ್ತೆ ಕಾಮಗಾರಿಗೆ 24 ಕೋಟಿ ವೆಚ್ಚದಲ್ಲಿ ಚತುಷ್ಪಥ ರಸ್ತೆ ನಿರ್ಮಾಣ - ಸಚಿವ ಎನ್ಎಸ್ ಬೋಸರಾಜು.
ರಾಯಚೂರು.ಅ.30-
ಸುಗಮ ಸಂಚಾರಕ್ಕಾಗಿ ರಾಯಚೂರು ಜಿಲ್ಲಾ ಕೇಂದ್ರವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿರುವ ರಾಯಚೂರು ಲಿಂಗಸಗೂರು ರಸ್ತೆಯ ನಗರದ ಅಸ್ಕಿಹಾಳದಿಂದ ಪವರ್ ಗ್ರಿಡ್ ವರೆಗೆ ಸುಮಾರು 4 ಕಿ.ಮೀ 24 ಕೋಟಿ ವೆಚ್ಚದಲ್ಲಿ ಚತುಸ್ಪಥ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು. ಸಾತ್ ಮೈಲ್ ಹಾಗೂ ಕಲ್ಮಲಾ ವರೆಗೆ ಬಾಕಿ ಉಳಿಯುವ ಕಾಮಗಾರಿಯನ್ನು ಮುಂದಿನ ದಿನಗಳಲ್ಲಿ ಅಭಿವೃದ್ಧಿಪಡಿಸಲು ಪ್ರಯತ್ನಿಸಲಾಗುವುದು ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ ಎಸ್ ಬೋಸರಾಜು ಅವರು ಅಭಿಪ್ರಾಯ ತಿಳಿಸಿದರು.
ರಾಯಚೂರಿನ ಅಸ್ಕಿಹಾಳದಲ್ಲಿ 4 ಕಿಲೋಮೀಟರ್ ಚತುಸ್ಪಥ ರಸ್ತೆ ಕಾಮಗಾರಿಗೆ ಕಿಲ್ಲೆ ಬೃಹನ್ ಮಠದ ಶ್ರೀ ಶಾಂತ ಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳ ಅಮೃತ ಹಸ್ತದೊಂದಿಗೆ ಕೈಜೋಡಿಸಿ ಶಾಸಕರೊಂದಿಗೆ ಜಂಟಿಯಾಗಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ನಂತರ ದಿವ್ಯ ಸಾನಿಧ್ಯ ವಹಿಸಿದ ಶ್ರೀ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ನಾವು ಆ ಪಕ್ಷ, ನೀವು ಈ ಪಕ್ಷ ಎಂದು ಭೇದವನರಿಯದೆ ರಾಯಚೂರು ನಗರದ ಸರ್ವಾಂಗೀಣ ಅಭಿವೃದ್ಧಿಗಾಗಿ ಸೌಹಾರ್ದತೆಯೊಂದಿಗೆ ಕೈಜೋಡಿಸಿದಾಗ ಮಾತ್ರ ಅಭಿವೃದ್ಧಿ ಸಾಧ್ಯವಾಗಲಿದೆ. ಚುನಾವಣೆ ಇದ್ದಾಗ ಮಾತ್ರ ಜನಪ್ರತಿನಿಧಿಗಳು ರಾಜಕಾರಣವನ್ನು ಮಾಡಬೇಕು ತದನಂತರ ಅಭಿವೃದ್ಧಿ ವಿಷಯದಲ್ಲಿ ಒಂದಾಗಿ ಮುಂದೆ ಸಾಗಬೇಕು ಎಂದು ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ನಗರ ಶಾಸಕರಾದ ಡಾ.ಶಿವರಾಜ ಪಾಟೀಲ್ ,ನಗರಸಭೆ ಅಧ್ಯಕ್ಷರಾದ ನರಸಮ್ಮ ನರಸಿಂಹಲು ಮಾಡಗಿರಿ, ಕಾಂಗ್ರೆಸ್ ಯುವ ಮುಖಂಡರಾದ ರವಿ ಬೋಸರಾಜು, ಮೊಹಮ್ಮದ್ ಶಾಲಾಂ, ಹಿರಿಯರಾದ ಜಯಣ್ಣ, ಕೆ ಶಾಂತಪ್ಪ, ಬಷೀರುದ್ದೀನ್, ತಿಮ್ಮಪ್ಪ ನಾಯಕ, ಬಿ ರಮೇಶ್, ರಂಗಸ್ವಾಮಿ ಅಸ್ಕಿಹಾಳ, ಸಾಜಿದ್ ಸಮೀರ್, ಪವನ್ ಎಂ, ವಾಹಿದ್, ಸಣ್ಣ ನರಸ ರೆಡ್ಡಿ ,ಮಲ್ಲೇಶ ಕೊಲಿಮಿ, ಜಯಂತ್ ರಾವ್ ಪತಂಗೆ, ಜಿ ತಿಮ್ಮಾರೆಡ್ಡಿ, ನರಸಿಂಹಲು ಮಾಡಗಿರಿ, ಬಸವರಾಜ ಪಾಟೀಲ್ ಅತ್ತ ನೂರು, ತಿಮ್ಮಪ್ಪ ನಾಯಕ್, ರಂಗಸ್ವಾಮಿ, ಬಸವರಾಜ್, ಹನುಮಂತ ಹೊಸೂರು, ಅಫ್ಜಲ್, ರವಿ ರಾಂಪೂರು, ಪಿಡಬ್ಲ್ಯೂಡಿ ಅಧಿಕಾರಿ ರಮೇಶ್, ಸಹಾಯಕ ಅಭಿಯಂತರರಾದ ರಾಘವೇಂದ್ರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Comments
Post a Comment