ವಿಮಾನ ನಿಲ್ದಾಣ ನಿರ್ಮಾಣ ಸನ್ನಿಹಿತ: ಗ್ರೀನ್ ಫೀಲ್ಡ್ ಏರ್ ಪೋರ್ಟ್ ನಿರ್ಮಾಣಕ್ಕೆ ವಿಮಾನಯಾನ ಇಲಾಖೆ ಗ್ರೀನ್ ಸಿಗ್ನಲ್. ರಾಯಚೂರು,ಅ.23- ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ವಿಮಾನ ನಿಲ್ದಾಣ ನಿರ್ಮಾಣ ಕನಸ್ಸು ನನಸಾಗುವ ಸಮಯ ಸನ್ನಿಹಿತವಾಗಿದೆ. ಕೇಂದ್ರ ವಿಮಾನಯಾನ ಇಲಾಖೆ ಸ್ಥಳ ಒಪ್ಪಿಗೆ(ಸೈಟ್ ಕ್ಲಿಯರೆನ್ಸ್) ನೀಡುವ ಮೂಲಕ ರಾಜ್ಯ ಸರ್ಕಾರಕ್ಕೆ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿದಂತಾಗಿದೆ. ಜಿಲ್ಲೆಯ ಜನರ ವಿಮಾನ ಪ್ರಯಾಣ ಆಸೆ ಮತ್ತೊಮ್ಮೆ ಚಿಗಿರೊಡೆದಂತಾಗಿದೆ. ಯರಮರಸ್ ಬಳಿ ವಿಮಾನ ನಿಲ್ದಾಣಕ್ಕೆ ಸ್ಥಳವನ್ನು ಸಹ ಗುರುತು ಮಾಡಿ ಅನುದಾನ ಸಹ ಮೀಸಲಿಡಲಾಗಿದೆ ಆದರೆ ಇಚ್ಛಾಶಕ್ತಿ ಕೊರತೆ ಮತ್ತು ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಸಮನ್ವಯತೆ ಸಾಧಿಸಿ ಅಗತ್ಯ ಒಪ್ಪಿಗೆ ಸಿಗದಿದ್ದ ಕಾರಣ ವಿಮಾನ ನಿಲ್ದಾಣ ನಿರ್ಮಾಣ ಕೇವಲ ಮಾತಲ್ಲಿ ಹೇಳಲಾಗುತ್ತಿತ್ತು ಆದರೆ ಅದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಗಳು ಆಗಿದ್ದಿಲ್ಲ ಇದೀಗ ಕೇಂದ್ರ ವಿಮಾನಯಾನ ಇಲಾಖೆ ಸಚಿವರಾದ ರಾಮ ಮೋಹನ ನಾಯ್ಡು ರವರು ಸೈಟ್ ಕ್ಲೀಯರೆನ್ಸ್ ಆದೇಶ ನೀಡಿ ರಾಜ್ಯ ಮೂಲಸೌಕರ್ಯ ಇಲಾಖೆಗೆ ಒಪ್ಪಗೆ ಪತ್ರ ನೀಡಿದ್ದಾರೆ .
ರಾಜ್ಯ ಸರ್ಕಾರ ತತಕ್ಷಣ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಬೇಕು ರಾಯಚೂರು ಜನರ ಬಹು ವರ್ಷಗಳ ಬೇಡಿಕೆ ಈಡೇರುವ ಕಾಲ ಸಮೀಪಿಸಿದ್ದು ಸಂಬಂಧಿಸಿದ ಇಲಾಖೆಗಳು ಮತ್ತು ಜನಪ್ರತಿನಿಧಿಗಳ ಸಹಕಾರದಿಂದ ಆದಷ್ಟು ಬೇಗನೆ ವಿಮಾನ ನಿಲ್ದಾಣ ನಿರ್ಮಾಣವಾಗಿ ಜನರು ವಿಮಾನದಲ್ಲಿ ಕುಳಿತು ಪ್ರಯಾಣಿಸುವಂತೆ ಆಗಲಿ ಎಂಬುದು ಜಯಧ್ವಜ ಆಶಯವಾಗಿದೆ. ಅಭಿವೃದ್ಧಿಗೆ ವೇಗ: ನಗರದಲ್ಲಿ ವಿಮಾನ ನಿಲ್ದಾಣವಾಗುವುದರಿಂದ ಜಿಲ್ಲೆಯ ಅಭಿವೃದ್ಧಿಗೆ ವೇಗ ಸಿಕ್ಕಂತಾಗುತ್ತದೆ ಕೈಗಾರಿಕೆ, ವ್ಯಾಪಾರ ವಹಿವಾಟು ವೃದ್ಧಿಗೆ ಸಹಕಾರಿಯಾಗಲಿದ್ದು ಜಿಲ್ಲೆಯ ಚಿತ್ರಣ ಬದಲಾಗಲಿದೆ. ಐತಿಹಾಸಿಕ ಸ್ಥಳ: ಇದೆ ಸ್ಥಳದಲ್ಲಿ ನಮ್ಮ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ರವರ ವಿಮಾನ ತುರ್ತು ಭೂ ಸ್ಪರ್ಶ ಮಾಡಿತ್ತು ಎಂಬ ದಾಖಲೆಯಿದ್ದು ಅದೆ ಸ್ಥಳದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಅತ್ಯಂತ ಮಹತ್ವದ ಕಾರ್ಯವಾಗಿದೆ. ವಿಮಾನ ನಿಲ್ದಾಣ ಕನಸು ನನಸಾಗುವ ಕಾಲ ಬಂದಿದೆ ಕೇಂದ್ರ ವಿಮಾನಯಾನ ಸಚಿವರು ಸ್ಥಳ ಒಪ್ಪಿಗೆ ನೀಡಿದ್ದಾರೆ ಸಿಎಂ , ಡಿಸಿಎಂ ಸೇರಿದಂತೆ ಮೂಲಸೌಕರ್ಯ ಅಭಿವೃದ್ದಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರ ಪ್ರಯತ್ನದಿಂದ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯಕ್ಕೆ ವೇಗ ದೊರೆತಂತಾಗಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜುರವರು ತಿಳಿಸಿದ್ದಾರೆ.
Comments
Post a Comment